Kangana Ranaut : ಬರ್ತ್‌ಡೇ ದಿನ ʼಶತ್ರುಗಳಿಗೆ ಥ್ಯಾಂಕ್ಸ್‌ʼ ಹೇಳಿದ ಬಿಟೌನ್‌ ಕ್ವೀನ್‌ ಕಂಗನಾ..!

Kangana birthday : ಬಿಟೌನ್‌ ನಟಿ ಕಂಗನಾ ರಣಾವತ್‌ ತನ್ನ ನೇರ ಸ್ವಭಾವ ಮತ್ತು ಹೇಳಿಕೆಗಳ ಮೂಲಕ ಆಗಾಗ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ. ಇಂದು ಬಾಲಿವುಡ್‌ ಕ್ವೀನ್‌ಗೆ 36ನೇ ಹುಟ್ಟು ಹಬ್ಬದ ಸಂಭ್ರಮ, ಅದಕ್ಕಾಗಿ ಅವರು, ಅಭಿಮಾನಿಗಳು ಮತ್ತು ಅನುಯಾಯಿಗಳು ಹಾಗೂ 'ಶತ್ರುಗಳಿಗೆ' ಕಂಗನಾ ಧನ್ಯವಾದ ಹೇಳಿದ್ದಾರೆ. 

Written by - Krishna N K | Last Updated : Mar 23, 2023, 04:29 PM IST
  • ಬಿಟೌನ್‌ ನಟಿ ಕಂಗನಾ ರಣಾವತ್‌ ತನ್ನ ನೇರ ಸ್ವಭಾವ ಮತ್ತು ಹೇಳಿಕೆಗಳ ಮೂಲಕ ಆಗಾಗ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ.
  • ಕಂಗನಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳು ಹಾಗೂ 'ಶತ್ರುಗಳಿಗೆ' ಕಂಗನಾ ಧನ್ಯವಾದ ಹೇಳಿದ್ದಾರೆ.
  • ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
 Kangana Ranaut : ಬರ್ತ್‌ಡೇ ದಿನ ʼಶತ್ರುಗಳಿಗೆ ಥ್ಯಾಂಕ್ಸ್‌ʼ ಹೇಳಿದ ಬಿಟೌನ್‌ ಕ್ವೀನ್‌ ಕಂಗನಾ..! title=

Kangana Ranaut Birthday : ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್‌ಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಇದೆ ವೇಳೆ ಕಂಗನಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳು ಹಾಗೂ 'ಶತ್ರುಗಳಿಗೆ' ಕಂಗನಾ ಧನ್ಯವಾದ ಹೇಳಿದ್ದಾರೆ. ಇದೀಗ ಈ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ತಮ್ಮ ಹೇಳಿಕೆಗಳಿಂದ ಯಾರಿಗಾದರು ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ಹೌದು.. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಕಂಗನಾ ತನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ಕುಟುಂಬದವರು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೆ ವೇಳೆ ತನ್ನ ಶತ್ರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ʼನನ್ನ ಶತ್ರುಗಳು ನನಗೆ ಜೀವನದಲ್ಲಿ ವಿಶ್ರಾಂತಿ ನೀಡಲಿಲ್ಲ. ನಾನು ಎಷ್ಟೇ ಯಶಸ್ಸು ಗಳಿಸಿದರೂ, ಅವರು ನನ್ನನ್ನು ಇನ್ನೂ ಹೆಚ್ಚು ಪ್ರಯತ್ನಿಸುವಂತೆ ಮತ್ತು ಹೋರಾಡುವ ವಿಧಾನವನ್ನು ಕಲಿಸಿದರು. ನಾನು ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by Kangana Ranaut (@kanganaranaut)

ಇದನ್ನೂ ಓದಿ: Yash : ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ.. ಮಾತಲ್ಲೇ ಜಡ್ಜ್​ ಮಾಡ್ತಾರೆ..!

ನಟಿ ತನ್ನ ನೇರ ಸ್ವಭಾವ ಮತ್ತು ಹೇಳಿಕೆಗಳ ಮೂಲಕ ಆಗಾಗ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ. ಈ ಕುರಿತು ಮಾತನಾಡಿರುವ ಕಂಗನಾ, ತಮ್ಮ ಹೇಳಿಕೆಗಳಿಂದ ಯಾರಿಗಾದರು ನೋವಾಗಿದ್ದರೆ ಅವರಿಗೆ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ʼಸ್ನೇಹಿತರೇ ನನ್ನ ಸಿದ್ಧಾಂತ, ನನ್ನ ನಡವಳಿಕೆ ಮತ್ತು ಆಲೋಚನೆಗಳು ಸಹ ತುಂಬಾ ಸರಳವಾಗಿವೆ. ಈ ಕಾರಣದಿಂದಾಗಿ, ದೇಶದ ಹಿತಾಸಕ್ತಿ ಬಗ್ಗೆ ಮಾತನಾಡುವಾಗ ನಾನು ಯಾರಿಗಾದರೂ ನೋವುಂಟುಮಾಡಿದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆʼ ಎಂದಿದಾರೆ.

ಗುರುವಾರ ಕಂಗನಾ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಟಿ ಪ್ರಸ್ತುತ ತನ್ನ ಚೊಚ್ಚಲ ನಿರ್ದೇಶನದ ʼಎಮರ್ಜನ್ಸಿʼ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ, ಇದರಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ಚಂದ್ರಮುಖಿ 2 ಸಿನಿಮಾದಲ್ಲಿಯೂ ಸಹ ಕಂಗನಾ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News