BBK 10 : 8 ವರ್ಷಗಳ ಪ್ರೀತಿ... ಲವ್‌ ಬ್ರೇಕಪ್‌ ಕತೆ ಹೇಳಿದ ಕಾರ್ತಿಕ್!

Karthik Mahesh Love Breakup story : ಕಾರ್ತಿಕ್‌ ಮಹೇಶ್‌ ತಮ್ಮ ಲವ್‌ ಬ್ರೇಕಪ್‌ ಕತೆ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರ್ತಿಕ್ ಮಹೇಶ್ ಅವರ ಎಂಟು ವರ್ಷದ ಪ್ರೀತಿ ಮುರಿದುಬಿದ್ದಿತ್ತು. ಇದನ್ನು ನೆನೆದು ಭಾವುಕರಾಗಿದ್ದಾರೆ.   

Last Updated : Oct 26, 2023, 08:18 AM IST
  • ಕಾರ್ತಿಕ್‌ ಮಹೇಶ್‌ ಲವ್‌ ಬ್ರೇಕಪ್‌ ಕತೆ
  • ಎಂಟು ವರ್ಷದ ಪ್ರೀತಿ ಮುರಿದುಬಿದ್ದ ಕಹಿ ನೆನೆಪು
  • ಲವ್‌ ಬ್ರೇಕಪ್‌ ನೆನೆದು ಭಾವುಕರಾದ ಕಾರ್ತಿಕ್‌
BBK 10 : 8 ವರ್ಷಗಳ ಪ್ರೀತಿ... ಲವ್‌ ಬ್ರೇಕಪ್‌ ಕತೆ ಹೇಳಿದ ಕಾರ್ತಿಕ್!  title=

Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಹಲವು ರೀತಿಯ ಟಾಸ್ಕ್ ಹಾಗೂ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಬಿಗ್ ಬಾಸ್ ಸ್ಪರ್ಧಿಗಳಿಗೆಯಾರಿಗಾದರೂ ಕ್ಷಮೆ ಕೇಳುವ ಅವಕಾಶ ನೀಡಲಾಗಿತ್ತು. ಈ ವೇಳೆ ಕಾರ್ತಿಕ್‌ ಮಹೇಶ್‌ ತಮ್ಮ ಲವ್‌ ಬ್ರೇಕಪ್‌ ಕತೆ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರ್ತಿಕ್ ಮಹೇಶ್ ಅವರ ಎಂಟು ವರ್ಷದ ಪ್ರೀತಿ ಮುರಿದುಬಿದ್ದಿತ್ತು. ಇದನ್ನು ನೆನೆದು ಭಾವುಕರಾಗಿದ್ದಾರೆ. 

ಕಾರ್ತಿಕ್ ಅವರು ಬಿಗ್ ಬಾಸ್‌ ಮನೆಯಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಟಾಸ್ಕ್‌ ಜೊತೆ ವ್ಯಕ್ತಿತ್ವದಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಕಾರ್ತಿಕ್‌ ಹೊಂದಿದ್ದಾರೆ. 

ಇದನ್ನೂ ಓದಿ : BBK 10: ದರಿದ್ರ ಅನ್‌ಲಕ್ಕಿ ಬೇಬಿ.. ಮನೆಯವರ ಚುಚ್ಚು ಮಾತು ನೆನೆದು ಕಣ್ಣೀರಿಟ್ಟ ʻನಾಗಿಣಿʼ 

2021ರ ಏಪ್ರಿಲ್‌ನಲ್ಲಿ ಕಾರ್ತಿಕ್‌ ಅವರ ತಂದೆ ತೀರಿ ಹೋದರು. ಇದಾಗಿ ಕೇವಲ 4 ತಿಂಗಳಿಗೆ ಅವರ 8 ವರ್ಷದ ಪ್ರೀತಿ ಮುರಿದು ಬಿದ್ದಿತು. ಲವ್‌ ಬ್ರೇಕಪ್‌ ಆದ ಕೇವಲ ಒಂದು ತಿಂಗಳಲ್ಲಿ ಅವರು 13 ವರ್ಷದಿಂದ ಸಾಕಿದ ಶ್ವಾನ ಸಾವನ್ನಪ್ಪಿತು ಎಂದು ಕಹಿ ಘಟನೆಯನ್ನು ನೆನೆದಿದ್ದಾರೆ. ಆ ಬಳಿಕ ಕಾರ್ತಿಕ್‌ ಹೊಟ್ಟೆಯಲ್ಲಿ ಅಲ್ಸರ್ ಆಗಿತ್ತಂತೆ. 

ಅಷ್ಟು ವರ್ಷದ ಪ್ರೀತಿ ಕಳೆದುಕೊಂಡ ಕಾರ್ತಿಕ್‌ ಆ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ದು ಪ್ರೀತಿ ಬ್ರೇಕಪ್‌ ಆಗಲು ಇಬ್ಬರೂ ಸಮಾನರಾಗಿ ಕಾರಣರು. ಆದರೆ ಈ ಲವ್ ಬ್ರೇಕಪ್ ಆಗೋಕೆ ಹೆಚ್ಚು ಕಾರಣನಾದವ ನಾನು. ಅವಳ ಕೆನ್ನೆಗೆ ಹೊಡೆದು ಬಿಟ್ಟೆ. ಆ ವಿಷಯಕ್ಕೆ ಕ್ಷಮೆ ಕೇಳಿದೆ. ಆದರೆ ಆ ಕ್ಷಮೆಯನ್ನು ನಾನು ಮನಸ್ಸಿಂದ ಹೇಳಿದ್ದು ಅಂತ ಆಕೆಗೆ ಅನಿಸಲಿಲ್ಲ. ನಾನು ಮನಸಾರೆ ಕ್ಷಮೆ ಕೇಳುತ್ತಿರುವೆ ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವಿಕ್ಷಿಸಬಹುದು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಫೈರ್ ಕ್ಯಾಂಪ್ : ತಣ್ಣನೆಯ ರಾತ್ರಿ.. ಬಿಸಿಯಾದ ಕಂಬನಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News