BBK 10: ದರಿದ್ರ ಅನ್‌ಲಕ್ಕಿ ಬೇಬಿ.. ಮನೆಯವರ ಚುಚ್ಚು ಮಾತು ನೆನೆದು ಕಣ್ಣೀರಿಟ್ಟ ʻನಾಗಿಣಿʼ

BBK 10 Namratha Gowda : ಬ್ಯಾಲೆನ್ಸ್‌ ಆಗಿ ಆಟವನ್ನು ಆಡುತ್ತಿರುವ ನಮ್ರತಾ ಗೌಡ ಅವರ ಬದುಕಿನ ಕತೆ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ನಮ್ರತಾ ಗೌಡ ಅವರು ಬದುಕಿನುದ್ದಕ್ಕೂ ಹಲವು ಚುಚ್ಚು ಮಾತುಗಳನ್ನು ಸಹಿಸಿಕೊಂಡವರು. 

Written by - Chetana Devarmani | Last Updated : Oct 25, 2023, 12:42 PM IST
  • ಕಿರುತೆರೆ ಲೋಕದ ಖ್ಯಾತ ನಟಿ ನಮ್ರತಾ ಗೌಡ
  • ಬದುಕಿನುದ್ದಕ್ಕೂ ಹಲವು ಚುಚ್ಚು ಮಾತು
  • ಮನೆಯವರ ಚುಚ್ಚು ಮಾತು ನೆನೆದು ಕಣ್ಣೀರಿಟ್ಟ ನಮ್ರತಾ
BBK 10: ದರಿದ್ರ ಅನ್‌ಲಕ್ಕಿ ಬೇಬಿ.. ಮನೆಯವರ ಚುಚ್ಚು ಮಾತು ನೆನೆದು ಕಣ್ಣೀರಿಟ್ಟ ʻನಾಗಿಣಿʼ  title=

Namratha Gowda Life Journey : ಕಿರುತೆರೆ ಲೋಕದ ಖ್ಯಾತ ನಟಿ ನಮ್ರತಾ ಗೌಡ. ಬಿಗ್‌ ಬಾಸ್‌ ಕನ್ನಡ 10 ರ ಮೊದಲ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟರು. ಬ್ಯಾಲೆನ್ಸ್‌ ಆಗಿ ಆಟವನ್ನು ಆಡುತ್ತಿರುವ ನಮ್ರತಾ ಗೌಡ ಅವರ ಬದುಕಿನ ಕತೆ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ನಾಗಿಣಿ 2 ಧಾರಾವಾಹಿಯಲ್ಲಿ ನಾಗಿಣಿ ಪಾತ್ರದ  ಮೂಲಕ ಫೇಮಸ್‌ ಆದ ನಮ್ರತಾ ಜೀವನದ ದಾರಿ ಅಷ್ಟು ಸುಲಭವಾಗಿರಲಿಲ್ಲ. 

ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬಂದ ನಮ್ರತಾ ಗೌಡ ಅವರು ಬದುಕಿನುದ್ದಕ್ಕೂ ಹಲವು ಚುಚ್ಚು ಮಾತುಗಳನ್ನು ಸಹಿಸಿಕೊಂಡವರು. ಹೆಣ್ಣು ಮಗುವೆಂಬ ಕಾರಣಕ್ಕೆ ಫ್ಯಾಮಿಲಿ ಈಗಲೂ ನಮ್ರತಾ ಅವರನ್ನು ಸೇರಲ್ಲ. ಅನ್‌ಲಕ್ಕಿ ಬೇಬಿ ಎಂದೇ ಮನೆಯವರು ಹೀಯಾಳಿಸುತ್ತಾರೆ. ದರಿದ್ರ ಎಂದು ದೂರಿದ ಮಾತುಗಳನ್ನು ನೆನೆದು ಬಿಗ್‌ ಬಾಸ್‌ ಮನೆಯಲ್ಲಿ ನಮ್ರತಾ ಕಣ್ಣೀರು ಹಾಕಿದ್ದಾರೆ.

 

 

ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಇರಬೇಕಾ? ಡ್ರೋನ್ ಪ್ರತಾಪ್ ಇರಬೇಕು? 

ಹೆಣ್ಣು ಮಗು, ದರಿದ್ರ, ದುರದೃಷ್ಟ ಅಂತ ಇವತ್ತಿಗೂ ಮನೆಯವರು ನನ್ನ ಒಪ್ಪಿಕೊಂಡಿಲ್ಲ ಎಂದು ನಮ್ರತಾ ಅಳುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ. ನಗುತ್ತಾ ಬೋಲ್ಡ್‌ ಆಗಿರುವ ನಮ್ರತಾ ಎದೆಯಲ್ಲಿ ಇಂಥದ್ದೊಂದು ನೋವಿಗೆ ಎಂಬುದನ್ನ ತಿಳಿದು ಅವರ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ವಿಜಯದಶಮಿ ಸಂಭ್ರಮದ ಬಳಿಕ ಮನೆಮಂದಿ ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಭಾಗ್ಯಶ್ರೀ, ನಮ್ರತಾ ಗೌಡ, ಸಿರಿ, ಕಾರ್ತಿಕ್ ಮಹೇಶ್, ಪ್ರತಾಪ್ ಎಲ್ಲರೂ ತಮ್ಮ ತಮ್ಮ ಜೀವನದ ಕಹಿ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ. 

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

ಇದನ್ನೂ ಓದಿ : 9 ಸ್ಪರ್ಧಿಗಳಲ್ಲಿ ಈ ವಾರ ಯಾರನ್ನ ರಕ್ಷಣೆ ಮಾಡ್ತೀರಾ.. ಯಾರನ್ನ ಹೊರಗೆ ಕಳಿಸ್ತೀರಾ..? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News