9 ಸ್ಪರ್ಧಿಗಳಲ್ಲಿ ಈ ವಾರ ಯಾರನ್ನ ರಕ್ಷಣೆ ಮಾಡ್ತೀರಾ.. ಯಾರನ್ನ ಹೊರಗೆ ಕಳಿಸ್ತೀರಾ..? 

BBK 10 : ದಿನಗಳು ಉರುಳುತ್ತಿವೆ. ವಾರಾಂತ್ಯ ಬಹುಬೇಗ ಬರುತ್ತಿದೆ. ಬಿಗ್‌ ಬಾಸ್‌ ಸ್ಪರ್ಧಿಗಳ ಎದೆಯಲ್ಲಿ ಈಗ ನಡುಕ ಶುರುವಾಗಿದೆ. ದೊಡ್ಮನೆ ಪ್ರವೇಶಿಸಿರುವ 17 ಜನರ ಪೈಕಿ ಈಗಾಗಲೇ 2 ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಸಧ್ಯ 9 ಜನ ಎಲಿಮಿನೇಷನ್‌ಗೆ ನಾಮಿನೇಟ್‌ ಆಗಿದ್ದಾರೆ. 

Written by - Krishna N K | Last Updated : Oct 24, 2023, 03:19 PM IST
  • ಬಿಗ್‌ ಬಾಸ್‌ ಸ್ಪರ್ಧಿಗಳ ಎದೆಯಲ್ಲಿ ಈಗ ನಡುಕ ಶುರುವಾಗಿದೆ.
  • ಈಗಾಗಲೇ 2 ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ.
  • ಸಧ್ಯ 9 ಜನ ಎಲಿಮಿನೇಷನ್‌ಗೆ ನಾಮಿನೇಟ್‌ ಆಗಿದ್ದಾರೆ.
9 ಸ್ಪರ್ಧಿಗಳಲ್ಲಿ ಈ ವಾರ ಯಾರನ್ನ ರಕ್ಷಣೆ ಮಾಡ್ತೀರಾ.. ಯಾರನ್ನ ಹೊರಗೆ ಕಳಿಸ್ತೀರಾ..?  title=

Bigg Boss Season 10 : ಬಿಗ್‌ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾದಾಗಿನಿಂದ ಕಿರುತೆರೆ ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಬಿಗ್‌ಹೌಸ್‌ನಲ್ಲಿ ಏನಾಗುತ್ತಿದೆ ಎಂಬ ವಿಚಾರ ತಿಳಿದುಕೊಳ್ಳುವ ಕಾತುರ. ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಲಿ ಅಂತ ಟಿವಿ ಮುಂದೆ ಕುಳಿತು ಕ್ಯೂರಿಯಾಸಿಟಿಯಿಂದ ಶೋ ನೋಡುತ್ತಿದ್ದಾರೆ. ಸ್ಪರ್ಧಿಗಳು ಸಹ ಅಷ್ಟೇ ಗೆಲ್ಲಲೇಬೇಕು ಎಂಬ ಹಠದಿಂದ ಟಾಸ್ಕ್‌ನಲ್ಲಿ ಭಾಗವಹಿಸಿಸುತ್ತಿದ್ದಾರೆ. 

ಹೌದು.. ಬಿಗ್‌ ಬಾಸ್‌ ಶುರುವಾಗಿ ಎರಡು ವಾರ ಕಳೆದಿದೆ. ದೊಡ್ಮನೆ ಯಿಂದ ಈ ವಾರ ಗೌರಿಶ್‌ ಅಕ್ಕಿ ಹೊರ ಹೋಗಿದ್ದಾರೆ. ಇದಕ್ಕೂ ಮುನ್ನ ಸ್ನೇಕ್‌ ಶ್ಯಾಮ್‌ ಎಲಿಮಿನೇಟ್‌ ಆಗಿದ್ದರು. ಸಧ್ಯ 9 ಜನರ ಮೇಲೆ ತೂಗು ಕತ್ತಿ ಅಲ್ಲಾಡುತ್ತಿದೆ. ಸಧ್ಯ ನಾಮಿನೇಟ್‌ ಆಗಿರುವ ಒಂಭತ್ತು ಜನರಲ್ಲಿ ಯಾರು ಮನೆಯಿಂದ ಹೊರ ಹೋಗ್ತಾರೆ, ಯಾರು ಸೇಫ್‌ ಅಂತ ನೋಡೋಣ..

ಇದನ್ನೂ ಓದಿ: ಬಿಗ್ ಬಾಸ್‌ 10: ಎರಡನೇ ವಾರ ಎಲಿಮಿನೇಟ್‌ ಆಗ್ತಿರುವ ಕಂಟೆಸ್ಟಂಟ್‌ ಇವರು.!

ಈ ಬಾರಿ ಭಾಗ್ಯಶ್ರೀ, ಡ್ರೋನ್‌ ಪ್ರತಾಪ್‌, ಕಾರ್ತಿಕ್‌, ತನಿಷಾ, ಮೈಕಲ್‌, ವಿನಯ್‌, ಈಶಾನಿ, ನೀತು, ಸ್ನೇಹಿತ್‌ ಎಲಿಮಿನೇಷನ್‌ ಲಿಸ್ಟ್‌ನಲ್ಲಿದ್ದಾರೆ. ಈ 9 ಜನರಲ್ಲಿ ಈ ವಾರಾಂತ್ಯಕ್ಕೆ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಿದೆ. ಅಲ್ಲದೆ ವರ್ತೂರ್‌ ಸಂತೋಷ್‌ ಹುಲಿ ಉಗುರು ಧರಿಸಿದ ಹಿನ್ನೆಲೆ ಬಂದನವಾಗಿದೆ. ಈಗಾಗಿ ಸಧ್ಯ ಮನೆಯಲ್ಲಿ 14 ಸ್ಪರ್ಧಿಗಳು ಉಳಿದಿದ್ದಾರೆ.

ಕಳೆದ ವಾರ ಭಾಗ್ಯಶ್ರೀ ಮನೆಯಿಂದ ಹೊರ ಹೊಗ್ತಾರೆ ಅಂತ ಕನ್ಫರ್ಮ್‌ ಮಾಡಲಾಗಿತ್ತು. ಅದ್ರೆ ಅವರು ಸೇಫ್‌ ಆಗಿದ್ದು, ಗೌರಿ ಅಕ್ಕಿ ಮನೆಯಿಂದ ಹೊರ ಹೋಗಿದ್ದಾರೆ. ಇನ್ನು ಈ ವಾರದ ಎಲಿಮಿನೇಷನ್‌ ಬಗ್ಗೆ ನೋಡೋದಾದ್ರೆ ಭಾಗ್ಯಶ್ರೀ ಉತ್ತಮ ಆಟ ತೋರಿದ್ರೆ ಮತ್ತೆ ಸೆಫ್‌ ಆಗ್ತಾರೆ. ಅವರನ್ನು ಬಿಟ್ರೆ, ಮೈಕಲ್‌ ಇಲ್ಲವೇ ನೀತು ವನಜಾಕ್ಷಿಗೆ ವಾರದ ಕತೆ ಕಿಚ್ಚನ ಜೊತೆ ಕಂಠಕವಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News