BBK 10: ಕಾರ್ತಿಕ್‌ಗೆ ಹೆಡ್‌ ಶಾಟ್‌: ಪ್ರಬಲ ಸ್ಪರ್ಧಿಯನೇ ತಂಡದಿಂದ ಹೊರಯಿಟ್ಟ ಡ್ರೋನ್‌ ಪ್ರತಾಪ್!

Bigg Boss Kannada: ಬಿಗ್‌ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡ ಕಾರ್ತಿಕ್ ಕೃತಜ್ಞತಾ ಭಾವದಿಂದ ಡ್ರೋನ್‌ ಪ್ರತಾಪ್ ತಂಡ ಸೇರಿದರೇ, ಈತನನ್ನೇ ತಂಡದಿಂದ ಹೊರಗಿಟ್ಟಿದ್ದಾರೆ.   

Written by - Zee Kannada News Desk | Last Updated : Nov 29, 2023, 10:49 AM IST
  • ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಟಾಸ್ಕ್‌ಗಳನ್ನು ಗೆದ್ದು ಮುಂದಿನ ಕ್ಯಾಪ್ಟನ್ ಆಗುವ ಸ್ಪರ್ಧಿಗೆ ದ್ವಿಪಟ್ಟು ಹಾಗೂ ವಿಶೇಷ ಅಧಿಕಾರಗಳನ್ನು ನೀಡಲು ಬಿಗ್‌ಬಾಸ್‌ ನಿರ್ಧರಿಸಿದ್ದರು.
  • ಎರಡು ತಂಡಗಳಿಗೆ ಡ್ರೋನ್ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್‌ ಆಗಿ ಆಯ್ಕೆಯಾದರು.
  • ಡ್ರೋನ್ ಪ್ರತಾಪ್ ತಂಡದಲ್ಲಿ ಏಳು ಜನ ಇದರೇ, ಮೈಕಲ್‌ ನೇತೃತ್ವದ ತಂಡದಲ್ಲಿ 6 ಜನ ಇದ್ದರು.
BBK 10: ಕಾರ್ತಿಕ್‌ಗೆ ಹೆಡ್‌ ಶಾಟ್‌: ಪ್ರಬಲ ಸ್ಪರ್ಧಿಯನೇ ತಂಡದಿಂದ ಹೊರಯಿಟ್ಟ ಡ್ರೋನ್‌ ಪ್ರತಾಪ್!  title=

Karthik Is Out From Drone Prathap Team: ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಟಾಸ್ಕ್‌ಗಳನ್ನು ಗೆದ್ದು ಮುಂದಿನ ಕ್ಯಾಪ್ಟನ್ ಆಗುವ ಸ್ಪರ್ಧಿಗೆ ದ್ವಿಪಟ್ಟು ಹಾಗೂ ವಿಶೇಷ ಅಧಿಕಾರಗಳನ್ನು ನೀಡಲು ಬಿಗ್‌ಬಾಸ್‌ ನಿರ್ಧರಿಸಿದ್ದು, ಈ ವಾರದ ಟಾಸ್ಕ್‌ಗಳಲ್ಲಿ ತಂಡಗಳ ಗೆಲುವು ಹಾಗೂ ಸ್ಪರ್ಧಿಗಳ ವೈಯಕ್ತಿಕ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ ಎಂದು ಬಿಗ್‌ಬಾಸ್‌ ಎರಡು ತಂಡಗಳ ರಚನೆಗೂ ಮುನ್ನವೇ ಘೋಷಿಸಿದ್ದರು. ಈ ವಾರದ ಟಾಸ್ಕ್‌ಗಳಿಗೆ ಎರಡು ತಂಡಗಳ ಅಗತ್ಯವಿದ್ದು, ತಂಡಗಳ ನಾಯಕರಾಗಲು ಅರ್ಹತೆ ಇರುವ ಇಬ್ಬರನ್ನು ಎಲ್ಲರೂ ಒಮ್ಮತದಿಂದ ಆರಿಸಬೇಕಿತ್ತು.

ಎರಡು ತಂಡಗಳಿಗೆ ಡ್ರೋನ್ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದು, ಬಳಿಕ ಮೈಕಲ್ ನೇತೃತ್ವದ ತಂಡದಲ್ಲಿ ಸ್ನೇಹಿತ್, ವಿನಯ್, ಅವಿನಾಶ್ ಶೆಟ್ಟಿ, ತನಿಷಾ, ಸಂಗೀತಾ ಇದ್ದರೇ ಡ್ರೋನ್ ಪ್ರತಾಪ್ ತಂಡದಲ್ಲಿ ನಮ್ರತಾ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತು, ಪವಿ ಪೂವಪ್ಪ, ಸಿರಿ ಇದ್ದರು. ಈ ವಾರದ ಟಾಸ್ಕ್‌ಗಳನ್ನು ಆಡಲು ಎರಡು ತಂಡಗಳಲ್ಲಿ ಸಮಾನ ಸಂಖ್ಯೆಯ ಸದಸ್ಯರು (6) ಅವಶ್ಯಕವಿದ್ದು, ಹೀಗಾಗಿ 7 ಜನ ಹೊಂದಿದ್ದ ಪ್ರತಾಪ್‌ ತಂಡದಿಂದ ಒಬ್ಬ ದುರ್ಬಲ ಸದಸ್ಯನನ್ನ ಆಟದಿಂದ ಹೊರಗಿಡಬೇಕಿತ್ತು. ಇದನ್ನ ತಂಡದಲ್ಲಿ ಚರ್ಚಿಸಿ ಡ್ರೋನ್ ಪ್ರತಾಪ್ ನಿರ್ಧರಿಸಬೇಕಿತ್ತು.

ಇದನ್ನೂ ಓದಿ: ಬಿಗ್‌ಬಾಸ್‌ ಸೇರಿದ ಬೆನ್ನಲ್ಲೇ ಪವಿ ಪೂವಪ್ಪ ಫೋಟೋಸ್‌ ವೈರಲ್‌..! ನೋಡಿದ್ರೆ ಶಾಕ್‌ ಆಗ್ತೀರಾ..

ಡ್ರೋನ್ ಪ್ರತಾಪ್ ತಂಡದಲ್ಲಿ ಏಳು ಜನ ಇದರೇ, ಮೈಕಲ್‌ ನೇತೃತ್ವದ ತಂಡದಲ್ಲಿ 6 ಜನ ಇದ್ದರು. ಎರಡೂ ತಂಡಗಳಲ್ಲಿ ತಲಾ 6 ಸದಸ್ಯರು ಅವಶ್ಯಕವಾಗಿ ಇರಬೇಕಿದ್ದರಿಂದ ಒಬ್ಬ ದುರ್ಬಲ ಸದಸ್ಯನನ್ನು ತಂಡದಿಂದ ಹೊರಗೆ ಇಡುವಂತೆ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್‌ ಸೂಚಿಸಿದರು. ಆಗ ‘ದುರ್ಬಲ’ ಅಂತ ಹೇಳದೆ ಬೇರೆ ಕಾರಣ ಕೊಟ್ಟು ಕಾರ್ತಿಕ್ ರನ್ನ ತಮ್ಮ ತಂಡದಿಂದ ಡ್ರೋನ್ ಪ್ರತಾಪ್‌ ಹೊರ ತಳ್ಳಿದಕ್ಕೆ, "ಇದು ಹೆಡ್‌ ಶಾಟ್‌" ಎಂದು ಕಾರ್ತಿಕ್‌ಗೆ ವಿನಯ್‌ ನೇರವಾಗಿ ಹೇಳಿದ್ದಾರೆ.

ಈ ಹಿಂದೆ ಮೊದಲ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್‌ ತಂಡ ಸೋಲು ಅನುಭವಿಸಿದ್ದು, ಮೈಕಲ್ ತಂಡ ಗೆಲುವು ಸಾಧಿಸಿತು. ಹೀಗಾಗಿ, ಡ್ರೋನ್ ಪ್ರತಾಪ್‌ ತಂಡದಿಂದ ಒಬ್ಬರನ್ನ ಕ್ಯಾಪ್ಟನ್ ರೇಸ್‌ನಿಂದ ಮೈಕಲ್ ತಂಡ ಹೊರಗಿಡಬೇಕಿದ್ದಾಗ ಒಮ್ಮತದಿಂದ ಡ್ರೋನ್ ಪ್ರತಾಪ್ ಹೆಸರನ್ನ ತಗೊಂಡರು. ಕಳೆದ ವಾರ ಟಾಸ್ಕ್ ವೇಳೆ ಡ್ರೋನ್ ಪ್ರತಾಪ್‌ಗೆ ಕಾರ್ತಿಕ್ ‘ಹೋಗೋಲೇ’ ಎಂದಿದ್ದರು. ಉಸ್ತುವಾರಿ ಮಾಡುತ್ತಿದ್ದ ಡ್ರೋನ್ ಪ್ರತಾಪ್ ಮೇಲೆ ಕಾರ್ತಿಕ್ ಕೂಗಾಡಿದ್ದರು. ಈ ಕಾರಣದಿಂದಾನೇ ಕಾರ್ತಿಕ್‌ರನ್ನ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗಿಡಲು ಡ್ರೋನ್ ಪ್ರತಾಪ್ ರಿವೆಂಜ್ ಗೇಮ್ ಆಡಿದ್ರಾ? ನಿಯತ್ತಿನಿಂದ ತಂಡಕ್ಕೆ ಬಂದ ಕಾರ್ತಿಕ್‌ಗೆ ಬೆಲೆ ಇಲ್ವಾ? ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News