B'day Special: ಟಿವಿ ಕಾರ್ಯಕ್ರಮದಲ್ಲಿ ತಾಯಿ ಧ್ವನಿ ಕೇಳಿದಾಗ ಅಮಿತಾಭ್ ವೀಡಿಯೊ

ಹುಟ್ಟು ಹಬ್ಬದ ಸಂದರ್ಭದಲ್ಲಿ ಟಿವಿ ಕಾರ್ಯಕ್ರಮದಲ್ಲಿ ಒಂದು ಸಣ್ಣ ವಿಡಿಯೋ ತುಣುಕನ್ನು ತೋರಿಸಿದಾಗ ಭಾವೋದ್ರೆಕರಾದ ಅಮಿತಾಭ್.  

Last Updated : Oct 11, 2018, 03:09 PM IST
B'day Special: ಟಿವಿ ಕಾರ್ಯಕ್ರಮದಲ್ಲಿ ತಾಯಿ ಧ್ವನಿ ಕೇಳಿದಾಗ ಅಮಿತಾಭ್ ವೀಡಿಯೊ title=
Pic: Facebook Sony TV

ಮುಂಬೈ: ಗುರುವಾರ (ಅಕ್ಟೋಬರ್ 11) ಅಮಿತಾಭ್ ಬಚ್ಚನ್ ಹುಟ್ಟುಹಬ್ಬ. ದಶಕಗಳ ಸೂಪರ್ ಹಿರೋ ಬಿಗ್ ಬಿ 76ನೇ ಹುಟ್ಟುಹಬ್ಬವನ್ನು ಆಚರಿಸಲು ಅನೇಕ ಸಿದ್ಧತೆಗಳು ನಡೆಯುತ್ತಿವೆ. ಬಿಗ್ ಬಿ ಪ್ರಸ್ತುತ ಸೋನಿ ಟಿವಿ ಶೋ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಹುಟ್ಟುಹಬ್ಬದ ಮೊದಲು ದಿನ ಅಂದರೆ ಬುಧವಾರ, ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) ಬಿಗ್ ಬಿ ಹುಟ್ಟುಹಬ್ಬಕ್ಕಾಗಿ ವಿಶಿಷ್ಟವಾದ ಉಡುಗೊರೆಯನ್ನು ನೀಡಿತು. ಆ ವಿಡಿಯೋ ಬಿಗ್ ಬಿ ಅನ್ನು ಬಹಳ ಭಾವೋದ್ರೆಕರನ್ನಾಗಿ ಮಾಡಿತು. ಆ ಉಡುಗೊರೆಯಲ್ಲಿ ಏನಿತ್ತು? ಬಿಗ್ ಬಿ ಗೆ ಆ ಉಡುಗೊರೆ ಬಹಳ ಅಮೂಲ್ಯವಾದದ್ದು ಏಕೆ ಎಂದು ನಾವು ನಿಮಗೆ ಹೇಳುತ್ತೇವೆ...

ವಾಸ್ತವವಾಗಿ ಬಿಗ್ ಬಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರ ಕನಸು ಮತ್ತು ಜನರ ದೃಷ್ಟಿಯಲ್ಲಿ ಸಂತೋಷ ಹೊಳಪನ್ನು ನೀಡಿ ಕೆಲವೊಮ್ಮೆ ಆನಂದ ಭಾಷ್ಪ ತರಿಸುತ್ತದೆ. ಅಮಿತಾಭ್ ಬಚ್ಚನ್ ಜನರಿಗೆ ಬಹಳಷ್ಟು ಪ್ರೀತಿಯನ್ನು ನೀಡಿದ್ದಾರೆ. ಅವರು ಜನರನ್ನು ಮನರಂಜಿಸುವುದರ ಜೊತೆಗೆ ಹಲವರಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಕೆಬಿಸಿಯ ನಿರ್ಮಾಪಕ ಬಿಗ್ ಬಿಗೆ ಉಡುಗೊರೆಯೊಂದನ್ನು ನೀಡಿದರು, ಉಡುಗೊರೆಯಾಗಿ ಆ  ಒಂದು ಸಣ್ಣ ವಿಡಿಯೋ ತುಣುಕನ್ನು ತೋರಿಸಿದಾಗ ಅಮಿತಾಭ್ ಕಣ್ಣುಗಳು ಒದ್ದೆಯಾದವು.

ವಾಸ್ತವವಾಗಿ ಕಾರ್ಯಕ್ರಮದಲ್ಲಿ ಬಿಗ್ ಬಿ ಗೆ ಸಣ್ಣ ವಿಡಿಯೋ ತುಣುಕನ್ನು ತೋರಿಸಲಾಯಿತು. ಇದರಲ್ಲಿ ಬಿಗ್ ಬಿ ಬಾಲ್ಯವನ್ನು ಕಳೆದ ಅಲಹಾಬಾದ್ ಬೀದಿಗಳನ್ನು ತೋರಿಸಲಾಗಿದೆ. ಇದಲ್ಲದೆ, ಬಿಗ್ ಬಿ ಅವರ ತಂದೆ ಡಾಕ್ಟರ್ ಹರಿವನ್ಶ್ ರಾಯ್ ಬಚ್ಚನ್ ಅವರು ಬರೆದಿದ್ದ ಕೆಲವು ಸಾಲುಗಳು ಅವರ ತಾಯಿ ಧ್ವನಿಯಲ್ಲಿ ಸಂದೇಶ ಬಿಗ್ ಬಿ ಅನ್ನು ಭಾವೋದ್ರಿಕ್ತರನ್ನಾಗಿ ಮಾಡಿತು. ನೀವು ಸಹ ವೀಡಿಯೊವನ್ನು ನೋಡಿ...

ಬಿಗ್ ಬಿ ಏನನ್ನೂ ಬಹಿರಂಗಗೊಳಿಸಲಿಲ್ಲ. ಆದರೆ ಅವರ ಕಣ್ಣೀರನ್ನು ಅವರು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಈ ವಿಶಿಷ್ಟ ಕೊಡುಗೆಗಾಗಿ, ಬಿಗ್ ಬೀ ಭಾವನಾತ್ಮಕ ಮತ್ತು ಕೇವಲ ಧನ್ಯವಾದ ತಿಳಿಸಿದರು. ಮೂಲಗಳ ಪ್ರಕಾರ, ಅಮಿತಾಭ್ ಬಚ್ಚನ್ ಈ ಉಡುಗೊರೆಯನ್ನು ನೋಡಿ ತುಂಬಾ ಭಾವೋದ್ರಿಕ್ತರಾಗಿದ್ದರು ಮತ್ತು ಅಷ್ಟೇ ಅಲ್ಲ ಸೆಟ್ ನಲ್ಲಿದ್ದವರೂ  ಭಾವೋದ್ರಿಕ್ತರಾಗಿ ಕಂಡು ಬಂದರು ಎನ್ನಲಾಗಿದೆ.

Trending News