ಬೈಕಾಟ್‌ ಭೇದಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ ಬಾಲಿವುಡ್‌ ʼಬ್ರಹ್ಮಾಸ್ತ್ರʼ

ಸತತವಾಗಿ ಬೈಕಾಟ್‌ನಿಂದ ಬೇಸತ್ತಿದ್ದ ಬಾಲಿವುಡ್‌ಗೆ ʼಬ್ರಹ್ಮಾಸ್ತ್ರʼ ಜೀವ ನೀಡಿದ್ದು, ಮೊದಲ ದಿನವೇ ಚಿತ್ರ ಬರೋಬ್ಬರಿ 35-36 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪ್ರೇಕ್ಷಕ ಮಹಾಶಯನ ಮನಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೆನಿಸುತ್ತದೆ.

Written by - Krishna N K | Last Updated : Sep 10, 2022, 01:34 PM IST
  • ಬೈಕಾಟ್‌ನಿಂದ ಬೇಸತ್ತಿದ್ದ ಬಾಲಿವುಡ್‌ಗೆ ಜೀವ ನೀಡಿದ ʼಬ್ರಹ್ಮಾಸ್ತ್ರʼ
  • ಮೊದಲ ದಿನವೇ ಚಿತ್ರ ಬರೋಬ್ಬರಿ 35-36 ಕೋಟಿ ರೂ. ಗಳಿಕೆ
  • ಪ್ರೇಕ್ಷಕ ಮಹಾಶಯನ ಮನಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿ
ಬೈಕಾಟ್‌ ಭೇದಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ ಬಾಲಿವುಡ್‌ ʼಬ್ರಹ್ಮಾಸ್ತ್ರʼ title=

ಬೆಂಗಳೂರು: ಸತತವಾಗಿ ಬೈಕಾಟ್‌ನಿಂದ ಬೇಸತ್ತಿದ್ದ ಬಾಲಿವುಡ್‌ಗೆ ʼಬ್ರಹ್ಮಾಸ್ತ್ರʼ ಜೀವ ನೀಡಿದ್ದು, ಮೊದಲ ದಿನವೇ ಚಿತ್ರ ಬರೋಬ್ಬರಿ 36 ರಿಂದ 38 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪ್ರೇಕ್ಷಕ ಮಹಾಶಯನ ಮನಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೆನಿಸುತ್ತದೆ.

ಬಾಲಿವುಡ್‌ ಸ್ಟಾರ್‌ ಕಪಲ್ಸ್‌ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಬಾಕ್ಸ್​ ಆಫೀಸ್​​​ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆ ಮುನ್ನ ಬಾಯ್ಕಾಟ್‌ಗೆ ಬಲಿಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಸದ್ಯ ತೆರೆ ಮೇಲೆ ರಣಬೀರ್‌ ಆಲಿಯಾ ಕೆಮಿಸ್ಟ್ರಿ ವರ್ಕ್‌ ಆದಂತೆ ಕಾಣುತ್ತಿದೆ.

ಇದನ್ನೂ ಓದಿ: Yo Yo Honey Singh: ಪತ್ನಿಗೆ 1 ಕೋಟಿ ಜೀವನಾಂಶ ನೀಡಿ ವಿಚ್ಛೇದನ ಪಡೆದ ಖ್ಯಾತ ಗಾಯಕ ಹನಿಸಿಂಗ್!

ಬಾಲಿವುಡ್‌ ತಜ್ಞರ ಪ್ರಕಾರ ಚಿತ್ರ ಮೊದಲ ದಿನವೇ ಬರೋಬ್ಬರಿ 36 ರಿಂದ 38 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ಇದಾಗಿದ್ದು, ಹಿಂದಿ ಹೊರತು ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿದೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿಯನ್ನು ಸ್ಟಾರ್‌ ನಿರ್ದೇಶಕ ರಾಜಮೌಳಿ ಅವರು ವಹಿಸಿಕೊಂಡಿದ್ದರು.

ಇನ್ನು, ಮೊದಲ ದಿನವೇ ಬ್ರಹ್ಮಾಸ್ತ್ರ ಅಡ್ವಾನ್ಸ್ ಬುಕಿಂಗ್​ನಿಂದ 11 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇಂದು ಹಾಗೂ ನಾಳೆ ವೀಕೆಂಡ್ ಆದ್ದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ಬೈಕಾಟ್‌ ಮೀರಿ ‘ಬ್ರಹ್ಮಾಸ್ತ್ರ’ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದದ್ದು ವಿಶೇಷವಾಗಿದೆ. ಒಟ್ಟಿನಲ್ಲಿ ಸರಣಿ ಸೋಲುಗಳಿಂದ ಮುಗುಚಿ ಬಿದ್ದಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಜೀವ ತುಂಬಿದ್ದಂತು ಸತ್ಯ. ನೆಗೆಟಿವ್ ವಿಮರ್ಶೆ, ಕೆಟ್ಟ ವಿಎಫ್​ಎಕ್ಸ್ ಕುರಿತು ಟೀಕೆ ಟಿಪ್ಪಣಿ ಕೇಳಿಬಂದರೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News