'ಟೋಬಿ'ಯ ನೆತ್ತರ ನರ್ತನಕ್ಕೆ ಫ್ಯಾನ್ಸ್ ಫುಲ್ ಫಿದಾ.. ಆಗಸ್ಟ್ 25ಕ್ಕೆ ನಿಮ್ಮನ್ನ ಅಳಿಸಲು ಬರ್ತಿದ್ದಾನೆ ಟೋಬಿ

Tobi :  ಟೋಬಿ' ಕಣ್ಣು ಬಿಟ್ಟಾಗಿದೆ.. ಇನ್ನೆಲ್ಲವೂ ಬೆಂಕಿ.. ಬರೀ ಬೆಂಕಿ... ಟ್ರೇಲರ್ ನಲ್ಲೇ ಇಡೀ ಚಿತ್ರತಂಡ ಗೆದ್ದಿದೆ ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಟ್ರೀಲರ್ ಲಕ್ಷ ಲಕ್ಷ ವ್ಯೂಸ್ ಪಡ್ಕೊಳ್ಳೋ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.  

Written by - YASHODHA POOJARI | Edited by - Savita M B | Last Updated : Aug 12, 2023, 04:49 PM IST
  • ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದ ಟ್ರೇಲರ್ ಬಹಳ ರೋಚಕವಾಗಿದೆ.
  • ಮಾರಿಗೆ ದಾರಿ ಅನ್ನೋ ಟ್ಯಾಗ್ ಲೈನ್ ಕೇಳಿದಾಗಲೇ ಜನ ಏನಪ್ಪಾ ಅಂತ ಮಟಮಾಡಿಕೊಂಡಿದ್ದರು.
  • ಇದೀಗ ಟ್ರೇಲರ್ ನಲ್ಲಿ ‘ಟೋಬಿ ಕಣ್ಣು ಬಿಟ್ಟಾಗಿದೆ’ ಮುಂದೈತೆ ಹಬ್ಬ ಎಂದು ಸಿನಿಪ್ರಿಯರ ಕುತೂಹಲ ಹೆಚ್ಚು ಮಾಡಿದ್ದಾರೆ.
'ಟೋಬಿ'ಯ ನೆತ್ತರ ನರ್ತನಕ್ಕೆ ಫ್ಯಾನ್ಸ್ ಫುಲ್ ಫಿದಾ.. ಆಗಸ್ಟ್ 25ಕ್ಕೆ ನಿಮ್ಮನ್ನ ಅಳಿಸಲು ಬರ್ತಿದ್ದಾನೆ ಟೋಬಿ title=

Tobi film : ಕನ್ನಡ ಚಿತ್ರರಂಗದ ಸದ್ಯದ ಬಹು ನಿರೀಕ್ಷಿತ ಚಿತ್ರ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದ ಟ್ರೇಲರ್  ಬಹಳ ರೋಚಕವಾಗಿದೆ. ರಾಜ್ ಬಿ ಶೆಟ್ಟಿಯವರರು ಮತ್ತೊಂದು ಮಾಸ್ ಚಿತ್ರವನ್ನು ಅಭಿಮಾನಿಗಳಿಗಾಗಿ ಇದೇ ಆಗಸ್ಟ್ 25ರಂದು ತರುತ್ತಿದ್ದಾರೆ.

ಮಾರಿಗೆ ದಾರಿ ಅನ್ನೋ ಟ್ಯಾಗ್ ಲೈನ್ ಕೇಳಿದಾಗಲೇ ಜನ ಏನಪ್ಪಾ ಅಂತ ಮಟಮಾಡಿಕೊಂಡಿದ್ದರು.ಇದೀಗ ಟ್ರೇಲರ್ ನಲ್ಲಿ  ‘ಟೋಬಿ ಕಣ್ಣು ಬಿಟ್ಟಾಗಿದೆ’ ಮುಂದೈತೆ ಹಬ್ಬ ಎಂದು ಸಿನಿಪ್ರಿಯರ ಕುತೂಹಲ ಹೆಚ್ಚು ಮಾಡಿದ್ದಾರೆ.

ಹರಕೆಯ ಕುರಿಯೊಂದು ತಪ್ಪಿಸಿಕೊಂಡಿದೆ, ಯಾವುದೇ ಕಾರಣಕ್ಕೂ ಕುರಿ ಮತ್ತೆ ಊರಿಗೆ ಕಾಲಿಡಬಾರದು” ಎಂದು ಆರಂಭವಾಗುವ ಟ್ರೇಲರ್, ಟೋಬಿಯ ಜಗತ್ತಿನ ಹಲವು ಮಜಲುಗಳ ಪರಿಚಯ ಮಾಡುವ ಪ್ರಯತ್ನ ಮಾಡಿದೆ.

ಈ ಹಿಂದೆ ಜೀ ಕನ್ನಡ ನ್ಯೂಸ್ ಜೊತೆ ರಾಜ್ ಬಿ ಶೆಟ್ಟಿ ಮಾತನಾಡಿದಾಗ ಟೋಬಿ ಸಿನಿಮಾಗಾಗಿ ಪಟ್ಟ ಕಷ್ಟ ಯಾವ ಸಿನಿಮಾಗೂ ಪಟ್ಟಿಲ್ಲ.ಆ ಲೆವೆಲ್ಲಿಗೆ ಈ ಸಿನಿಮಾಗಾಗಿ ಎಲ್ಲಾರು ಬೆವರು ಹರಿಸಿದ್ದೇವೆ ಅಂದಿದ್ರು.ಅದು ಟ್ರೇಲರ್ ನಲ್ಲೇ ಗೊತ್ತಾಗುತ್ತಿದೆ.ಇದೀಗ ಎಲ್ಲೆಡೆ ಟೋಬಿಯ ಬೆಂಕಿ ಆವರಿಸಿದೆ.

ಇದನ್ನೂ ಓದಿ-Kshetrapati Trailer : ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!

ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಟೋಬಿ ದೊಡ್ಡ ಮಟ್ಟದಲ್ಲಿ ಮ್ಯಾಜಿಕ್ ಮಾಡೋದು ಕನ್ಫರ್ಮ್ ಆಗಿದೆ. ಚಿತ್ರಕ್ಕೆ ಬಾಸಿಲ್ ನಿರ್ದೇಶನವಿದ್ದು, ಮಿಥುನ್ ಮುಕುಂದನ್ ಸಂಗೀತವಿದೆ. ರಾಜ್ ಬಿ ಶೆಟ್ಟಿಯವರು ಮುಗ್ಧ ಮತ್ತು ಭೀಕರ ಎರಡೂ ಶೇಡ್ ನಲ್ಲಿ ಮಿಂಚಿದ್ದಾರೆ. ಚೈತ್ರ ಆಚಾರ್ ಅವರು ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ.

ಹಿಂದೆ ಬರಹಗಾರ ಟಿ.ಕೆ.ದಯಾನಂದ್  ‘ಟೋಬಿ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. “ನಾನು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ನೀವೊಬ್ಬರನ್ನು ನೋಡಿದಾಗ ಇವರು ಇಂತಹವರು ಅಂತ ಹೇಳಬಹುದು. ಆದರೆ, ಈ ವ್ಯಕ್ತಿಯನ್ನು ಆ ರೀತಿ ಹೇಳಲಾಗದು. 

ನಾನು ಆತನ ಕುರಿತು ಕಥೆ ಬರೆದಿದ್ದೇನೆ. ಅದು ಈಗ ‘ಟೋಬಿ’ ಚಿತ್ರವಾಗಿದೆ ಎಂದು ಟಿ.ಕೆ.ದಯಾನಂದ್ ತಿಳಿಸಿದ್ದರು. ಅದೇನೇ ಇರಲಿ ಟೋಬಿ ಸಿನಿಮಾ ಕನ್ನಡ ಇಂಡಸ್ಟ್ರಿಯನ್ನ ಇನ್ನೊಂದು ಲೆವೆಲ್ಲಿಗೆ ಪಕ್ಕಾ ಕೊಂಡೋಗುತ್ತೆ ಅಂತ ಫ್ಯಾನ್ಸ್ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು

ಇದನ್ನೂ ಓದಿ-South Actress: ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ, ಯಾರೆಂದು ಗುರುತಿಸಬಲ್ಲಿರಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News