Kangana Ranaut: ಡೇಟಿಂಗ್‌ ಮಾಡುತ್ತಿರುವುದು ನಿಜ ಎಂದ ಕಂಗನಾ ರಣಾವತ್‌, ಯಾರು ಆ ಲಕ್ಕಿಮ್ಯಾನ್?‌

Kangana Ranaut: ತಾನು ಡೇಟಿಂಗ್ ಮಾಡುತ್ತಿದ್ದೇನೆ ಆದರೆ ಅದು ನೀವಂದುಕೊಂಡ ವ್ಯಕ್ತಿ ಅಲ್ಲ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್ ಖಚಿತಪಡಿಸಿದ್ದಾರೆ. 

Written by - Chetana Devarmani | Last Updated : Jan 24, 2024, 04:51 PM IST
  • ಬಾಲಿವುಡ್‌ ನಟಿ ಕಂಗನಾ ರಣಾವತ್
  • ಕಂಗನಾ ರಣಾವತ್‌ ಡೇಟಿಂಗ್‌ ವದಂತಿ
  • ಆದರೆ ಅದು ನೀವಂದುಕೊಂಡ ವ್ಯಕ್ತಿ ಅಲ್ಲ
Kangana Ranaut: ಡೇಟಿಂಗ್‌ ಮಾಡುತ್ತಿರುವುದು ನಿಜ ಎಂದ ಕಂಗನಾ ರಣಾವತ್‌, ಯಾರು ಆ ಲಕ್ಕಿಮ್ಯಾನ್?‌  title=
Kangana Ranaut

Kangana Ranaut Relationship : ಕಂಗನಾ ರಣಾವತ್ ತಾನು  ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಅದು EaseMyTrip ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ಅಲ್ಲ. ರಾಮಮಂದಿರ ಉದ್ಘಾಟನಾ ಸಮಾರಂಭ ಸೇರಿದಂತೆ ನಿಶಾಂತ್ ಅವರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡ ನಂತರ ನಟಿ ಡೇಟಿಂಗ್ ವದಂತಿ ಶುರುವಾದವು. ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಕಂಗನಾ ತಾನು  ಡೇಟಿಂಗ್ ಮಾಡುತ್ತಿರುವುದು ನಿಜ, ಆದರೆ ಅದು ನಿಶಾಂತ್ ಅಲ್ಲ ಎಂದು ಹೇಳಿದ್ದಾರೆ. ತನ್ನ ಗೆಳೆಯನ ಗುರುತನ್ನು ಬಹಿರಂಗಪಡಿಸುವವರೆಗೂ ಎಲ್ಲರೂ ತಾಳ್ಮೆಯಿಂದಿರಿ ಎಂದು ಕಂಗನಾ ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಮಹೇಶ್ ಬಾಬು ಮಗಳು ಬ್ರ್ಯಾಂಡ್ ಪ್ರಚಾರದಿಂದಲೇ ಕೋಟಿ ಕೋಟಿ ಗಳಿಸೋದು!

ಮಾಧ್ಯಮಗಳಿಗೆ ನನ್ನ ವಿನಮ್ರ ವಿನಂತಿ. ದಯವಿಟ್ಟು ತಪ್ಪು ಮಾಹಿತಿ ಹರಡಬೇಡಿ. ನಿಶಾಂತ್ ಜಿ ಅವರು ಮದುವೆಯಾಗಿ ಸುಖವಾಗಿದ್ದಾರೆ. ನಾನು ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಸರಿಯಾದ ಸಮಯಕ್ಕಾಗಿ ನಿರೀಕ್ಷಿಸಿ. ದಯವಿಟ್ಟು ನಮ್ಮನ್ನು ಮುಜುಗರಕ್ಕೀಡು ಮಾಡಬೇಡಿ. ಪ್ರತಿದಿನ ಯುವತಿಯನ್ನು ಹೊಸ ಪುರುಷನಿಗೆ ಲಿಂಕ್ ಮಾಡುವುದು ಒಳ್ಳೆಯದಲ್ಲ. ದಯವಿಟ್ಟು ಇದನ್ನು ಮಾಡಬೇಡಿ ಎಂದು ಕಂಗನಾ ಹೇಳಿದರು.

ಅಯೋಧ್ಯ ರಾಮನ ಪ್ರಾಣ ಪ್ರತಿಷ್ಠಾಪನಾ ದಿನದಂದು ಕಂಗನಾ ಮತ್ತು ನಿಶಾಂತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಲ್ಲದೆ, ಕಂಗನಾ ಮತ್ತು ನಿಶಾಂತ್ ಮತ್ತೆ ಒಟ್ಟಿಗೆ ದೇವಾಲಯಕ್ಕೆ ಭೇಟಿ ನೀಡಿದರು. ಈ ಫೊಟೋಗಳು ಅವರಿಬ್ಬರ ಡೇಟಿಂಗ್ ವದಂತಿಗೆ ಕಾರಣವಾಯಿತು. ಕೆಲವು ವಾರಗಳ ಹಿಂದೆ ಕಂಗನಾ ನಿಶಾಂತ್ ಮನೆಗೆ ಭೇಟಿ ನೀಡಿದ್ದರು, ಹೀಗಾಗಿ ಡೇಟಿಂಗ್ ವದಂತಿಗಳು ಹೆಚ್ಚಾಗಿದ್ದವು.

ಇದನ್ನೂ ಓದಿ: Bigg Boss Kannada 10 Winner: ಈ ಬಾರಿ ಅಸಮರ್ಥರೇ ವಿನ್ನರ್‌.. ರನ್ನರ್‌ ಕೂಡ ಇವರೇ.! ಫಿನಾಲೆಗೂ ಮುನ್ನ ಲೀಕ್‌ ಆಯ್ತಾ ಹೆಸರು? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News