ʼದಿ ಕೇರಳ ಸ್ಟೋರಿʼ ನಿಮಗೆ ಅನ್ವಯಿಸುತ್ತದೆ ಅಂತ ತಿಳಿದ್ರೆ ʼನೀವು ಭಯೋತ್ಪಾದಕರುʼ..! 

Kangana ranaut on The Kerala Story : ದಿ ಕೇರಳ ಸ್ಟೋರಿ ಚಿತ್ರಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಮಧ್ಯ ನಿನ್ನೆ ಬಿಡುಗಡೆಯಾದ ಚಿತ್ರವು ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಬಾಲಿವುಡ್‌ನ ಖ್ಯಾತ ನಟಿ ಕಂಗನಾ ರಣಾವತ್ ʼಕೇರಳ ಸ್ಟೋರಿʼ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Written by - Krishna N K | Last Updated : May 6, 2023, 04:23 PM IST
  • ಆದಾ ಶರ್ಮಾ ನಟನೆಯ ʼದಿ ಕೇರಳ ಸ್ಟೋರಿʼ ಪರ ಕಂಗನಾ ರಣಾವತ್‌ ಬ್ಯಾಟಿಂಗ್‌.
  • ʼದಿ ಕೇರಳ ಸ್ಟೋರಿʼ ನಿಮಗೆ ಅನ್ವಯಿಸುತ್ತದೆ ಅಂತ ತಿಳಿದ್ರೆ ʼನೀವು ಭಯೋತ್ಪಾದಕರುʼ.
  • ಸಿನಿಮಾವನ್ನು ವಿರೋಧಿಸುವವರಿಗೆ ತನ್ನದೇ ಧಾಟಿಯಲ್ಲಿ ಉತ್ತರಿಸಿದ ಬಿಟೌನ್‌ ಕ್ವೀನ್‌
ʼದಿ ಕೇರಳ ಸ್ಟೋರಿʼ ನಿಮಗೆ ಅನ್ವಯಿಸುತ್ತದೆ ಅಂತ ತಿಳಿದ್ರೆ ʼನೀವು ಭಯೋತ್ಪಾದಕರುʼ..!  title=

Kangana ranaut : ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಕುರಿತು ಬಿಟೌನ್‌ ಬೆಡಗಿ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಕೇರಳದ ಈ ಕಥೆ ನಿಮ್ಮನ್ನೇ ಗುರಿಯಾಗಿಸುತ್ತಿದೆ ಅಂತ ನೀವು ಭಾವಿಸಿದರೆ, ನೀವು ಭಯೋತ್ಪಾದಕರು ಎಂದು ಹೇಳುವ ಮೂಲಕ ಈ ಚಿತ್ರವನ್ನು ವಿರೋಧಿಸುವವರ ವಿರುದ್ಧ ಗುಡುಗಿದ್ದಾರೆ.

ಹೌದು.. ಹಿಂದಿ ಚಿತ್ರರಂಗದ ಪ್ರಮುಖ ನಟಿ ಕಂಗನಾ ರಣಾವತ್, ತಮಿಳು ಚಿತ್ರ ತಲೈವಿಯಲ್ಲಿನ ಪಾತ್ರಕ್ಕಾಗಿ ಪ್ರಶಂಸೆ ಗಳಿಸಿದರು. ಬಾಲಿವುಡ್ ಚಿತ್ರರಂಗದಲ್ಲಿನ ಸಮಸ್ಯೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕಂಗನಾ ದನಿಯೆತ್ತಿದ್ದಾರೆ. ಈ ಕಾರಣದಿಂದಾಗಿ, ಅವರು ತಮ್ಮ ಜೀವನದಲ್ಲಿ ಅನೇಕ ಸಂದಿಗ್ಧತೆಗಳನ್ನು ಎದುರಿಸುತ್ತಾರೆ. ಅಲ್ಲದೆ, ಹಲವಾರು ವಿಚಾರಗಳ ಕುರಿತು ನೇರವಾಗಿ ಮಾತನಾಡಲು ಯಾವುದೇ ಸಂದರ್ಭದಲ್ಲೂ ಹಿಂಜರಿಯುವುದಿಲ್ಲ. ಇದೀಗ ಭಾರೀ ವಿವಾದ ಸೃಷ್ಟಿಸಿರುವ ಕೇರಳ ಸ್ಟೋರಿ ಚಿತ್ರದ ಬಗ್ಗೆಯೂ ಕಂಗನಾ ಮಾತನಾಡಿದ್ದಾರೆ. 

ಇದನ್ನೂ ಓದಿ: Krithi Shetty : ಸೀರೆಯಲ್ಲಿ ಹೆಣ್ಣು ಬೆಣ್ಣೆ.. ಆಹಾ! ಬೆಣ್ಣೆಯಂತೆ.. ಕರಗಿಹೋಗೋ ನನ್ನ ಹೃದಯದಂತೆ..

ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ ಕಂಗನಾ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಕೇರಳ ಸ್ಟೋರಿ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅವರು, ನಾನು ಕೇರಳ ಕಥೆಯನ್ನು ಇನ್ನೂ ನೋಡಿಲ್ಲ. ಆದರೆ ಸಿನಿಮಾವನ್ನು ಬ್ಯಾನ್ ಮಾಡಲು ಹಲವರು ಹೋರಾಟ ನಡೆಸಿರುವುದು ನನಗೆ ತಿಳಿದಿದೆ ಎಂದರು. ಅಲ್ಲದೆ, ಈ ಚಿತ್ರವು ಐಸಿಸ್ ಹೊರತುಪಡಿಸಿ ಬೇರೆ ಯಾರನ್ನೂ ತಪ್ಪಾಗಿ ಪ್ರತಿನಿಧಿಸಿಲ್ಲ. ಕೇರಳ ಸ್ಟೋರಿಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ದೇಶದ ಬಹುಮುಖ್ಯ ಜವಾಬ್ದಾರಿ ಹೊತ್ತಿರುವ ನ್ಯಾಯಾಲಯ ಈ ಚಿತ್ರದ ಬಗ್ಗೆ ಹೀಗೆ ಹೇಳಿರುವಾಗ ಅದನ್ನು ಬ್ಯಾನ್‌ ಮಾಡುವು ಮಾತೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ಐಸಿಸ್ ಒಂದು ಭಯೋತ್ಪಾದಕ ಸಂಘಟನೆ. ನಾನು ಇದನ್ನು ಹೇಳುತ್ತಿಲ್ಲ, ಭಾರತ ಸರ್ಕಾರ ಮತ್ತು ಇತರ ದೇಶಗಳು ಸಹ ವ್ಯವಸ್ಥೆಯನ್ನು ಹಾಗೆ ಕರೆಯುತ್ತವೆ. ಆ ಸಂಘಟನೆಯು ಭಯೋತ್ಪಾದಕ ಸಂಘಟನೆಯಲ್ಲ ಎಂದು ನೀವು ಭಾವಿಸಿದರೆ, ನೀವೂ ಭಯೋತ್ಪಾದಕರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇರಳದ ಕಥೆಯು ನಿಮ್ಮನ್ನು ಗುರಿಯಾಗಿಸುತ್ತಿದೆ ಎಂದು ನೀವು ಭಾವಿಸಿದರೆ, ನೀವೂ ಸಹ ಭಯೋತ್ಪಾದಕರು ಎಂದು ಸಿನಿಮಾ ವಿರೋಧಿಸುವವರಿಗೆ ಖಡಕ್‌ ಉತ್ತರ ನೀಡಿದರು.

ಇದನ್ನೂ ಓದಿ: Ramya's Pet Dog Is Missing: ರಮ್ಯಾ ಮುದ್ದು ನಾಯಿ ಮಿಸಿಂಗ್‌ : ಹುಡ್ಕಿ ಕೊಡಿ ಎಂದ ಮೋಹಕ ತಾರೆ

ಇನ್ನು ನಿನ್ನೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರವು ವಿರೋಧದ ನಡುವೆಯೂ ಪ್ರದರ್ಶನ ಕಾಣುತ್ತಿದೆ. ಚೆನ್ನೈನಲ್ಲಿ ಸುಮಾರು 15 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಈ ಎಲ್ಲಾ ಚಿತ್ರಮಂದಿರಗಳ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ರೀತಿ ಐಶ್ವರ್ಯಾ ರಾಜೇಶ್ ಅವರ ಫರ್ಹಾನಾ ಕೂಡ ಮುಸ್ಲಿಂ ಮಹಿಳೆಯ ಕಥೆಯನ್ನು ಆಧರಿಸಿದೆ. ನಿನ್ನೆ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಇದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News