ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ 'KGF'

   

Yashaswini V Yashaswini V | Updated: Jan 12, 2018 , 07:25 PM IST
ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ 'KGF'

ರಾಕಿಂಗ್ ಸ್ಟಾರ್ ಯಶ್ ಅಭಿಯನಯದ 'KGF' ಚಿತ್ರ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಮುಂದೆ ಸಾಗುತ್ತಿದೆ. ಹೌದು,  'KGF' ಚಿತ್ರದ ಟೀಸರ್ ಬಿಡುಗಡೆಗೊಂಡ ಐದೇ ದಿನದಲ್ಲಿ 30 ಲಕ್ಷ ವೀಕ್ಷಣೆಯತ್ತ ಸಾಗುತ್ತಿದ್ದು ಇದುವರೆಗಿನ ದಾಖಲೆಗಳನ್ನು ಬ್ರೇಕ್ ಮಾಡಿದೆ. ಜೊತೆಗೆ ಹೊಸ ದಾಖಲೆ ನಿರ್ಮಿಸುತ್ತಿದೆ.

ಜ. 8 ರಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿಂದ ಉಡುಗೊರೆಯಾಗಿ ಈ ಚಿತ್ರದ ಟೀಸೆರ್ ಅನ್ನು ಬಿಡುಗಡೆ ಮಾಡಲಾಯಿತು. 

ಇದನ್ನು ಓದಿ: ಯಶ್ ಹುಟ್ಟುಹಬ್ಬಕ್ಕೆ ಬಂತು ಕೆಜಿಎಫ್ ಟ್ರೈಲರ್, ಮೈನವಿರೇಳಿಸುತ್ತದೆ ರಾಕಿಂಗ್ ಸ್ಟಾರ್ ಖದರ್

ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ಈ ಚಿತ್ರ ಏಕಕಾಲದಲ್ಲಿ ಪಂಚ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರದ ಒಟ್ಟು ಬಜೆಟ್ 50 ಕೋಟಿ ರೂ. ಈ ಚಿತ್ರವೂ ಕನ್ನಡ, ತಮಿಳ್, ತೆಲುಗು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಮಾರ್ಚ್ ಮೂರನೇ ವಾರದ ಹೊತ್ತಿಗೆ ಚಿತ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ.

By continuing to use the site, you agree to the use of cookies. You can find out more by clicking this link

Close