ಲತಾ ಮಂಗೇಶ್ಕರ್ ಅವರ 'ಏ ಮೇರೆ ವತನ್ ಕೆ ಲೋಗೋ' ಹಾಡು ಕೇಳಿ ಜವಾಹರಲಾಲ್ ನೆಹರೂ ಅವರ ಕಣ್ಣಂಚು ಒದ್ದೆಯಾಗಿತ್ತು.!

'ನೈಟಿಂಗೇಲ್ ಆಫ್ ಇಂಡಿಯಾ' ಲತಾ ಮಂಗೇಶ್ಕರ್ (Lata Mangeshkar) ಅವರು 'ಏ ಮೇರೆ ವತನ್ ಕೆ ಲೋಗೋ' ಹಾಡು ಕೇಳಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಣ್ಣೀರು ಹಾಕಿದ್ದರು.

Edited by - Zee Kannada News Desk | Last Updated : Feb 6, 2022, 01:31 PM IST
  • ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ
  • ಲತಾ ಮಂಗೇಶ್ಕರ್ ಅವರ ಹಾಡು ಕೇಳಿ ಜವಾಹರಲಾಲ್ ನೆಹರೂ ಅವರ ಕಣ್ಣಂಚು ಒದ್ದೆಯಾಗಿತ್ತು
  • 2014 ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು
ಲತಾ ಮಂಗೇಶ್ಕರ್ ಅವರ 'ಏ ಮೇರೆ ವತನ್ ಕೆ ಲೋಗೋ' ಹಾಡು ಕೇಳಿ ಜವಾಹರಲಾಲ್ ನೆಹರೂ ಅವರ ಕಣ್ಣಂಚು ಒದ್ದೆಯಾಗಿತ್ತು.!  title=
ಲತಾ ಮಂಗೇಶ್ಕರ್

ನವದೆಹಲಿ:  'ನೈಟಿಂಗೇಲ್ ಆಫ್ ಇಂಡಿಯಾ' ಲತಾ ಮಂಗೇಶ್ಕರ್ (Lata Mangeshkar) ಅವರು 'ಏ ಮೇರೆ ವತನ್ ಕೆ ಲೋಗೋ' ಹಾಡು ಕೇಳಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಣ್ಣೀರು ಹಾಕಿದ್ದರು. ಸುಮಾರು ಎಂಟು ದಶಕಗಳ ಸುಪ್ರಸಿದ್ಧ ವೃತ್ತಿಜೀವನವನ್ನು ಹೊಂದಿದ್ದ ಗಾಯಕಿ, 2014 ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. 

ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಗೀತರಚನೆಕಾರ ಕವಿ ಪ್ರದೀಪ್ ಅವರು ತಮ್ಮ ಬಳಿಗೆ  ಬಂದಿದ್ದರು. ಪೂರ್ವಾಭ್ಯಾಸಕ್ಕೆ ಸಮಯವಿಲ್ಲದ ಕಾರಣ ಮೊದಲು ಈ ಹಾಡು ಹಾಡಲು ನಿರಾಕರಿಸಿದ್ದರು. ಆದರೆ ಕವಿಯ ಒತ್ತಾಯದ ಮೇರೆಗೆ ಅವರು ಜನವರಿ 27, 1963 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರ ಮುಂದೆ ಹಾಡನ್ನು ಹಾಡಿದರು.

ಇದನ್ನೂ ಓದಿ:ಧೋನಿಯ ಈ ಒಂದು ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಲತಾ ಮಂಗೇಶ್ಕರ್

1962 ರ ಭಾರತ-ಚೀನಾ ಯುದ್ಧದಲ್ಲಿ (India-China War of 1962) ಮಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ 'ಏ ಮೇರೆ ವತನ್ ಕೆ ಲೋಗೋ' (Ae Mere Watan ke logon) ಹಾಡನ್ನು ಬರೆಯಲಾಗಿದೆ.

ಹಾಡಿನ 51 ನೇ ವಾರ್ಷಿಕೋತ್ಸವದಲ್ಲಿ ತಮ್ಮ ಮೊದಲ ಪ್ರದರ್ಶನವನ್ನು ನೆನಪಿಸಿಕೊಂಡಿದ್ದರು. "ಈ ಹಾಡು ಮುಗಿದ ಬಳಿಕ ನೆಹರು ಅವರು ನನ್ನನ್ನು ಭೇಟಿಯಾಗಲು ಬಯಸಿದರು. ಇದನ್ನು ತಿಳಿದು ನಾನು ಹೆದರಿದ್ದೆ. ನನ್ನಿಂದ ಏನೋ ತಪ್ಪಾಯಿತು ಎಂದು ಭಾವಿಸಿದ್ದೆ. ಆದರೆ ನಾನು ನೆಹರು ಅವರನ್ನು ಭೇಟಿಯಾದಾಗ, ನಾನು ಅವರ ಕಣ್ಣುಗಳಲ್ಲಿ ಕಣ್ಣೀರನ್ನು ನೋಡಿದೆ. ಲತಾ, ತುಮ್ನೆ ಆಜ್ ಮುಜೆ ರೂಲಾ ದಿಯಾ ಎಂದು ಅವರು ಹೇಳಿದರು." ಎಂದು ಲತಾ ಮಂಗೇಶ್ಕರ್ ಹೇಳಿದ್ದಾರೆ. 

ಲತಾ ಮಂಗೇಶ್ಕರ್ ಭಾನುವಾರ (ಫೆಬ್ರವರಿ 6) ಬೆಳಿಗ್ಗೆ 8.12 ಕ್ಕೆ ಕೊನೆಯುಸಿರೆಳೆದರು. ಕೋವಿಡ್ -19 ರ ನಂತರ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಾಯಕಿ ವಿಧಿವಶರಾಗಿದ್ದಾರೆ.  

ಇದನ್ನೂ ಓದಿ: Ek Love Ya: ಪ್ರೇಮ್ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್

ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಲತಾ ಮಂಗೇಶ್ಕರ್ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಭಾರತ ರತ್ನ (Bharat Ratna) ಸೇರಿದಂತೆ ಇತರ ಅನೇಕ ಗೌರವಗಳಿಗೆ ಭಾಜನರಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ಮೂವತ್ತಾರು ಭಾರತೀಯ ಭಾಷೆಗಳಲ್ಲಿ ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News