ನವಾಜುದ್ದೀನ್ ಸಿದ್ದಿಕಿ ಬಾಳಲ್ಲಿ ಹೊಸ ಬೆಡಗಿ, ಯಾರೀವಳು? ಅಂತಿದ್ದಾರೆ ಫ್ಯಾನ್

  ನವಾಜುದ್ದೀನ್ ಸೇಕ್ರೆಡ್ ಗೇಮ್ಸ್ ನಿಂದ ಹಿಡಿದು ಬಾಳ ಠಾಕ್ರೆ ಸಾದತ್ ಹಸನ್ ಮಂಟೋ ರಂತಹ ಕಥೆಗಳನ್ನು ಒಳಗೊಂಡ ಪಾತ್ರದಲ್ಲಿ ಅಭಿನಯಿಸುತ್ತಾ ಬಾಲಿವುಡ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ.

Last Updated : Jul 18, 2018, 08:50 PM IST
ನವಾಜುದ್ದೀನ್ ಸಿದ್ದಿಕಿ ಬಾಳಲ್ಲಿ ಹೊಸ ಬೆಡಗಿ, ಯಾರೀವಳು? ಅಂತಿದ್ದಾರೆ ಫ್ಯಾನ್  title=
Photo courtesy: Instagram

ನವದೆಹಲಿ: ತಮ್ಮ ಮಾಸ್ಟರ್ ಕ್ಲಾಸ್ ಅಭಿನಯದಿಂದಲೇ ಬಾಲಿವುಡ್ ಹೆಸರುಗಳಿಸಿರುವ ನವಾಜುದ್ದೀನ್ ಸಿದ್ದಿಕಿ ಈಗ ತಮ್ಮ ಇನ್ಸ್ಟಾ ಗ್ರಾಂ ಪೋಟೋ ಮೂಲಕ ಸುದ್ದಿಯಲ್ಲಿದ್ದಾರೆ.ಅಷ್ಟಕ್ಕೂ ಯಾರಂತೀರಾ ಈ ಬೆಡಗಿ ಹಾಗಾದರೆ ಓದಿ ಈ ಫುಲ್ ರಿಪೋರ್ಟ್.

ನವಾಜುದ್ದೀನ್  ಸೇಕ್ರೆಡ್ ಗೇಮ್ಸ್ ನಿಂದ ಹಿಡಿದು ಬಾಳ ಠಾಕ್ರೆ ಸಾದತ್ ಹಸನ್ ಮಂಟೋ ರಂತಹ ಕಥೆಗಳನ್ನು ಒಳಗೊಂಡ ಪಾತ್ರದಲ್ಲಿ ಅಭಿನಯಿಸುತ್ತಾ ಬಾಲಿವುಡ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಈಗ ಯಾವುದೋ ಒಬ್ಳು ಬೆಕ್ಕಿನ ಕಣ್ಣಿನ ಹುಡುಗಿ ಜೊತೆ ಪೋಟೋ ಶೇರ್ ಮಾಡಿಕೊಳ್ಳುವುದರ ಮೂಲಕ ಮಾಧ್ಯಮಗಳ ಗಾಸಿಪ್ ಮತ್ತು ರೂಮರ್ ಸುದ್ದಿಗಳಿಗೆ ಮತ್ತಷ್ಟು ಹೂರಣ ಬಡಿಸಿದ್ದಾರೆ ಎನ್ನಬಹುದು.

 

Ye Ladki mere ' रोम रोम में ' hai

A post shared by Nawazuddin Siddiqui (@nawazuddin._siddiqui) on

ಸಾಮಜಿಕ ಜಾಲತಾಣದಲ್ಲಿ ಅಷ್ಟಾಗಿ ಆಕ್ಟಿವ್ ಇರದ ನವಾಜುದ್ದೀನ್ ಸಿದ್ದಿಕಿ ತಕ್ಷಣ ಬುಧುವಾರದಂದು  ಅಚ್ಚರಿ ಎನ್ನುವಂತೆ  ಪೋಟೋ ಶೇರ ಮಾಡಿ " ಯೇ ಲಡ್ಕಿ ಮೇರೆ ರೋಮ ರೋಮ್ ಮೈ ಹೈ( ಈ ಹುಡುಗಿ ನನ್ನವಳು ನನ್ನ ರೋಮ ರೋಮದಲ್ಲಿದ್ದಾಳೆ) ಎಂದು ಪೋಸ್ಟ್ ಅಲ್ಲಿ ಬರೆದುಕೊಂಡಿರುವುದು ಈಗ ಅಭಿಮಾನಿಗಳ ಕೂತುಹಲಕ್ಕೆ ಕಾರಣವಾಗಿದೆ. ಅದರಲ್ಲಿ ಇದು ವಿದೇಶದಲ್ಲಿನ ಪೋಟೋ ಆಗಿರುವುದರಿಂದ ಇದಕ್ಕೆ ಇನ್ನಷ್ಟು ಊಹಾಪೋಹ ಎದ್ದಿದೆ ಎಂದು ಹೇಳಬಹುದು.

ಆದರೆ ಈ ಹುಡುಗಿ ಯಾರು ಎನ್ನುವುದು ಮಾತ್ರ ಇದುವರೆಗೂ ತಿಳಿದಿಲ್ಲ ಎನ್ನಲಾಗಿದೆ.

Trending News