Nayanathara: 'ಜವಾನ್' ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ಲೇಡಿ ಸೂಪರ್‌ ಸ್ಟಾರ್‌

Nayanathara acting with Prabhas: ಬಹುನಿರೀಕ್ಷಿತ ಜವಾನ್‌ ಚಿತ್ರ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ನಯನತಾರಾ ಸದ್ಯ ಭಾರೀ ಬೇಡಿಕೆಯುಳ್ಳ ನಟಿ.  ಇದೀಗ ಲೇಡಿ ಸೂಪರ್‌ ಸ್ಟಾರ್ ಮುಂದಿನ ಸಿನಿಮಾ ಕುರಿತು ಮಾಹಿತಿಯೊಂದು ಲಭಿಸಿದೆ.   

Written by - Savita M B | Last Updated : Sep 25, 2023, 10:45 AM IST
  • ಜವಾನ್‌ ಚಿತ್ರದಲ್ಲಿ ಶಾರುಖ್‌ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡ ನಯನತಾರಾ
  • ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.
  • ಪ್ರಭಾಸ್‌ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ಕಾಣಿಸಿಕೊಳ್ಳಲಿದ್ದಾರೆ.
Nayanathara: 'ಜವಾನ್' ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ಲೇಡಿ ಸೂಪರ್‌ ಸ್ಟಾರ್‌ title=

Bhakta Kannappa: ಜವಾನ್‌ ಚಿತ್ರದಲ್ಲಿ ಶಾರುಖ್‌ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡ ನಯನತಾರಾ ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಹೌದು ಪ್ರಭಾಸ್‌ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ಕಾಣಿಸಿಕೊಳ್ಳಲಿದ್ದಾರೆ. 

ವಿಷ್ಣು ಮಂಚು ಅವರ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಾಥ್ ನೀಡುತ್ತಿದ್ದಾರೆ. ಸದ್ಯ ಈ ಚಿತ್ರ ಮಾಡಲು ಎಲ್ಲಾ ತಯಾರಿಗಳು ನಡೆಯುತ್ತಿವೆ. ಈ ಸಿನಿಮಾದಲ್ಲಿ ಕಣ್ಣಪ್ಪನಾಗಿ ವಿಷ್ಣು ಮಂಚು ಮತ್ತು ಶಿವನಾಗಿ 10 ನಿಮಿಷಗಳ ಕಾಲ ಪ್ರಭಾಸ್ ಕಾಣಿಸಿಕೊಳ್ಳಿದ್ದಾರೆ. 

ಇದನ್ನೂ ಓದಿ-ಮೇಘಾ ಅಮೋಘ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ..! ಇಲ್ಲಿವೆ ಫೋಟೋಸ್‌

ಸದ್ಯ ಈ ಚಿತ್ರದಲ್ಲಿ ನಟಿಸಲು ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಸಹ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಯೋಗಿ ಚಿತ್ರದಲ್ಲಿ ಪ್ರಭಾಸ್‌ ಹಾಗೂ ನಯನತಾರಾ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಇದೀಗ 16 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಒಂದಾಗಲಿದ್ದು, ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಖುಷಿಯನ್ನು ಹೆಚ್ಚಿಸಿದೆ. 

ಇನ್ನು ಇತ್ತೀಚಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ನೂಪುರ್‌ ಸನೋನ್‌ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿಗಳು ಲಭ್ಯವಾಗಿಲ್ಲ. 

ಇದನ್ನೂ ಓದಿ-ಅಮ್ಮನಾದರೂ ಅಂದಕ್ಕೇನೂ ಕಮ್ಮಿಯಿಲ್ಲ..! ಪ್ರಣಿತಾ ಫೋಟೋಸ್‌ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News