ಅಮ್ಮನಾದರೂ ಅಂದಕ್ಕೇನೂ ಕಮ್ಮಿಯಿಲ್ಲ..! ಪ್ರಣಿತಾ ಫೋಟೋಸ್‌ ವೈರಲ್‌

Pranita Subhash : ಸ್ಯಾಂಡಲ್‌ವುಡ್‌ ಬ್ಲಾಕ್ಟಸ್ಟರ್‌ ʼಪೋರ್ಕಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿನಯ ಮತ್ತು ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳು ಗಳಿಸಿದ್ದಾರೆ. ಕನ್ನಡವಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಪ್ರಣಿತಾ ಶೇರ್‌ ಮಾಡಿರುವ ಫೋಟೋಗಳು ನೆಟಿಜನ್‌ಗಳನ್ನು ಆಕರ್ಷಿಸುತ್ತಿದ್ದು, ಅಮ್ಮನಾದರೂ ಸಹ ಅಂದ ಕಡಿಮೆಯಾಗಿಲ್ಲ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು

1 /7

‘ಪೋರ್ಕಿ’ ಸಿನಿಮಾದ ಮೂಲಕ ಕನ್ನಡ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದ ಪ್ರಣೀತಾ, ಕಡಿಮೆ ಸಮಯದಲ್ಲಿ ಪ್ರೇಕ್ಷಕರಲ್ಲಿ ಒಳ್ಳೆಯ ಮನ್ನಣೆ ಗಳಿಸಿದ್ದಾರೆ.  

2 /7

ದರ್ಶನ್‌ ನಟನೆಯ ಪೋರ್ಕಿ ಸಿನಿಮಾದಿಂದಲೇ ಪ್ರಣಿತಾ ಮುನ್ನೆಲೆಗೆ ಬಂದರು, ಸಖತ್ತಾಗವ್ಳೆ ಸಾಂಗ್‌ ಮೂಲಕ ಕನ್ನಡಿಗರ ಮನ ಕದ್ದರು.  

3 /7

ವಿಜಯ್‌ ನಟನೆ ಜರಾಸಂಧ, ಭೀಮಾ ತೀರದಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಪ್ರಣಿತಾ ಗಮನಸೆಳೆದರು.  

4 /7

ಅಷ್ಟೆ ಅಲ್ಲದೆ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಟಾಲಿವುಡ್‌ನಲ್ಲಿ ಜನಪ್ರಿಯರಾದರು.  

5 /7

ಸೂಪರ್‌ ಸ್ಟಾರ್‌ ಮಹೇಶ್ ಬಾಬು ಅವರ ‘ಬ್ರಹ್ಮೋತ್ಸವಂ’ ಮತ್ತು ಎನ್‌ಟಿಆರ್ ಅವರ ‘ರಭಸ’ ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ಇಂಪ್ರೆಸ್ ಮಾಡಿದರು.  

6 /7

ಕನ್ನಡ, ತೆಲುಗು ಮತ್ತು ಹಿಂದಿ ತಮಿಳು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್‌ ಶೆರ್‌ಮಾಡಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಗಳಿಸಿದರು.  

7 /7

ಕೆಲವು ವರ್ಷಗಳ ಹಿಂದೆ ಪ್ರಣಿತಾ ನಿತಿನ್ ರಾಜು ಎಂಬ ಉದ್ಯಮಿಯನ್ನು ವಿವಾಹವಾದರು, ಅವರಿಗೆ ಈಗ ಒಂದು ಮಗುವಿದೆ.