Physics Teacher: ‘ಫಿಸಿಕ್ಸ್ ಟೀಚರ್’ಗೆ ಮೆಚ್ಚುಗೆಯ ಮಹಾಪೂರ

ಒಂದೆರೆಡು ಪರಿಚಿತ ಮುಖಗಳನ್ನು ಬಿಟ್ಟರೆ ಭಾಗಶಃ ಹೊಸತಂಡವೇ ಸೇರಿಕೊಂಡು ಮಾಡಿರುವ ಚಿತ್ರ ‘ಫಿಸಿಕ್ಸ್ ಟೀಚರ್’.

Written by - YASHODHA POOJARI | Edited by - Puttaraj K Alur | Last Updated : Mar 28, 2022, 07:15 PM IST
  • ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಹೊಸಬರ ‘ಫಿಸಿಕ್ಸ್ ಟೀಚರ್’ ಸಿನಿಮಾ
  • ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡು ಜನಮನಸೂರೆಗೊಂಡ ಚಿತ್ರ
  • ಕನ್ನಡ ಚಿತ್ರರಂಗದ ದಿಗ್ಗಜರಿಂದ ನಿರ್ದೇಶಕ, ನಟ ಸುಮುಖರಿಗೆ ಮೆಚ್ಚುಗೆಯ ಮಹಾಪೂರ
Physics Teacher: ‘ಫಿಸಿಕ್ಸ್ ಟೀಚರ್’ಗೆ ಮೆಚ್ಚುಗೆಯ ಮಹಾಪೂರ   title=
ಹೊಸಬರ ‘ಫಿಸಿಕ್ಸ್ ಟೀಚರ್’ ಸಿನಿಮಾ

ಬೆಂಗಳೂರು: ಹಲವು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯ ಸಾಕಷ್ಟು ಧಾರಾವಾಹಿ, ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ  ನಂದಿತ ಯಾದವ್ ಪುತ್ರ ಸುಮುಖ(Sumukha). ಸುಮುಖ ಅವರು ‘ಫಿಸಿಕ್ಸ್ ಟೀಚರ್’(Physics Teacher) ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ನಟನೆಯನ್ನು ಮಾಡಿದ್ದಾರೆ.

ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(Bengaluru International Film Festival)ದಲ್ಲಿ ಪ್ರದರ್ಶನವಾಗಿ ಜನಮನಸೂರೆಗೊಂಡಿದೆ. ಚಿತ್ರ ನೋಡಿ ಸಂತಸಪಟ್ಟಿರುವ ಗಣ್ಯರು ತಮ್ಮ ಮಾತುಗಳ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದು, ಸುಮುಖರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

‘ನಾನು ಸುಮುಖನನ್ನು ಬಾಲ್ಯದಿಂದಲೂ ಬಲ್ಲೆ. ಆತ‌ ಒಂದು ಚಿತ್ರ ಮಾಡುತ್ತಿದ್ದೇನೆ ಅಂದಾಗ ಸಂತೋಷಪಟ್ಟವರಲ್ಲಿ ನಾನು ಒಬ್ಬ. ಈ ಬಾರಿಯ ಚಿತ್ರೋತ್ಸವದಲ್ಲಿ ನಾನು ಈ ಚಿತ್ರ ನೋಡಿದೆ. ಭ್ರಮೆ ಹಾಗೂ ವಾಸ್ತವಗಳ ಸಂಘರ್ಷವನ್ನು ಚಿತ್ರದುದ್ದಕ್ಕೂ ಕಟ್ಟಿಕೊಟ್ಟಿರುವ ರೀತಿ ಅದ್ಭುತವಾಗಿದೆ. ಸುಮುಖನಿಗೆ ಒಳ್ಳೆಯ ಭವಿಷ್ಯವಿದೆ ಎಂದು ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಬಿ.ಸುರೇಶ್(B Suresh) ಹಾರೈಸಿದ್ದಾರೆ.

ಇದನ್ನೂ ಓದಿ: "ನಾವಿಲ್ಲ ಅಂದರೂ ನಮ್ಮ ಕೆಲಸ ಇರುತ್ತೆ ಅಂತ ತಿಳಿಸಿದ": ಅಪ್ಪು ನೆನೆದು ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್‌

‘ಈ ಸಿನಿಮಾ ನೋಡಿದಾಗ ನನಗೆ ಆಶ್ಚರ್ಯವಾಯಿತು. ಮೊದಲು ವಿಜ್ಞಾನದ ಬಗ್ಗೆ ಹೇಳುತ್ತಿದ್ದಾನೆ ಅಂದುಕೊಂಡೆ. ನಂತರ ಹಾರಾರ್ ಅನಿಸಿತು. ಕ್ಲೈಮ್ಯಾಕ್ಸ್ ನಲ್ಲಿ ಬೇರೆಯೇ ಇತ್ತು. ಸುಮುಖನಿಂದ ಇನ್ನಷ್ಟು ಉತ್ತಮ ಚಿತ್ರಗಳು ಮೂಡಿಬರಲಿ’ ಎಂದು ಗಿರಿಜಾ‌ ಲೋಕೇಶ್(Girija Lokesh) ಸಂತಸ ವ್ಯಕ್ತಪಡಿಸಿದರು.

‘ನಾನು ಈ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ವಿಶಿಷ್ಟ ಅನಿಸಿದ್ದು, ಸುಮುಖ ಎನ್ನುವ ಹೊಸ ಹುಡುಗ ಚಿತ್ರ ಮಾಧ್ಯಮವನ್ನು ಅಭ್ಯಾಸ ಮಾಡಲು ಹೊರಟ್ಟಿದ್ದಾನೆ.  ಪರಿಣಾಮಕಾರಿಯಾದಂತಹ, ಆಪ್ತಭಾವವನ್ನು ಸೃಷ್ಟಿಸಬಲ್ಲಂತ ಹಾಗೂ ಗಾಢತೆಯನ್ನು ತಂದುಕೊಡುವಂತಹ ಚಿತ್ರ ನಿರ್ದೇಶಿಸಿದ್ದಾನೆ‌. ಸಿನಿಮಾ ಆರಂಭದಿಂದ ಅಂತ್ಯದವರೆಗೆ ಕುತೂಹಲ ಹುಟ್ಟಿಸಿರುವುದು ಆತನ ಉತ್ತಮ ನಿರ್ದೇಶನಕ್ಕೆ ಸಾಕ್ಷಿ’ ಎಂದು ಮಂಡ್ಯ ರಮೇಶ್ ಮೆಚ್ಚುಗೆ ಸೂಚಿಸಿದರು.

ಒಂದೆರೆಡು ಪರಿಚಿತ ಮುಖಗಳನ್ನು ಬಿಟ್ಟರೆ ಭಾಗಶಃ ಹೊಸತಂಡವೇ ಸೇರಿಕೊಂಡು ಮಾಡಿರುವ ಚಿತ್ರ ‘ಫಿಸಿಕ್ಸ್ ಟೀಚರ್’. ಭೌತಶಾಸ್ತ್ರ ಅಂದರೆ ಒಂದು ಸಿದ್ದಾಂತ. ಇದು ಯಾವಾಗಲೂ ತರ್ಕದ ಜೊತೆ ಕೆಲಸ ಮಾಡುತ್ತಿರುತ್ತದೆ. ಮನಸ್ಸು ಸಹ ಹಾಗೆಯೇ ಕೆಲಸ ಮಾಡುತ್ತಿರುತ್ತದಾ? ಎಂಬ ಅಂಶವನ್ನಿಟ್ಟುಕೊಂಡು ಸುಮುಖ ಚಿತ್ರ ಮಾಡಿದ್ದಾನೆ. ಹೊಸತಂಡದ ಈ ಹೊಸ ಪ್ರಯತ್ನಕ್ಕೆ ಒಳಿತಾಗಲಿ ಎಂದು ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಶುಭಹಾರೈಸಿದರು.

ಇದನ್ನೂ ಓದಿ: KGF verse:ಕೆಜಿಎಫ್‌2 ಟ್ರೇಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್!

ಒಬ್ಬ ವೈದ್ಯನಾಗಿ ಹಾಗೂ ಒಬ್ಬ ನಟನಾಗಿ ‘ಫಿಸಿಕ್ಸ್ ಟೀಚರ್’ ನನಗೆ ಇಷ್ಟವಾಯಿತು. ಕೊನೆಯವರೆಗೂ ಸತ್ಯಾಸತ್ಯತೆಯನ್ನು ಸುಮುಖ ಹಿಡಿದಿಟ್ಟಿರುವ ಶೈಲಿ ಶ್ಲಾಘನೀಯ ಎಂದು ಖ್ಯಾತ ವೈದ್ಯ ರಾಜಕುಮಾರ್ ತಿಳಿಸಿದರು. ಸಾಹಿತ್ಯ, ಸಾಂಸ್ಕೃತಿಕ , ಸಿನಿಮಾ ವಿಮರ್ಶಕ ಹಾಗೂ ಪ್ರಾಧ್ಯಾಪಕ ಎನ್.ಮನು ಚಕ್ರವರ್ತಿ ಅವರು ಸಹ ‘ಫಿಸಿಕ್ಸ್ ಟೀಚರ್’ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.   

‘ಪಾಸಿಂಗ್ ಶಾಟ್ ಫಿಲಂ’ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಸುಮುಖ ಹಾಗೂ ಸ್ಕಂಧ ಸುಬ್ರಹ್ಮಣ್ಯ ಕಥೆ ಬರೆದಿದ್ದಾರೆ. ರಘು ಗ್ಯಾರಹಳ್ಳಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮುಖ, ಪ್ರೇರಣ ಕಂಬಂ(Prerana Kambam), ಮಂಡ್ಯ ರಮೇಶ್, ರಾಜೇಶ್ ನಟರಂಗ ಮುಂತಾದವರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News