"ನಾವಿಲ್ಲ ಅಂದರೂ ನಮ್ಮ ಕೆಲಸ ಇರುತ್ತೆ ಅಂತ ತಿಳಿಸಿದ": ಅಪ್ಪು ನೆನೆದು ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್‌

ಬೆಂಗಳೂರಿನ ಬಿಬಿಎಂಪಿ (BBMP) ಕೇಂದ್ರ ಕಚೇರಿಯ ಆವರಣದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಪುತ್ಥಳಿ (Puneeth Satue) ಲೋಕಾರ್ಪಣೆ ಕಾರ್ಯಕ್ರಮ ನಿನ್ನೆ ಸಂಜೆ ನಡೆಯಿತು.

Written by - Chetana Devarmani | Last Updated : Mar 28, 2022, 06:05 PM IST
  • ಪುನೀತ್‌ ರಾಜ್‌ಕುಮಾರ್‌ ಕಂಚಿನ ಪ್ರತಿಮೆ ಲೋಕಾರ್ಪಣೆ
  • "ಎಲ್ಲ ಸಿನಿಮಾದಲ್ಲೂ ಒಂದೊಂದು ಮೆಸೆಜ್ ಕೊಟ್ಟಿದಾನೆ"
  • "ಅವನು ಯಾರಿಗೂ ಹೇಳದೇ ಸೇವೆ ಮಾಡಿದ"
  • "ನಾವಿಲ್ಲ ಅಂದರೂ ನಮ್ಮ ಕೆಲಸ ಇರುತ್ತೆ ಅಂತ ತಿಳಿಸಿದ"
  • ಅಪ್ಪು ನೆನೆದು ಭಾವುಕ ನುಡಿಗಳನ್ನಾಡಿದ ರಾಘವೇಂದ್ರ ರಾಜ್‌ಕುಮಾರ್‌
"ನಾವಿಲ್ಲ ಅಂದರೂ ನಮ್ಮ ಕೆಲಸ ಇರುತ್ತೆ ಅಂತ ತಿಳಿಸಿದ": ಅಪ್ಪು ನೆನೆದು ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್‌  title=
ರಾಘವೇಂದ್ರ ರಾಜ್‌ಕುಮಾರ್‌

ಅಪ್ಪು (Appu) ಅಂದ್ರೆನೆ ಹಾಗೆ ಎಂದೆಂದೂ ಮರೆಯಲಾಗದ ಭಾವನೆ. ಪುನೀತ್‌ರನ್ನು (Puneeth Rajkumar) ನೆನೆದು ಮತ್ತೊಮ್ಮೆ ಭಾವುಕ ನುಡಿಗಳನ್ನಾಡಿದ್ದಾರೆ ನಟ ರಾಘವೇಂದ್ರ ರಾಜ್‌ಕುಮಾರ್‌. 

ಬೆಂಗಳೂರಿನ ಬಿಬಿಎಂಪಿ (BBMP) ಕೇಂದ್ರ ಕಚೇರಿಯ ಆವರಣದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಪುತ್ಥಳಿ (Puneeth Satue) ಲೋಕಾರ್ಪಣೆ ಕಾರ್ಯಕ್ರಮ ನಿನ್ನೆ ಸಂಜೆ ನಡೆಯಿತು. ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಆಯೋಜಿಸಿರುವ ಪುನೀತ್ ರಾಜ್‌ಕುಮಾರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಅಶ್ವಿನಿ ಪುನೀತ್ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

ಇದನ್ನೂ ಓದಿ: ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ಒಪ್ಪುವಿರಾ? ಫ್ಯಾನ್ಸ್‌ಗೆ ಉಪ್ಪಿ ಕೊಟ್ರು ಟಾಸ್ಕ್‌!

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಪ್ಪು ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿದ್ದಾರೆ. ನಗುನಗುತ್ತಲೇ ನಟ ಪುನೀತ್ ನಮ್ಮನ್ನ ಬಿಟ್ಟು ಹೋಗಿದ್ದಾರೆ ಎಂದರು.

ಪುನೀತ್ ಸಹೋದರ ಹಾಗೂ ನಟ ರಾಘವೇಂದ್ರ ರಾಜ್‌ಕುಮಾರ್ ಭಾಗಿ ಮಾತನಾಡಿ, ಪುನೀತ್ ಅವನ ಜೀವನ ಚನ್ನಾಗಿ ಜೀವಿಸಿದ. ಯಾರಿಗೂ ಹೇಳದೇ ಸೇವೆ ಮಾಡಿದ. ಯಾವ ಪ್ರಶಸ್ತಿ ಕೂಡ ಅಪೇಕ್ಷಿಸದೇ ಸೇವೆ ಮಾಡಿದ. ಪ್ರಶಸ್ತಿಗಳು ಅವನಹಿಂದೆ ಹೋಗ್ತಿದೆ. ತಂದೆ ತಾಯಿ ಪಕ್ಕದಲ್ಲಿ ಹೋಗಿ ಮಲಗಿದ್ದಾನೆ ಅಪ್ಪು ಎಂದು ಭಾವುಕರಾದ್ರು.

ಇದನ್ನೂ ಓದಿ: Sanjay Dutt : ಅಪ್ಪು ಮನೆಗೆ ಮನೆಗೆ ಭೇಟಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್!

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ‘ಡಾ.ಪುನೀತ್‌ ರಾಜ್‌ಕುಮಾರ್‌ ’ ಪ್ರಶಸ್ತಿ (Puneeth Rajkumar Award) ಪ್ರದಾನ ಮಾಡಲಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News