Rani Mukerji : ಮನೆಯಲ್ಲಿನ ಬಡತನವೇ ನಟಿ ರಾಣಿ ಮುಖರ್ಜಿಗೆ ಈ ಕೆಲಸ ಮಾಡಲು ಪ್ರೇರೆಪಿಸಿತು.!

Rani Mukerji Debut in Movies: ತಾನು ನಟಿಯಾಗದೇ ಇದ್ದಿದ್ದರೆ ಇಂಟೀರಿಯರ್ ಡಿಸೈನರ್ ಆಗಬೇಕೆಂದು ಆರಂಭದಲ್ಲಿ ಯೋಚಿಸಿದ್ದೆ ಎಂದು ರಾಣಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ರಾಣಿ ಶೀಘ್ರದಲ್ಲೇ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Written by - Chetana Devarmani | Last Updated : Mar 8, 2023, 10:47 AM IST
  • ಬಾಲಿವುಡ್‌ ನಟಿ ರಾಣಿ ಮುಖರ್ಜಿ
  • 25 ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿ
  • ಮನೆಯಲ್ಲಿನ ಬಡತನ ಈ ಕೆಲಸ ಮಾಡಲು ಪ್ರೇರೆಪಿಸಿತು.!
Rani Mukerji : ಮನೆಯಲ್ಲಿನ ಬಡತನವೇ ನಟಿ ರಾಣಿ ಮುಖರ್ಜಿಗೆ ಈ ಕೆಲಸ ಮಾಡಲು ಪ್ರೇರೆಪಿಸಿತು.! title=
Rani Mukerji

Rani Mukerji Debut in Movies: ಬಾಲಿವುಡ್‌ ನಟಿ ರಾಣಿ ಮುಖರ್ಜಿ ಕಳೆದ 25 ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ. ಅವರು 1996 ರಲ್ಲಿ ಬೆಂಗಾಲಿ ಚಲನಚಿತ್ರ ಬಿಯರ್ ಫೂಲ್ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಇದರ ನಂತರ, ಅವರು ಅದೇ ವರ್ಷ ರಾಜಾ ಕಿ ಆಯೇಗಿ ಬಾರಾತ್ ಮೂಲಕ ಹಿಂದಿ ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಣಿ ಮುಖರ್ಜಿ ತಾವು ನಟಿಯಾಗಲು ಉತ್ಸುಕರಾಗಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ತಂದೆ - ತಾಯಿ ಸಿನಿಮಾದ ಬಗ್ಗೆ ಮಾತನಾಡದ ಕುಟುಂಬದಿಂದ ಬಂದಿದ್ದೇನೆ ಎಂದಿದ್ದಾರೆ. ರಾಣಿಗೂ ಸಿನಿಮಾದಲ್ಲಿ ವಿಶೇಷ ಆಸಕ್ತಿ ಇರಲಿಲ್ಲ, ಆದರೆ ನಂತರ ತನ್ನ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಮನಗಂಡ ರಾಣಿ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು.

ಇದನ್ನೂ ಓದಿ : ಬಡ ಹೊಟ್ಟೆ ತುಂಬಿಸಲು ಅನ್ನವೆಂಬ ಅಮೃತವಿಡಿದು ಹೊರಟಿದೆ ʼಕಿಚ್ಚನ ದೂತʼರ ಸವಾರಿ..!

ರಾಣಿ ಮುಖರ್ಜಿ ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ, ನಾನು ಬೆಳೆಯುತ್ತಿರುವಾಗ, ನನಗೆ ಆಫರ್ ಬಂದಿತು. ನಿನಗೆ ಇಷ್ಟವಿಲ್ಲದಿದ್ದರೆ ಅದನ್ನು ನಿರಾಕರಿಸಿ ನಿಮ್ಮ ಅಧ್ಯಯನವನ್ನು ಮುಂದುವರಿಸಿ ಎಂದು ನನ್ನ ತಾಯಿ ನನಗೆ ಹೇಳಿದರು. ನನ್ನ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ನನಗೆ ಅರ್ಥವಾಗಿತ್ತು. ಇದಕ್ಕಾಗಿ ನಾಣು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡೆ. ನಂತರ ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಈಗ ನಾನು ನನ್ನ ವೃತ್ತಿಯನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. 

ತಾನು ನಟಿಯಾಗದೇ ಇದ್ದಿದ್ದರೆ ಇಂಟೀರಿಯರ್ ಡಿಸೈನರ್ ಆಗಬೇಕೆಂದು ಆರಂಭದಲ್ಲಿ ಯೋಚಿಸಿದ್ದೆ ಎಂದು ರಾಣಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ರಾಣಿ ಶೀಘ್ರದಲ್ಲೇ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಣಿ ಮುಖರ್ಜಿ ವೃತ್ತಿ ಜೀವನದಲ್ಲಿ ಕುಚ್ ಕುಚ್ ಹೋತಾ ಹೈ, ಬಂಟಿ ಔರ್ ಬಬ್ಲಿ, ಯುವ, ಮರ್ದಾನಿ ಸೇರಿದಂತೆ ಹಲವು ಅತ್ಯುತ್ತಮ ಚಿತ್ರಗಳು ಇಂದಿಗೂ ಜನರ ನೆಚ್ಚಿನ ಸಿನಿಮಾಗಳಾಗಿವೆ. 

ಇದನ್ನೂ ಓದಿ : ಮದುವೆ ನಂತರ ಮೊದಲ ಹೋಳಿ ಸಂಭ್ರಮಿಸಿದ ಸಿದ್‌-ಕಿಯಾರಾ ಜೋಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News