ಮದುವೆ ನಂತರ ಮೊದಲ ಹೋಳಿ ಸಂಭ್ರಮಿಸಿದ ಸಿದ್‌-ಕಿಯಾರಾ ಜೋಡಿ..!

ಬಾಲಿವುಡ್‌ ಸ್ಟಾರ್‌ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮೊದಲ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಕುರಿತು ಸಿದ್ಧಾರ್ಥ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಣ್ಣದಲ್ಲಿ ಮಿಂದೆಂದ ನವ ಜೋಡಿಯನ್ನು ನೋಡಿದ ಅವರ ಅಭಿಮಾನಿಗಳು ಕಾಮೆಂಟ್‌ ಮೂಲಕ ಹೋಳಿ ಹಬ್ಬದ ಶುಭ ಕೋರಿದ್ದಾರೆ.

Written by - Krishna N K | Last Updated : Mar 7, 2023, 07:14 PM IST
  • ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮೊದಲ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
  • ಈ ಕುರಿತು ಸಿದ್ಧಾರ್ಥ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
  • ಇತ್ತೀಚಿಗೆ ತಮ್ಮ ಹಲ್ದಿ ಸಮಾರಂಭ ಫೋಟೋ ಹಂಚಿಕೊಂಡು ಹೋಳಿ ಹಬ್ಬದ ಶುಭ ಕೋರಿದ್ದರು.
ಮದುವೆ ನಂತರ ಮೊದಲ ಹೋಳಿ ಸಂಭ್ರಮಿಸಿದ ಸಿದ್‌-ಕಿಯಾರಾ ಜೋಡಿ..! title=

Sidharth Kiara holi 2023 : ಬಾಲಿವುಡ್‌ ಸ್ಟಾರ್‌ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮೊದಲ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಕುರಿತು ಸಿದ್ಧಾರ್ಥ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಣ್ಣದಲ್ಲಿ ಮಿಂದೆಂದ ನವ ಜೋಡಿಯನ್ನು ನೋಡಿದ ಅವರ ಅಭಿಮಾನಿಗಳು ಕಾಮೆಂಟ್‌ ಮೂಲಕ ಹೋಳಿ ಹಬ್ಬದ ಶುಭ ಕೋರಿದ್ದಾರೆ.

ಇನ್ನು ಸೆಲ್ಫಿ ಹಂಚಿಕೊಂಡಿರುವ ಸಿದ್ಧಾರ್ಥ್ ಮಲ್ಹೋತ್ರಾ, "First Holi with the MRS" ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಜೋಡಿ ಸನ್‌ ಗ್ಲಾಸ್‌ ಹಾಕಿಕೊಂಡಿದ್ದಾರೆ. ಸಿದ್ಧಾರ್ಥ್ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಈ ಜೋಡಿ ತಮ್ಮ ಹಲ್ದಿ ಸಮಾರಂಭ ಫೋಟೋ ಹಂಚಿಕೊಂಡು ಹೋಳಿ ಹಬ್ಬದ ಶುಭ ಕೋರಿದ್ದರು. ಇದೀಗ ಬಣ್ಣ ಹಬ್ಬವನ್ನು ಆಚರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ: Murali Raju dies : ಖ್ಯಾತ ನಿರ್ಮಾಪಕ ಮುರಳಿ ರಾಜು ನಿಧನ..! ಅಲ್ಲು ಅರ್ಜುನ್‌ ಸಂತಾಪ

ಸಿದ್ಧಾರ್ಥ್ ಮಲ್ಹೋತ್ರಾ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2012 ರಲ್ಲಿ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಚೊಚ್ಚಲ ಪ್ರವೇಶಕ್ಕೂ ಮೊದಲು, ಅವರು ಕರಣ್ ಜೋಹರ್ ಅವರ 2010 ರ ಚಲನಚಿತ್ರ ಮೈ ನೇಮ್ ಈಸ್ ಖಾನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಸಿದ್ಧಾರ್ಥ್ ಮಲ್ಹೋತ್ರಾ ಶೇರ್ಷಾ, ಹಸೀ ತೋ ಫಾಸಿ, ಏಕ್ ವಿಲನ್, ಮರ್ಜಾವಾನ್, ಕಪೂರ್ ಅಂಡ್ ಸನ್ಸ್, ಎ ಜಂಟಲ್‌ಮ್ಯಾನ್ ಮತ್ತು ಬಾರ್ ಬಾರ್ ದೇಖೋ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News