Rakshak Bullet: ತಂದೆಯ ಜನ್ಮ ದಿನದಂದು ಮೊದಲ ಸಿನಿಮಾದ ಪೋಸ್ಟರ್‌ ಔಟ್!

Rakshak Bullet Movie: ಕನ್ನಡದ ನಟ ರಕ್ಷಕ್ ಬುಲೆಟ್‌ ತಂದೆಯ ಹುಟ್ಟು ಹಬ್ಬದಂದು ತಮ್ಮ ಮೊದಲ ಸಿನಿಮಾದ ಪೋಸ್ಟರ್‌ ಅನ್ನು ರಿಲೀಸ್‌ ಮಾಡಿ ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 3, 2024, 09:10 PM IST
  • ರಕ್ಷಕ್‌ ಹೊಸ ಹಾದಿಯ ಮೊದಲ ಅಧ್ಯಾಯವನ್ನು ಶುರು ಮಾಡುತ್ತಿದ್ದು, ಈ ಮೂಲಕ ಈತ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
  • ನಟ ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಅದರಲ್ಲಿ ಶೀಘ್ರದಲ್ಲೇ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್‌ ರಿವೀಲ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
  • ಜ್ಯೂನಿಯರ್‌ ಬುಲೆಟ್‌ ತಮ್ಮ ಮೊದಲ ಸಿನಿಮಾಗಾಗಿ ಕಳೆದ ಒಂದು ತಿಂಗಳಿನಿಂದ ಜಿಮ್‌ನಲ್ಲಿ ಸಖತ್‌ ವರ್ಕೌಟ್ ಮಾಡುತ್ತಿದ್ದಾರೆ.
Rakshak Bullet: ತಂದೆಯ ಜನ್ಮ ದಿನದಂದು ಮೊದಲ ಸಿನಿಮಾದ ಪೋಸ್ಟರ್‌ ಔಟ್! title=

Rakshak Bullet First Movie Poster: ಚಂದನವನದ ಪ್ರತಿಭಾನ್ವಿತ ನಟ ರಕ್ಷಕ್ ಬುಲೆಟ್‌ ತಮ್ಮ ಅಪ್ಪ ಬುಲೆಟ್ ಪ್ರಕಾಶ್ ಹುಟ್ಟು ಹಬ್ಬದಂದು ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಈ ಚಿತ್ರದಿಂದ ರಕ್ಷಕ್‌ ಹೊಸ ಹಾದಿಯ ಮೊದಲ ಅಧ್ಯಾಯವನ್ನು ಶುರು ಮಾಡುತ್ತಿದ್ದು, ಈ ಮೂಲಕ ಈತ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಸಿನಿಮಾ ತಯಾರಿಗಳ ಮಧ್ಯೆ ಪೋಸ್ಟರ್‌ವೊಂದು ರಿವೀಲ್‌ ಮಾಡಿದ್ದು, ಇನ್ನಷ್ಟು ಮಾಹಿತಿ ಮುಂದೆ ನೀಡಲಿದ್ದಾರೆ.

ನಟ ರಕ್ಷಕ್‌ ಬುಲೆಟ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಅದರಲ್ಲಿ ಶೀಘ್ರದಲ್ಲೇ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್‌ ರಿವೀಲ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ʻRB 01ʼ ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಹಾಗೆಯೇ ಈ ಪೋಸ್ಟರ್‌ ಟೈಟಲ್‌ನ ಕೆಳಗೆ "ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜ್ಞಾನ್ ಗಾಡಿಗಳು ಸೌಂಡ್ ಮಾಡ್ತವೆ ಆದ್ರೆ ಸೌಂಡ್ ಕೇಳಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ ...ಬುಲೆಟ್, ಇನ್ಮುಂದೆ ನಂದೆ ರೌಂಡು, ನಂದೇ ಸೌಂಡು" ಟ್ಯಾಗ್‌ ಲೈನ್‌ ಕೊಟ್ಟಿದ್ದಾರೆ.

 
 
 
 

 
 
 
 
 
 
 
 
 
 
 

A post shared by rakshak sena (@rakshak_bullet)

ಇದನ್ನೂ ಓದಿ: Ramayana : ನಿತೇಶ್ ತಿವಾರಿ 'ರಾಮಾಯಣ' ಶೂಟಿಂಗ್ ಶುರು; ರಾಮನ ಪಾತ್ರದಲ್ಲಿ ರಣಬೀರ್ ಕಪೂರ್

ರಕ್ಷಕ್‌ ಬುಲೆಟ್‌ ಪೋಸ್ಟರ್‌ ಬಿಡುಗಡೆ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ "ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕು ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಜ್ಯೂನಿಯರ್‌ ಬುಲೆಟ್‌ ತಮ್ಮ ಮೊದಲ ಸಿನಿಮಾಗಾಗಿ ಕಳೆದ ಒಂದು ತಿಂಗಳಿನಿಂದ ಜಿಮ್‌ನಲ್ಲಿ ಸಖತ್‌ ವರ್ಕೌಟ್ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಮಾರ್ಷಲ್ ಆರ್ಟ್ ಕಲಿಯೇಬೇಕೆಂದು ಸಜ್ಜಾಗುತ್ತಿದ್ದಾರೆ. ಇದೆಲ್ಲಾ ಸರಿಯಾಗಿ ನೋಡಿಕೊಂಡ ಮೇಲೆ ಫೋಟೋಶೂಟ್‌ ಮಾಡಿಸೋ ಪ್ಲಾನ್‌ನಲ್ಲಿ ಇದ್ದಾರೆ. ಹಾಗೆಯೇ ಈ ನಟನಿಗೆ ಅಪ್ಪನ ಹೆಸರಿನಲ್ಲಿಯೇ ಪ್ರೊಡಕ್ಷನ್ ಹೌಸ್ ಶುರು ಮಾಡೋ ಯೋಚನೆ ಕೂಡ ಇದೆ. ಈ ನಟ ಈಗಾಗಲೇ ಬಾಲ ಕಲಾವಿದನಾಗಿ ಗುರು ಶಿಷ್ಯರು ಹಾಗೂ ಗರಡಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News