Ramayana : ನಿತೇಶ್ ತಿವಾರಿ 'ರಾಮಾಯಣ' ಶೂಟಿಂಗ್ ಶುರು; ರಾಮನ ಪಾತ್ರದಲ್ಲಿ ರಣಬೀರ್ ಕಪೂರ್

ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ "ರಾಮಾಯಣ" ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದ್ದು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ. 

Written by - Zee Kannada News Desk | Last Updated : Apr 3, 2024, 07:42 PM IST
  • ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ.
  • ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸುವ ನಿರೀಕ್ಷೆಯಿದೆ.
  • 'ಗದರ್ 2' ನಟ ಸನ್ನಿ ಡಿಯೋಲ್ ಅವರನ್ನು ಹನುಮಾನ್ ಪಾತ್ರದಲ್ಲಿ ನಟಿಸುವ ಸಂಭವವಿದ್ದು, ಖಚಿತವಾಗಿಲ್ಲ ಎಂದು ತಿಳಿಸಿದೆ.
Ramayana : ನಿತೇಶ್ ತಿವಾರಿ 'ರಾಮಾಯಣ' ಶೂಟಿಂಗ್ ಶುರು; ರಾಮನ ಪಾತ್ರದಲ್ಲಿ ರಣಬೀರ್ ಕಪೂರ್  title=

ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ "ರಾಮಾಯಣ" ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದ್ದು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ. 

ಇದನ್ನು ಓದಿ : DC Vs KKR : ಟಾಸ್ ಗೆದ್ದ ಕೆಕೆಆರ್, ಬ್ಯಾಟಿಂಗ್ ಆಯ್ದುಕೊಂಡ ಅಯ್ಯರ್ ಪಡೆ

ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ "ರಾಮಾಯಣ"ಯಶ್, ಸಾಯಿ ಪಲ್ಲವಿ, ರಣಬೀರ್ ಕಪೂರ್ ಮುಂತಾದ ತಾರೆಯರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ . ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸುವ  ನಿರೀಕ್ಷೆಯಿದ್ದು, ಉಳಿದಿರುವ ಪ್ರಮುಖ ಮತ್ತು ಸಣ್ಣ ಪಾತ್ರಗಳಿಗಾಗಿ, ಇನ್ನೂ ಆಡಿಷನ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ

ಸಿನಿಮಾದ ಚಿತ್ರೀಕರಣಕ್ಕೂ ಮುನ್ನ ಸಣ್ಣ ಪುಟ್ಟ ಪೂಜಾ ವಿಧಿವಿಧಾನಗಳಿಂದ ಶೂಟಿಂಗ್‌ ಆರಂಭಿಸಲಾಗಿದ್ದು, ಚಿತ್ರೀಕರಣದಲ್ಲಿ ನಟ ರಣಬೀರ್ ಕಪೂರ್ ಮುಂದಿನ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ ಮತ್ತು 'ಗದರ್ 2' ನಟ ಸನ್ನಿ ಡಿಯೋಲ್ ಅವರನ್ನು ಹನುಮಾನ್ ಪಾತ್ರದಲ್ಲಿ ನಟಿಸುವ ಸಂಭವವಿದ್ದು, ಖಚಿತವಾಗಿಲ್ಲ ಎಂದು ತಿಳಿಸಿದೆ. 

DNEG ವರ್ಚುವಲ್ ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ ಈ ಚಲನಚಿತ್ರವು ಮೂರು ಆಕರ್ಷಕ ಭಾಗಗಳಲ್ಲಿ ವೀಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಚಿತ್ರದ ಮೊದಲ ಭಾಗವು ರಾಮ ಮತ್ತು ಸೀತೆಯ ಮೇಲೆ ಕೇಂದ್ರೀಕರಿಸುತ್ತದೆ. ರಾವಣನ ಆಗಮನವನ್ನು ಬಿಂಬಿಸುವ ಚಿತ್ರದ ಎರಡನೇ ಭಾಗ ಶ್ರೀಲಂಕಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಎರಡನೇ ಭಾಗದಲ್ಲಿ ರಾವಣನಿಗೆ ಪ್ರಾಮುಖ್ಯತೆ ನೀಡಲಾಗಿದೆ.

ಇದನ್ನು ಓದಿ : Google Update: ಹಿಂದಿ ಭಾಷೆಯಲ್ಲಿ ಎರಡು ಫ್ಯಾಕ್ಟ್ ಚೆಕ್ ಟೂಲ್ ಗಳನ್ನು ಬಿಡುಗಡೆ ಮಾಡಿದ ಗೂಗಲ್!

ವಿಎಫ್‌ಎಕ್ಸ್‌ನಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದಿರುವ DNEG ಕಂಪನಿಯು 'ರಾಮಾಯಣ'ದ ದೃಶ್ಯ ಪರಿಣಾಮಗಳನ್ನು ರಚಿಸುತ್ತದೆ ಮತ್ತು  ಸಿನಿಮಾದಲ್ಲಿ ಬಳಸಲಾಗುವ  VFX ಮತ್ತು ವಿಶೇಷ ಪರಿಣಾಮಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಇರುತ್ತವೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News