ರಶ್ಮಿಕಾ ಎಕ್ಸ್​ ಬಾಯ್​​ ಫ್ರೆಂಡ್ ಟ್ಯಾಗ್... ರಕ್ಷಿತ್‌ ಶೆಟ್ಟಿ ಅಚ್ಚರಿಯ ಹೇಳಿಕೆ

Sapta Sagaralu Dhaati : ಮ್ಯೂಸಿಕಲ್ ಲವ್ ಸ್ಟೋರಿಯಾಗಿ ತಯಾರಾಗಿರುವ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದಾರೆ. ಸಪ್ತ ಸಾಗರಲು ದಾಟಿ ಸಿನಿಮಾ ಟಾಲಿವುಡ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.   

Written by - Chetana Devarmani | Last Updated : Sep 22, 2023, 02:28 PM IST
  • ಮ್ಯೂಸಿಕಲ್ ಲವ್ ಸ್ಟೋರಿಯಾಗಿ ತಯಾರಾಗಿರುವ ಚಿತ್ರ
  • ಹೇಮಂತ್ ರಾವ್ ನಿರ್ದೇಶಿಸಿರುವ ಲವ್‌ ಸ್ಟೋರಿ
  • ಟಾಲಿವುಡ್‌ನಲ್ಲಿ ಬಿಡುಗಡೆಗೆ ಸಜ್ಜಾದ ಸಪ್ತ ಸಾಗರಲು ದಾಟಿ
ರಶ್ಮಿಕಾ ಎಕ್ಸ್​ ಬಾಯ್​​ ಫ್ರೆಂಡ್ ಟ್ಯಾಗ್... ರಕ್ಷಿತ್‌ ಶೆಟ್ಟಿ ಅಚ್ಚರಿಯ ಹೇಳಿಕೆ   title=

Rakshit Shetty On Rashmika Mandanna : ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಕನ್ನಡ ಸಿನಿಮಾ ಸಪ್ತ ಸಾಗರ ದಾಚೆ ಎಲ್ಲೋ ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಈ ಚಲನಚಿತ್ರವನ್ನು ಟಾಪ್ ನಿರ್ಮಾಣ ಕಂಪನಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಪ್ತ ಸಾಗರಲು ದಾಟಿ ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿದೆ. ಮ್ಯೂಸಿಕಲ್ ಲವ್ ಸ್ಟೋರಿಯಾಗಿ ತಯಾರಾಗಿರುವ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದಾರೆ. ಸಪ್ತ ಸಾಗರಲು ದಾಟಿ ಸಿನಿಮಾ ಟಾಲಿವುಡ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ಕುರಿತಾಗಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.  

ಇದನ್ನೂ ಓದಿ : ಬ್ಲೂ ಡ್ರೇಸ್‌ನಲ್ಲಿ ಬಿಟೌನ್‌ ಬೆಡಗಿ ಜಾನ್ವಿ ಶೈನ್‌..! ಗ್ಲಾಮರ್ ಕ್ವೀನ್ ಎಂದ ಫ್ಯಾನ್ಸ್‌ 

ಕಂಟೆಂಟ್ ಮೇಲೆಯೇ ಸಿನಿಮಾಗಳು ನಿಲ್ಲೋದು. ವಿಚಾರ ಚೆನ್ನಾಗಿದ್ದರೆ ಭಾಷೆಯ ಭೇದವಿಲ್ಲದೆ ಅನೇಕ ಸಿನಿಮಾಗಳು ಯಶಸ್ವಿಯಾಗುತ್ತವೆ ಎಂದಿದ್ದಾರೆ. ಹೃದಯಸ್ಪರ್ಶಿ ಭಾವನೆಗಳ ಕಥೆ ಹೊಂದಿರುವ ಈ ಸಿನಿಮಾ, ನಿರ್ದೇಶಕ ಹೇಮಂತ್ ಹತ್ತು ವರ್ಷಗಳ ಹಿಂದೆ ಬರೆದ ಕತೆಯಾಗಿದೆ ಎಂದು ರಕ್ಷಿತ್‌ ಹೇಳಿದ್ದಾರೆ. ಭಾವನಾತ್ಮಕ ಅಂಶಗಳಿರುವ ಸಪ್ತ ಸಾಗರಲು ದಾಟಿ ಸಿನಿಮಾ ಈಗ ತೆಲುಗು ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. 

ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಅವರ ಜೀವನದ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ಮಾಧ್ಯಮಗಳು ರಶ್ಮಿಕಾ ಮಂದಣ್ಣ ಮಾಜಿ ಪ್ರೇಮಿ ರಕ್ಷಿತ್ ಶೆಟ್ಟಿ ಅಂತ ಬರೆಯುತ್ತಿದ್ದಾರೆ ಈ ಬಗ್ಗೆ ಏನಂತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಪಲ್​ ಸ್ಟಾರ್‌ ತುಂಬಾ ಸಿಂಪಲ್‌ ಆಗಿಯೇ ಉತ್ತರ ನೀಡಿದ್ದಾರೆ. ಯಾವುದೇ ಬೇರೆ ಫೀಲಿಂಗ್ ಇಲ್ಲ. ಅದು ನಿಜಾನೆ ಅಲ್ವಾ. ಹಾಗೆಯೇ ಇರಲಿ ಬಿಡಿ ಎಂದಿದ್ದಾರೆ.  

ಇದನ್ನೂ ಓದಿ : 'ಅವಳೊಂದಿಗೆ ನಾನೂ ಸತ್ತಿದ್ದೇನೆ'..! ಮಗಳ ಅಗಲಿಕೆಗೆ ವಿಜಯ್ ಆಂಟನಿ ಸಂತಾಪ ಸಂದೇಶ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News