ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಾಂಗ್ ರಿಲೀಸ್; ನೀವು ಕೇಳಿದ್ರಾ..?

Horaata Lyrical Song: ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಬಿಡುಗಡೆಗೂ ಮುನ್ನ ಭಾರಿ ಸುದ್ದಿಯಲ್ಲಿದೆ. ಇದೀಗ ಈ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು, ಭಾರಿ ಸದ್ದುಮಾಡುತ್ತಿದೆ. ಜೀವನದಲ್ಲಿ ಸೋತು ಗೆಲುವಿನ ದಾರಿ ಹುಡುಕುವ ತವಕದ ಹಾಡು ಇದಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 

Written by - Zee Kannada News Desk | Last Updated : Jul 20, 2023, 01:43 PM IST
  • ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಸಾಂಗ್ ರಿಲೀಸ್
  • ಮೆಚ್ಚುಗೆ ಪಡೆದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸಾಂಗ್
  • ಅದ್ದೂರಿಯಾಗಿ ರಿಲೀಸ್ ಆಗಲಿರುವ ‘ಸಪ್ತ ಸಾಗರದಾಚೆ ಎಲ್ಲೋ’
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಾಂಗ್ ರಿಲೀಸ್; ನೀವು ಕೇಳಿದ್ರಾ..?  title=

Saptha Sagaradaache Ello Movie: ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಬಿಡುಗಡೆಗೂ ಮುನ್ನ ಭಾರಿ ಸುದ್ದಿಯಲ್ಲಿದೆ. ಇದೀಗ ಈ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ‘ಹೋರಾಟ.. ‘ಹೋರಾಟ ಎಂಬ ಸಾಹಿತ್ಯ ದಿಂದ ಕೂಡಿದ ಹಾಡು ಇದೀಗ ವೈರಲ್‌ ಆಗದೆ.

ಹಾಡನ್ನು ಕೇಳಿದ ನೆಟ್ಟಿಗರು ಜೀವನದಲ್ಲಿ ಸೋತು ಗೆಲುವಿನ ದಾರಿ ಹುಡುಕುವ ತವಕದ ಹಾಡಾಗಿದೆ. ಇನ್ನು ಈ ಚಿತ್ರವು ಹೇಗೆ ಇರಬಹುದೆಂದು ನೆಟ್ಟಿಗರು ಊಹಿಸಿದ್ದಾರೆ. ರಕ್ಷಿತ್‌ ಶೆಟ್ಟಿ ಸಿನಿಮಾಗಳೆಂದರೆ ಅಲ್ಲೊಂದು ರೋಚಕ ಕಥೆ ಇದ್ದೆ ಇರುತ್ತದೆ. ಹೀಗಾಗಿ ‘777 ಚಾರ್ಲಿ’ ಬಳಿಕ ಈ ಚಿತ್ರದ ಮೇಲೂ ನೀರಿಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: Sudeep vs Kumar: ಸುದೀಪ್‌ & ಕುಮಾರ್ ಎರಡೂ ಕಥೆ ಕೇಳಿದ ಬಳಿಕ ನಿರ್ಧಾರ- ರವಿಚಂದ್ರನ್

ಈ ಸಿನಿಮಾದ ಮೊದಲ ಸಾಂಗ್ ಇಂದು (ಜುಲೈ 20) ರಿಲೀಸ್ ಆಗಿದ್ದೂ, ಕೇಳುಗರಿಗೆ ಮತ್ತೆ ಮತ್ತೆ ಕೇಳಬೇಕನಿಸುತ್ತಿದೆ. ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಮೂಡಿದ  ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೋಡಿ ಮಾಡಿತ್ತು.ಇದೀಗ ಸಪ್ತ ಸಾಗರದಾಚೆ ಎಲ್ಲೋ’  ಮೂಲಕ ಮತ್ತೆ ಈ ಜೋಡಿಗಳು ಮತ್ತೆ ಸಂಚಲನ ಮೂಡಿಸಲಿದ್ದಾರೆ. 

ಇನ್ನು ಸಪ್ತ ಸಾಗರದಾಚೆ ಎಲ್ಲೋ’  ಸಿನಿಮಾದ ʼಹೋರಾಟ ಹಾಡು ಕೆಲವೇ ಘಂಟೆಗಳಲ್ಲಿ 60 ಸಾವಿರ, ವೀಕ್ಷಣೆ  ಹಾಗೂ 13 ಲೈಕ್ಸ್‌ ಪಡೆದುಕೊಂಡಿದೆ. ಹಾಡು ಕೇಳಿದ ರಕ್ಷಿತ್‌ ಫ್ಯಾನ್ಸ್‌ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ಚಿತ್ರತಂಡ ಹಾಗೂ ರಕ್ಷಿತ್‌ ಶೆಟ್ಟಿ ಚಿತ್ರ ಪ್ರಮೋಷನ್ನಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ಈ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News