Virat Kohli Biopic: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಈ ಸೌತ್‌ ಸ್ಟಾರ್‌.!

Ram Charan About Virat Kohli Biopic: ರಾಮ್ ಚರಣ್ ಅವರ ಇತ್ತೀಚಿನ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕ್ರೀಡಾ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ರಾಮ್‌ಚರಣ್‌ ಇರಲಿದ್ದಾರಾ ಎಂಬ ಅನುಮಾನಗಳಿಗೆ ಇದು ಕಾರಣವಾಗಿದೆ.   

Written by - Chetana Devarmani | Last Updated : Mar 20, 2023, 02:35 PM IST
  • ಬರಲಿದೆಯಾ ವಿರಾಟ್‌ ಕೊಹ್ಲಿ ಬಯೋಪಿಕ್‌?
  • ಕೊಹ್ಲಿ ಬಯೋಪಿಕ್‌ನಲ್ಲಿ ಈ ಸೌತ್‌ ಸ್ಟಾರ್‌.!
  • ರಾಮ್ ಚರಣ್ ಮಾತು ಸಖತ್‌ ವೈರಲ್‌
Virat Kohli Biopic: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಈ ಸೌತ್‌ ಸ್ಟಾರ್‌.! title=
Virat Kohli Biopic

Ram Charan About Virat Kohli Biopic: ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ನಟ ರಾಮ್ ಚರಣ್ ಇಂಡಿಯಾ ಟುಡೆ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಯಿತು. ತುಂಬಾ ಮುಕ್ತವಾಗಿ ಉತ್ತರಿಸಿದ ರಾಮ್‌ಚರಣ್‌ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ಒಂದು ಸರ್ಪ್ರೈಸ್ ಇರಲಿದೆ ಎಂದು ಹೇಳಿದ್ದಾರೆ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಬಗ್ಗೆಯೂ ಮಾತನಾಡಿದ್ದಾರೆ. ರಾಜಮೌಳಿ ಮತ್ತು ಎನ್ ಟಿಆರ್ ಜತೆಗಿನ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ಅದೇ ಕ್ರಮದಲ್ಲಿ ವಿರಾಟ್ ಕೊಹ್ಲಿ ಬಯೋಪಿಕ್ ಬಗ್ಗೆ ಕೂಡ ಮಾತನಾಡಿದ್ದು, ವೈರಲ್‌ ಆಗಿದೆ.

ಇದನ್ನೂ ಓದಿ: Malaika Arora: ಮದುವೆ ವಿಚಾರದಲ್ಲಿ ಮೌನ ಮುರಿದ ಮಲೈಕಾ.. ಹನಿಮೂನ್ ಮೂಡ್‌ನಲ್ಲಿದಿವಿ ಎಂದ ನಟಿ!

ಸ್ಪೋರ್ಟ್ಸ್ ಡ್ರಾಮಾದಲ್ಲಿ ನಟಿಸುವ ಆಸೆ ಇದೆ. ಅವಕಾಶ ಸಿಕ್ಕರೆ ಕೊಹ್ಲಿ ಬಯೋಪಿಕ್ ನಲ್ಲಿ ನಟಿಸುತ್ತೇನೆ. ನಾವಿಬ್ಬರೂ ಸ್ವಲ್ಪ ಒಂದೇ ರೀತಿ ಕಾಣುತ್ತೇವೆ. ಒಂದೇ ಗಡ್ಡ, ಒಂದೇ ಫೇಸ್‌ಕಟ್‌ ಇದೆ. ವಿರಾಟ್ ಕೊಹ್ಲಿ ತುಂಬಾ ಸ್ಪೂರ್ತಿದಾಯಕ ವ್ಯಕ್ತಿ ಎಂದು ರಾಮ್ ಚರಣ್ ಹೇಳಿದ್ದಾರೆ.

RRR ಪ್ರಯಾಣದ ಬಗ್ಗೆ ರಾಮ್ ಚರಣ್ ಮಾತನಾಡಿದರು. ಮೊದಲು ನಾನು ನಟಿಸುತ್ತೇವೆ ಎಂದು ಎನ್ ಟಿಆರ್ ಗೆ ಹೇಳಿಲ್ಲ.  ಎನ್ ಟಿಆರ್ ನಟಿಸುತ್ತಾರೆ ಎಂದು ನನಗೆ ಹೇಳಿಲ್ಲ. ಮನೆಗೆ ಕರೆದರು.. ಮನೆಗೆ ಹೋದಾಗ ಎನ್ ಟಿಆರ್ ಕೂಡ ಇದ್ದರು. ಆಗ ಆರ್‌ಆರ್‌ಆರ್ ಬಗ್ಗೆ ಹೇಳಿದ್ದು ನಾನು ನಿಮ್ಮಿಬ್ಬರನ್ನೂ ಕೂರಿಸಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ರಾಜಮೌಳಿಯವರಿಂದಾಗಿ ಚಿತ್ರಕ್ಕೆ ಯೆಸ್ ಅಂದಿದ್ದೇ ಆದರೆ ನಮ್ಮ ಸ್ನೇಹದ ಕುರಿತಾದ ಈ ಚಿತ್ರವನ್ನು ನಮಗೆ ಆಫರ್ ಮಾಡುದ್ದು ಸಂತಸ ಎಂದು ರಾಮ್ ಚರಣ್ ಹೇಳಿದ್ದಾರೆ.

ಇದನ್ನೂ ಓದಿ: Aishwarya Rajinikanth : ರಜನಿಕಾಂತ್ ಪುತ್ರಿ ಐಶ್ವರ್ಯಾ ಮನೆಯಲ್ಲಿ ಚಿನ್ನಾಭರಣ, ಹಣ ದರೋಡೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News