Aishwarya Rajinikanth : ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರು ಚೆನ್ನೈನ ತೇನಂಪೇಟೆನಲ್ಲಿರುವ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳು, ವಜ್ರ ಮತ್ತು ನವರತ್ನದ ಆಭರಣಗಳು ದರೋಡೆಯಾಗಿವೆ ಎಂದು ಹೇಳಿದ್ದಾರೆ. ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳತನ ಮಾಡಿರಬಹುದು ಎಂದು ಐಶ್ವರ್ಯಾ ರಜನಿಕಾಂತ್ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ದೂರಿನ ಮೇರೆಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ನಮೂದಿಸಿರುವ ಕದ್ದ ಚಿನ್ನಾಭರಣಗಳ ಅಂದಾಜು ಮೌಲ್ಯ 3.6 ಲಕ್ಷ ರೂ.ಗಳಾಗಿದೆ. 2019 ರಲ್ಲಿ ತನ್ನ ತಂಗಿ ಸೌಂದರ್ಯಾಳ ಮದುವೆಗೆ ಬಳಸಿದ ನಂತರ ಆಭರಣಗಳನ್ನು ತನ್ನ ಲಾಕರ್‌ನಲ್ಲಿ ಇರಿಸಿದ್ದೇನೆ ಎಂದು ಐಶ್ವರ್ಯಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Salman Khan V/s Lawrence Bishnoi: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ!
ಲಾಕರ್ ಐಶ್ವರ್ಯಾ ಅವರ ಬಳಿ ಇದ್ದರೂ ಅದನ್ನು ಹಲವು ಬಾರಿ ಸ್ಥಳಾಂತರಿಸಲಾಗಿದೆ. ಆಗಸ್ಟ್ 2021 ರವರೆಗೆ, ಅದು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿತ್ತು, ನಂತರ ಅದನ್ನು ಅವರು ನಟ ಧನುಷ್ ಅವರೊಂದಿಗೆ CIT ಕಾಲೋನಿಯಲ್ಲಿ ಹಂಚಿಕೊಂಡ ನಿವಾಸಕ್ಕೆ ಕೊಂಡೊಯ್ದರು. ಬಳಿಕ ಸೆಪ್ಟೆಂಬರ್ 2021 ರಲ್ಲಿ ಸೇಂಟ್ ಮೇರಿಸ್ ರಸ್ತೆಯ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 9, 2022 ರಂದು, ಲಾಕರ್ ನಟ ರಜನಿಕಾಂತ್ ಅವರ ಬೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಗೊಂಡಿತು. ಲಾಕರ್‌ನ ಕೀಲಿಗಳನ್ನು ಸೇಂಟ್ ಮೇರಿಸ್ ರಸ್ತೆಯ ಫ್ಲಾಟ್‌ನಲ್ಲಿರುವ ನನ್ನ ವೈಯಕ್ತಿಕ ಕಬ್ಬಿಣದ ಕಪಾಟಿನಲ್ಲಿ ಇರಿಸಲಾಗಿತ್ತು ಎಂದು ಐಶ್ವರ್ಯ ಹೇಳಿದ್ದಾರೆ.
ನನ್ನ ಸಿಬ್ಬಂದಿಗೆ ಇದು ತಿಳಿದಿದೆ. ನನ್ನ ಅನುಪಸ್ಥಿತಿಯಲ್ಲಿ ಅವರು ಆಗಾಗ್ಗೆ ಅಪಾರ್ಟ್ಮೆಂಟ್‌ಗೆ ಭೇಟಿ ನೀಡುತ್ತಾರೆ ಎಂದು ಐಶ್ವರ್ಯಾ ರಜನಿಕಾಂತ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫೆಬ್ರವರಿ 10 ರಂದು ಲಾಕರ್ ಅನ್ನು ಪರಿಶೀಲಿಸಿದಾಗ, ತನ್ನ ಮದುವೆಯಲ್ಲಿ ಖರೀದಿಸಿದ್ದ ಆಭರಣಗಳು ಕಾಣೆಯಾಗಿವೆ ಎಂದು ಐಶ್ವರ್ಯಾ ಹೇಳಿದರು. ಆಕೆಯ ದೂರಿನ ಆಧಾರದ ಮೇಲೆ ತೇನಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 (ಮನೆಕೆಲಸಗಾರರಿಂದ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾಲು ಮರದ ತಿಮ್ಮಕ್ಕ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದ ಕಿರುತೆರೆ ನಟಿ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.