Ranbir Kapoor Daughter: ಐಷಾರಾಮಿ ಬಂಗಲೆಯ ಒಡತಿಯಾದ ರಣಬೀರ್-ಆಲಿಯಾ ಪುತ್ರಿ: ಇದರ ಬೆಲೆಯೆಷ್ಟು ಗೊತ್ತೇ??

Ranbir Kapoor Daughter Bunglow: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹಾಗೂ ನಟಿ ಆಲಿಯಾ ಭಟ್ ತಮ್ಮ ಒಂದು ವರ್ಷದ ಪುತ್ರಿಯ ಹೆಸರಲ್ಲಿ ದುಬಾರಿ ಬೆಲೆಯ ಬಂಗಲೆಯನ್ನು ರೆಜಿಸ್ಟಾರ್‌ ಮಾಡಿದ್ದಾರೆ? ಹಾಗಿದ್ರೆ ಈ ಬಂಗಲೆ ಎಲ್ಲಿದೆ? ಇದರ ಮೊತ್ತ ಎಷ್ಟು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. 

Written by - Zee Kannada News Desk | Last Updated : Mar 30, 2024, 11:46 AM IST
  • ಮುಂಬೈನ ಹೃದಯ ಭಾಗವಾದ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಕೃಷ್ಣ ರಾಜ್ ಬಂಗಲೆಗೆ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನೀತು ಕಪೂರ್‌ ಭೇಟಿ ನೀಡಿದ್ದರು.
  • ಇದೀಗ ರಾಹಾ ಕಪೂರ್‌ ಬಹಳ ಚಿಕ್ಕ ವಯಸ್ಸಿನ ಅತೀ ಹೆಚ್ಚು ಆಸ್ತಿ ಹೊಂದಿದ ಸ್ಟಾರ್‌ ಕಿಡ್‌ ಅನ್ನೋ ಖ್ಯಾತಿ ಪಡೆದಿದ್ದಾರೆ.
  • ರಣಬೀರ್ ಕಪೂರ್ ಈ ಪಿತ್ರಾರ್ಜಿತ ಆಸ್ತಿಯಲ್ಲಿ ಕಪೂರ್ ಕುಟುಂಬದಲ್ಲಿ ಏಕೈಕ ಮೊಮ್ಮಗ ಆಗಿದ್ದಾರೆ.
Ranbir Kapoor Daughter: ಐಷಾರಾಮಿ ಬಂಗಲೆಯ ಒಡತಿಯಾದ ರಣಬೀರ್-ಆಲಿಯಾ ಪುತ್ರಿ: ಇದರ ಬೆಲೆಯೆಷ್ಟು ಗೊತ್ತೇ?? title=

Ranbir Kapoor Daughter Bunglow Price: ಬಾಲಿವುಡ್‌ ಸ್ಟಾರ್‌ ಜೋಡಿಯಾದ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಮಗಳ ಹೆಸರಿಗೆ ಐಷಾರಾಮಿ ಬಂಗಲೆಯನ್ನು ರೆಜಿಸ್ಟರ್‌ ಮಾಡಿದ್ದಾರೆ.  ಮುಂಬೈನ ಹೃದಯ ಭಾಗವಾದ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಕೃಷ್ಣ ರಾಜ್ ಬಂಗಲೆಗೆ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನೀತು ಕಪೂರ್ ಭೇಟಿ ನೀಡಿದ್ದರು. ಈ ಬಂಗಲೆಯು 250 ಕೋಟಿ ರೂ.ಗೂ ಅಧಿಕ ಮೌಲ್ಯವಾಗಿದೆ.

ಹೌದು.. ಕಪೂರ್‌ ಕುಟುಂಬರ ಕುಡಿ, ರಣಬೀರ್-ಆಲಿಯಾ ಪುತ್ರಿಯಾದ ರಾಹಾ ಕಪೂರ್‌ 250 ಕೋಟಿ ರೂ. ಮೌಲ್ಯದ ಬಂಗಲೆಗೆ ಒಡತಿಯಾಗಿದ್ದಾಳೆ. ಈ ಸ್ಟಾರ್‌ ದಂಪತಿ ಮುಂಬೈನ ಐಷಾರಾಮಿ ಬಂಗಲೆಯನ್ನು ಮಗಳು ರಾಹಾ ಹೆಸರಲ್ಲಿ ಖರೀದಿಸಿದ್ದಾರೆ. ಇದೀಗ ರಾಹಾ ಕಪೂರ್‌ ಬಹಳ ಚಿಕ್ಕ ವಯಸ್ಸಿನ ಅತೀ ಹೆಚ್ಚು ಆಸ್ತಿ ಹೊಂದಿದ ಸ್ಟಾರ್‌ ಕಿಡ್‌ ಅನ್ನೋ ಖ್ಯಾತಿ ಪಡೆದಿದ್ದಾರೆ.

ಇದನ್ನೂ ಓದಿ: Ramana Avatara: ಶೀಘ್ರದಲ್ಲೇ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ʻರಾಮನ ಅವತಾರʼ: ರಿಲೀಸ್‌ ಡೇಟ್‌ ಫಿಕ್ಸ್!

ಕೃಷ್ಣ ರಾಜ್ ಬಂಗಲೆಗೂ ಹಾಗೂ ಕಪೂರ್ ಕುಟುಂಬಕ್ಕೂ ನಂಟಿದೆ. ದಿವಂಗತ ಹಿರಿಯ ನಟ ರಾಜ್ ಕಪೂರ್ ಮತ್ತು ಅವರ ಪತ್ನಿ ಕೃಷ್ಣ ರಾಜ್ ಈ ಬಂಗಲೆಯನ್ನು ಹೊಂದಿದ್ದರು. ರಣಬೀರ್ ಕಪೂರ್ ಈ ಪಿತ್ರಾರ್ಜಿತ ಆಸ್ತಿಯಲ್ಲಿ ಕಪೂರ್ ಕುಟುಂಬದಲ್ಲಿ ಏಕೈಕ ಮೊಮ್ಮಗ ಆಗಿದ್ದಾರೆ. ರಣಬೀರ್‌ ಕಪೂರ್‌ ತಂದೆ ರಿಷಿ ಕಪೂರ್ ಸಾಯುವುದಕ್ಕೂ ಮುನ್ನ ಸೈಟ್‌ಗೆ ಭೇಟಿದ್ದರು. ಹಾಗೆ ಇದನ್ನು ಇಷ್ಟಪಟ್ಟಿದ್ದರ ಕಾರಣ ಈ ದುಬಾರಿ ಮೌಲ್ಯದ ಬಂಗಲೆಯನ್ನು ರಾಹಾ ಹೆಸರಿಗೆ ರಿಜಿಸ್ಟರ್ ಮಾಡಿದ್ದಾರೆ.

ರಣ್‌ಬೀರ್-ಆಲಿಯಾ ಹೆಸರಲ್ಲಿ ಮುಂಬೈ ಬಾಂದ್ರಾದಲ್ಲಿ ಈಗಾಗಲೇ 60 ಕೋಟಿಗೂ ಹೆಚ್ಚು ಮೌಲ್ಯದ 4 ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಐಷಾರಾಮಿ ಬಂಗಲೆ ಖರೀದಿಸಿದ್ದು ಸೋಶಿಯಲ್‌ ಮಿಡಿಯಾದಲ್ಲಿ ಚರ್ಚೆ ಶೂರುವಾಗಿದೆ. ರಾಹಾ ಅವರ ಅಜ್ಜಿ ನೀತು ಕಪೂರ್ ಸಹ ₹ 15 ಮೌಲ್ಯದ ಮನೆಯನ್ನು ಹೊಂದಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಕೋಟಿ ರೂ. ಬಂಗಲೆಯು ಪ್ರವೇಶಿಸಲು ಸಿದ್ಧವಾದ ನಂತರ ಕಪೂರ್ ಕುಟುಂಬವು ಒಟ್ಟಿಗೆ ಇರುತ್ತಾರೆ ಎಂಬ ಊಹಾ ಪೂಹಗಳು ಹರಿದಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News