ಈ ಖ್ಯಾತ ನಟಿ ಬಳಿ ಅಂದು ಬಾಡಿಗೆ ಕಟ್ಟಲು ದುಡ್ಡಿರಲಿಲ್ಲ, ಇಂದು ಸಿನಿರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ !

Rashmika Mandanna Net worth: ಕನ್ನಡದ ಬಳಿಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಬಳಿಕ ಬಾಲಿವುಡ್‌ಗೂ ಎಂಟ್ರಿಕೊಟ್ಟರು. 

Written by - Chetana Devarmani | Last Updated : Apr 6, 2024, 10:16 AM IST
  • ರಕ್ಷಿತ್‌ ಶೆಟ್ಟಿ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ
  • ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್‌ ಕ್ರಷ್‌ ಆಗಿದ್ದಾರೆ
  • ಕನ್ನಡದ ಬಳಿಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ
ಈ ಖ್ಯಾತ ನಟಿ ಬಳಿ ಅಂದು ಬಾಡಿಗೆ ಕಟ್ಟಲು ದುಡ್ಡಿರಲಿಲ್ಲ, ಇಂದು ಸಿನಿರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ! title=

Rashmika Mandanna Remuneration: ರಕ್ಷಿತ್‌ ಶೆಟ್ಟಿ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್‌ ಕ್ರಷ್‌ ಆಗಿದ್ದಾರೆ. ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ ಚಿತ್ರದಲ್ಲಿ ನಟಿಸಿದ ಬಳಿಕ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆದರು. ರಶ್ಮಿಕಾ ಮೂಲತಃ ಕರ್ನಾಟಕದ ಕೊಡಗಿನವರು. ಕನ್ನಡದ ಬಳಿಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಬಳಿಕ ಬಾಲಿವುಡ್‌ಗೂ ಎಂಟ್ರಿಕೊಟ್ಟರು.  

ರಶ್ಮಿಕಾ ಮಂದಣ್ಣ 5 ಏಪ್ರಿಲ್ 1996 ರಂದು ವಿರಾಜಪೇಟೆಯಲ್ಲಿ ಜನಿಸಿದರು. ರಶ್ಮಿಕಾ ಇಂಗ್ಲಿಷ್ ಸಾಹಿತ್ಯ, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ನ ಕಾಲೇಜು ದಿನಗಳಲ್ಲಿ ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಎಂಬ ಬಿರುದನ್ನು ಗೆದ್ದಿದ್ದರು. 2014 ರಲ್ಲಿ, ಅವರು ಕಾಲೇಜಿನ ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಗೆದ್ದರು. ಆ ಬಳಿಕ ಕಿರಿಕ್‌ ಪಾರ್ಟಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. 

ಇದನ್ನೂ ಓದಿ: Star Heroine: ಮದುವೆಗೂ ಮುನ್ನವೇ ಈ ಸ್ಟಾರ್ ಹೀರೋಯಿನ್ ಪ್ರೆಗ್ನೆಂಟ್‌? ಸೀಮಂತದ ಫೋಟೋ ವೈರಲ್!

ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುವ ನಟಿ ರಶ್ಮಿಕಾ ಮಂದಣ್ಣ ಜೀವನದಲ್ಲಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ್ದಾರೆ. ಇರಲು ಬಾಡಿಗೆ ಮನೆ ಹುಡುಕಲು ಸಾಕಷ್ಟು ಕಷ್ಟಪಡುತ್ತಿದ್ದರು. ಹಾಗೋಹೀಗೋ ಮಾಡಿ ಮನೆ ಹುಡುಕಿದರೆ, ಆಗ ಬಾಡಿಗೆ ಕಟ್ಟಲೂ ಅವರ ಬಳಿ ಹಣವಿರಲಿಲ್ಲ. 

ಇದೀಗ ರಶ್ಮಿಕಾ ಮಂದಣ್ಣ ಚಿತ್ರವೊಂದಕ್ಕೆ ಸುಮಾರು 4 ಕೋಟಿ ರೂ ಸಂಭಾವನೆ ತೆಗೆದುಕೊಳ್ಳುತ್ತಾರೆ. ನಟಿ ವರ್ಷಕ್ಕೆ 8 ಕೋಟಿ ರೂ.ಗಿಂತ ಹೆಚ್ಚು ಸಂಪಾದಿಸುತ್ತಾರೆ. ಸಿನಿಮಾಗಳಲ್ಲದೇ, ರಶ್ಮಿಕಾ ಅನೇಕ ಪ್ರಾಡಕ್ಟ್‌ ಗಳ ಬ್ರಾಂಡ್ ಪ್ರಚಾರಗಳನ್ನು ಸಹ ಮಾಡುತ್ತಾರೆ. ರಶ್ಮಿಕಾ ಮಂದಣ್ಣ ಸುಮಾರು 65 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆತಿಯಾಗಿದ್ದಾರೆ.

ಇದನ್ನೂ ಓದಿ: ಓವರ್ ಆ್ಯಕ್ಟಿಂಗ್, ಎರಡನೇ ಪಾರ್ಟ್‌ನಲ್ಲಿ ಮಂತ್ರವಾದಿ..! ಹೀಗಿದೆ ಶರಣ್‌ ʼಅವತಾರ ಪುರುಷ 2ʼ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News