ಮತ್ತೊಂದು ಕರಾವಳಿ ಕಥೆ ಹೊತ್ತು ಬಂದ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ

Adhipatra Movie: ಟೀಸರ್ ಮೂಲಕವೇ ಗರಿಗೆದರಿದ 'ಅಧಿಪತ್ರ' ಸಿನಿಮಾ. ಕರಾವಳಿ ಭಾಗದಲ್ಲಿ ಇಂದಿಗೂ ಆಚರಣೆ ಯಲ್ಲಿರುವ ಆಟಿ ಕಳಂಜಾ, ಹುಲಿ ಕುಣಿತದ ಟೀಸರ್ ಸ್ಪೆಷಾಲಿಟಿ ಏನು? 

Written by - Zee Kannada News Desk | Last Updated : May 11, 2024, 02:05 PM IST
  • ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ
  • ಕರಾವಳಿಯ ಭಾಗದ ಸುತ್ತ ಅಧಿಪತ್ರ
  • ಕುತೂಹಲ ಹೆಚ್ಚಿಸಿದ ಟೀಸರ್
ಮತ್ತೊಂದು ಕರಾವಳಿ ಕಥೆ ಹೊತ್ತು ಬಂದ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ  title=

Rupesh Shetty starrer Adhipatra : ಸಿನಿಮಾವೊಂದು ಆರಂಭವಾದ ಬಳಿಕ ಕ್ರಿಯಾಶೀಲತೆಯ ಹಾದಿಯಲ್ಲಿಯೇ ಪ್ರೇಕ್ಷಕರನ್ನು ಸೆಳೆಯೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ನೋಡುವುದಾದರೆ, ಅಧಿಪತ್ರ ಮೊದಲ ಪ್ರಯತ್ನದಲ್ಲಿಯೇ ಗೆದ್ದಂತಿದೆ. ಬಿಡುಗಡೆಯಾಗಿರುವ ಅಧಿಪತ್ರ ಟೀಸರ್ ಕುತೂಹಲವನ್ನು ಗರಿಗೆದರುವಂತೆ ಮಾಡಿದೆ.

ಕರಾವಳಿ ಭಾಗದ ಕಥೆ ಹೊತ್ತು ಬಂದಿರುವ ಅಧಿಪತ್ರ ಸಿನಿಮಾ ಮೊದಲ‌ ತುಣುಕಿನಲ್ಲಿ‌ ಕರಾವಳಿ ಭಾಗದ ವಿಶೇಷ ಆಚರಣೆ ಆಟಿ ಕಳಂಜಾ , ಯಕ್ಷಗಾನ, ಹುಲಿ ಕುಣಿತದ ಜೊತೆಗೆ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಕುರಿಸುವ ಕಂಟೆಂಟ್ ಕೂಡ ಇದೆ. ಆದರೆ ಆ ಕಂಟೆಂಟ್ ಏನೂ ಅನ್ನೋದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಖಾಕಿ‌ ಖದರ್ ನಲ್ಲಿ ರೂಪೇಶ್ ಶೆಟ್ಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ‌ ಚಯನ್ ಶೆಟ್ಟೆ ಗಟ್ಟಿ ಕಥೆಯೊಂದನ್ನು ಹೊತ್ತು ಬಂದಿರುವ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ:  ಇಂದಿನ ಕಥೆ ಹೇಳಲು ಬಂತು “ಎಂಥಾ ಕಥೆ ಮಾರಾಯ” 

'ಕಾಂತಾರ’ ಸಿನಿಮಾದ ಖ್ಯಾತಿಯ ಪ್ರಕಾಶ್ ತುಮಿನಾಡು, ಎಂ.ಕೆ.‌ ಮಠ, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ತಾರಾಬಳಗದಲ್ಲಿದ್ದು, ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಜಾಹ್ನವಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 

ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್,  ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಚಿತ್ರ ನಿರ್ಮಾಣ ಮಾಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ. ಶೂಟಿಂಗ್  ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿಯೇ ಬ್ಯುಸಿ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸಲಿದೆ.

ಇದನ್ನೂ ಓದಿ:  ಕ್ರಿಕೆಟ್ ಬಾಲ್ ಡ್ರೆಸ್.. ಜಾನ್ವಿ ಕಪೂರ್ ಬೋಲ್ಡ್ ಸ್ಟೈಲ್‌ಗೆ ಫಿದಾ ಆದ ಪಡ್ಡೆಹೈಕ್ಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News