ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ... ಶುರುವಾಯ್ತು ಹೊಸ ಗಾಸಿಪ್‌!

Aamir Khan son Junaid Khan : ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಾಯಿ ಪಲ್ಲವಿ ಕುರಿತು ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 

Written by - Chetana Devarmani | Last Updated : Sep 15, 2023, 04:06 PM IST
  • ಸಾಯಿ ಪಲ್ಲವಿ ಕುರಿತು ಹೊಸ ಸುದ್ದಿ
  • ಅಮೀರ್ ಖಾನ್ ಮಗ ಜುನೈದ್ ಖಾನ್
  • ಸಿನಿವಲಯದಲ್ಲಿ ಹೊಸ ಗಾಸಿಪ್‌!
ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ... ಶುರುವಾಯ್ತು ಹೊಸ ಗಾಸಿಪ್‌!  title=

Sai Pallavi Bollywood entry : ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಮುಂದಿನ ಸಿನಿಮಾದಲ್ಲಿ ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಹರಿದಾಡುತ್ತಿದೆ. ಜುನೈದ್ ಖಾನ್ ಶೀಘ್ರದಲ್ಲೇ YRF ಚಲನಚಿತ್ರದಲ್ಲಿ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ. 'ಮಾರಿ 2', 'ಫಿದಾ' ಮತ್ತು 'ಗಾರ್ಗಿ' ಚಿತ್ರಗಳ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ಸಾಯಿ ಪಲ್ಲವಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. 

ವರದಿಯ ಪ್ರಕಾರ, ಜುನೈದ್ ಅವರ ಹೆಸರಿಡದ ಸಿನಿಮಾ ತಯಾರಿ ಪ್ರಾರಂಭವಾಗಿದೆ. ಸಾಯಿ ಪಲ್ಲವಿ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ.  ಸುನೀಲ್ ಪಾಂಡೆ ನಿರ್ದೇಶನದ ಚಿತ್ರ ಎಂದು ಹೇಳಲಾಗಿದೆ. ಇದು ಒಂದು ಪ್ರೇಮ ಕಥೆ ಎನ್ನಲಾಗಿದೆ.

ಇದನ್ನೂ ಓದಿ: ಚಕ್ ದೇ ಇಂಡಿಯಾ ಖ್ಯಾತಿಯ ಬಾಲಿವುಡ್ ನಟ ರಿಯೊ ಕಪಾಡಿಯಾ ಇನ್ನಿಲ್ಲ  

ಮಗನ ಸಿನಿಮಾ ಎಂಟ್ರಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಮಿರ್‌ ಖಾನ್‌, ಅದು ಅವನಿಗೆ ಬಿಟ್ಟಿದ್ದು. ಅವನು ತನ್ನ ಸ್ವಂತ ಜೀವನವನ್ನು ನಡೆಸಬೇಕು. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ಎಲ್ಲವನ್ನೂ ಅವನಿಗೆ ಬಿಟ್ಟಿದ್ದೇನೆ. ಅವನಿಗೆ ಖಂಡಿತವಾಗಿಯೂ ಒಲವು ಇದೆ. ಸೃಜನಾತ್ಮಕ ಪ್ರಪಂಚದ ಕಡೆಗೆ ಮತ್ತು ಚಲನಚಿತ್ರ ನಿರ್ಮಾಣದ ಕಡೆಗೆ ಬರಬಹುದು. ರಂಗಭೂಮಿ ಅಧ್ಯಯನ ಮಾಡಿದ್ದಾನೆ. ಚಲನಚಿತ್ರಗಳಿಗಿಂತ ರಂಗಭೂಮಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂದು ಹೇಳಿದ್ದರು.

ಕಳೆದ ತಿಂಗಳು ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮೀರ್ ಖಾನ್ ತಮ್ಮ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಭಾಗವಹಿಸಿದ್ದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರ ಪುತ್ರ ಜುನೈದ್ ಖಾನ್ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಶಾರುಖ್ ಸಿನಿಮಾ ಪೈರೇಟೆಡ್ ಕಂಟೆಂಟ್‌ ಮಾರಾಟ ಮಾಡುವವರ ವಿರುದ್ಧ ದೂರು ದಾಖಲು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News