Sai Pallavi : ಅಮೀರ್ ಖಾನ್ ಮಗನ ಜೊತೆ ಪಬ್‌ನಲ್ಲಿ ಪಾರ್ಟಿ ಮಾಡಿದ ಸಾಯಿ ಪಲ್ಲವಿ..! ವಿಡಿಯೋ ವೈರಲ್‌ 

Sai Pallavi : ನ್ಯಾಚುಲರ್ ಬ್ಯೂಟಿ ನಟಿ ಸಾಯಿ ಪಲ್ಲವಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮೀರ್‌ ಖಾನ್‌ ಪುತ್ರನ ಜೊತೆ ಜಪಾನ್‌ನಲ್ಲಿ ಪಾರ್ಟಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಅಮೀರ್‌ ಪುತ್ರನ ಜೊತೆ ಸಾಯಿ ಅಲ್ಲೇನು ಮಾಡ್ತೀದಾರೆ ಅಂತ ನೆಟ್ಟಿಗರು ಪ್ರಶ್ನೆ ಮಾಡ್ತೀದಾರೆ.. 

Written by - Krishna N K | Last Updated : Mar 9, 2024, 09:16 PM IST
    • ಅಮೀರ್‌ ಖಾನ್‌ ಪುತ್ರನ ಜೊತೆ ಸಾಯಿ ಪಲ್ಲವಿ ಪಾರ್ಟಿ
    • ಕುಣಿದು ಕುಪ್ಪಳಿಸಿದ ಪಲ್ಲವಿ ವಿಡಿಯೋ ವೈರಲ್‌
    • ಅಮೀರ್‌ ಖಾನ್‌ ಪುತ್ರ ಜುನೈದ್‌ ಖಾನ್‌ ಜೊತೆ ಪಲ್ಲವಿ
Sai Pallavi : ಅಮೀರ್ ಖಾನ್ ಮಗನ ಜೊತೆ ಪಬ್‌ನಲ್ಲಿ ಪಾರ್ಟಿ ಮಾಡಿದ ಸಾಯಿ ಪಲ್ಲವಿ..! ವಿಡಿಯೋ ವೈರಲ್‌  title=
Sai pallavi

Sai pallavi with Junaid khan : ಸೌತ್‌ ಸಿನಿರಂಗದ ಕ್ಯೂಟ್‌ ಬ್ಯೂಟಿ ಸಾಯಿ ಪಲ್ಲವಿಗೆ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಪ್ರೇಮಂ ಸಿನಿಮಾದಿಂದ ಇಲ್ಲಿಯವರೆಗೆ ಮಾಡಿದ ಎಲ್ಲಾ ಸಿನಿಮಾಗಳಲ್ಲಿ ಸಿನಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಾಕಷ್ಟು ಪ್ಯಾನ್‌ ಬೇಸ್‌ ಹೊಂದಿರುವ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು.

ಹೌದು.. ಗಾರ್ಗಿ ಚಿತ್ರದ ನಂತರ ಬ್ರೇಕ್ ತೆಗೆದುಕೊಂಡಿದ್ದ ನಟಿ ಸಾಯಿ ಪಲ್ಲವಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಸೇರಿದಂತೆ ಇದೀಗ ಹಿಂದಿಗೂ ಕಾಲಿಟ್ಟ ನ್ಯಾಚುರಲ್‌ ಬ್ಯೂಟಿ ಸಖತ್‌ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪಲ್ಲವಿ ಅಮೀರ್‌ ಖಾನ್‌ ಮಗನ ಜೊತೆ ಪಾರ್ಟಿ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

ಇದನ್ನೂ ಓದಿ :  ದುಡ್ಡು ಕೊಟ್ಟು ಕರೆಸಿಕೊಂಡು...! ಬಿಟೌನ್‌ ಸೆಲೆಬ್ರೆಟಿಗಳ ರಹಸ್ಯ ಬಯಲು ಮಾಡಿದ ಪ್ರಿಯಾ ಮಣಿ

ಹೌದು.. ಬಾಲಿವುಡ್‌ಗೆ ಎಂಟ್ರಿ ಕೊಡಲಿರುವ ಸುಂದರಿ, ಬಿಟೌನ್‌ ಸ್ಟಾರ್ ಹೀರೋ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ನಡೆಯುತ್ತಿತ್ತು, ಇತ್ತೀಚಿಗೆ ಶೆಡ್ಯೂಲ್ ಮುಗಿದ ಹಿನ್ನೆಲೆ ಚಿತ್ರತಂಡ ಪಬ್‌ನಲ್ಲಿ ಪಾರ್ಟಿ ಮಾಡಿತ್ತು. ಈ ವೇಳೆ ಸಾಯಿ ಪಲ್ಲವಿ ಟೀಂ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.

ಸಧ್ಯ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಲ್ಲವಿ ಡ್ಯಾನ್ಸ್ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ, ಸೂಪರ್‌ ಅಂತ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News