ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್ ಶೋ ಅತಿಥಿಯಾಗಿ ಸಮಂತಾ.. ಹಳೆಯ ವಿಡಿಯೋ ವೈರಲ್!‌

samantha guest in sai pallavi dance show: ಸಮಂತಾ ಹಾಗೂ ಸಾಯಿ ಪಲ್ಲವಿ ಟಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಗಳಾಗಿದ್ದಾರೆ.  

Written by - Chetana Devarmani | Last Updated : Mar 30, 2024, 01:19 PM IST
  • ಸಾಯಿ ಪಲ್ಲವಿ ಡ್ಯಾನ್ಸ್ ಶೋಗೆ ಸಮಂತಾ ಅತಿಥಿ
  • ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್ ಶೋ ಅತಿಥಿಯಾಗಿ ಸಮಂತಾ.. ಹಳೆಯ ವಿಡಿಯೋ ವೈರಲ್!‌ title=

Sai Pallavi Samantha's dance show video viral : ಲೇಡಿ ಸೂಪರ್ ಸ್ಟಾರ್‌ ಸಾಯಿ ಪಲ್ಲವಿ ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್‌ನ ಟಾಪ್ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಕ್ರೇಜ್ ಇನ್ನೊಂದು ಲೆವೆಲ್ ನಲ್ಲಿದೆ ಎನ್ನಬಹುದು. ಇನ್ನೊಂದೆಡೆ ಸಮಂತಾ ಸ್ಟಾರ್ ಹೀರೋಯಿನ್ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 

ಈ ನಡುವೆ ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋ ಒಂದಕ್ಕೆ ಸಮಂತಾ ಅತಿಥಿಯಾಗಿ ಹೋಗಿದ್ದ ಹಳೆಯ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ. ಇಬ್ಬರೂ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕ್ಷಣ ಇದಾಗಿದೆ. ಆಗ ಸಮಂತಾ ನಾಯಕಿ ಆಗಿದ್ದರು. ಆದರೆ ಸಾಯಿ ಪಲ್ಲವಿ ಡ್ಯಾನ್ಸ್‌ ಶೋ ಸ್ಪರ್ಧಿಯಾಗಿದ್ದರು. ನೃತ್ಯ ಸ್ಪರ್ಧಿಯಾಗಿ ಮಿಂಚಿದ್ದರು. ಉದಯಭಾನು ಇದಕ್ಕೆ ಆಂಕರ್ ಆಗಿದ್ದರು. 

ಇದನ್ನೂ ಓದಿ:ಐಶ್ವರ್ಯಾ ರೈ ಮೊದಲ ಗಂಡ ಅಭಿಷೇಕ್‌ ಬಚ್ಚನ್‌ ಅಲ್ಲ... ಇದು ಎರಡನೇ ಮದುವೆ! ಅಮಿತಾಬ್‌ ಬಚ್ಚನ್‌ ಗೂ ಗೊತ್ತಿತ್ತಂತೆ ಈ ವಿಚಾರ!!

ಈ ಡ್ಯಾನ್ಸ್‌ ಶೋಡ್ಯಾನ್ಸ್‌ ಶೋ ಅತಿಥಿಯಾಗಿ ಬಂದಿದ್ದು ಸಮಂತಾ. ‘ಎಂ ಮಾಯ ಚೇಸಾವೆ’ ಸಿನಿಮಾ ಮಾಡಿ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದ ಸಮಂತಾ ಈ ಶೋ ಗೆ ಗೆಸ್ಟ್‌ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಕೂಡ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಡ್ಯಾನ್ಸ್‌ ಶೋನಲ್ಲಿ ತಮ್ಮ ನೃತ್ಯ ಪ್ರದರ್ಶನ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಾಯಿ ಪಲ್ಲವಿ ಅವರ ನೃತ್ಯಕ್ಕೆ ಸಮಂತಾ ಮನಸೋತಿದ್ದರು.  

ಸಾಯಿ ಪಲ್ಲವಿಯ ಡ್ಯಾನ್ಸ್ ನೋಡಿದ ಸಮಂತಾ, ನಿನ್ನ ಡ್ಯಾನ್ಸ್ ನೋಡದೇ ಇರಲಾಗಲಿಲ್ಲ. ನೀವು ಹಂಸದಂತೆ ನೃತ್ಯ ಮಾಡುತ್ತಿದ್ದೀರಿ. ನನ್ನ ಕಣ್ಣುಗಳು ನಿನ್ನನ್ನೇ ನೋಡುತ್ತಿದ್ದವು. ನೀವು ತುಂಬಾ ಆಕರ್ಷಕವಾಗಿ ನೃತ್ಯ ಮಾಡುತ್ತೀರಿ. ಅದ್ಭುತ ನೃತ್ಯಗಾರ್ತಿ ಎಂದು ಸಮಂತಾ ಹೇಳಿದ್ದಾರೆ.

ಇದಕ್ಕಾಗಿ ಸಾಯಿ ಪಲ್ಲವಿ ಅವರಿಗೆ ಧನ್ಯವಾದ ತಿಳಿಸುತ್ತಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಸಾಯಿ ಪಲ್ಲವಿ ತುಂಬಾ ಚಿಕ್ಕ ಹುಡುಗಿಯಂತೆ ಕಾಣುತ್ತಿದ್ದಾರೆ. ಸಮಂತಾ ಮುದ್ದಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: ನಟಿ ಅನುಪಮಾ ಎದೆ ಮೇಲೆ ಮೂಡಿರುವ ಸುಂದರ ಟ್ಯಾಟೂ ಅರ್ಥವೇನು ಗೊತ್ತೆ..?

‘ಎಂ ಮಾಯ ಚೇಸಾವೆ’ ಚಿತ್ರದ ಮೂಲಕ ಟಾಲಿವುಡ್ ಗೆ ನಾಯಕಿಯಾಗಿ ಪರಿಚಯವಾದ ಸಮಂತಾ ಆ ಒಂದು ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್ ಆದರು. ಬಳಿಕ ಅನೇಕ ಯಶಸ್ವಿ ಚಿತ್ರಗಳನ್ನು ಮಾಡಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದರು. ನಾಗ ಚೈತನ್ಯನನ್ನು ಪ್ರೀತಿಸಿ ಮದುವೆಯಾದರು, ಆದರೆ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. 

ಇನ್ನೊಂದೆಡೆ ʻಫಿದಾʼ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದವರು ಸಾಯಿ ಪಲ್ಲವಿ. ಮೊದಲ ಚಿತ್ರ ಹಿಟ್ ಆಗಿತ್ತು. ತೆಲುಗು ಪ್ರೇಕ್ಷಕರು ಮನಸೋತರು. ಆ ನಂತರ ಎಂಸಿಎ, ಲವ್ ಸ್ಟೋರಿ, ಶ್ಯಾಮ್ ಸಿಂಘರಾಯ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಾಯಕಿಯಾಗಿ ಬೆಳೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News