Video Viral: ರಿಯಾಲಿಟಿ ಶೋನಲ್ಲಿ ಕೆಟ್ಟದಾಗಿ ಹಾಡಿದ ಸಾರಾ ಅಲಿ ಖಾನ್..!

ತುಂಬಾ ಇಂಪಾಗಿ ಸಾರಾ ಹಾಡಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಆಕೆಯ ಕರ್ಕಶ ಧ್ವನಿಯಿಂದ ಹೊರಡಿದ ಹಾಡಿನ ಸಾಲುಗಳಿಂದ ಕಿರಿಕಿರಿಯುಂಟಾಗಿದೆ.  

Written by - Puttaraj K Alur | Last Updated : Dec 21, 2021, 11:36 PM IST
  • ಚಿಕ್ಕ ಮಗುವನ್ನು ಮೆಚ್ಚಿಸಲು ಹೋಗಿ ಟ್ರೋಲ್ ಆದ ನಟಿ ಸಾರಾ ಅಲಿ ಖಾನ್
  • ಬಾಲಿವುಡ್ ನಟಿಯ ಅಪಸ್ವರದ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ‘SaReGaMaPa’ ರಿಯಾಲಿಟಿ ಶೋನಲ್ಲಿ ಹಾಡಲು ಚಡಪಡಿಸಿದ ನಟಿ ಸಾರಾ
Video Viral: ರಿಯಾಲಿಟಿ ಶೋನಲ್ಲಿ ಕೆಟ್ಟದಾಗಿ ಹಾಡಿದ ಸಾರಾ ಅಲಿ ಖಾನ್..! title=
ಟ್ರೋಲ್ ಆದ ನಟಿ ಸಾರಾ ಅಲಿ ಖಾನ್

ನವದೆಹಲಿ: ಯಾರಾದರೂ ಅತ್ಯುತ್ತಮವಾಗಿ ಹಾಡು ಹಾಡಿದಾಗ ನೀವು ಆ ಹಾಡನ್ನು ಕೇಳುತ್ತಲೇ ಇರಬೇಕು ಅನ್ನಿಸುತ್ತದೆ ಅಲ್ಲವೇ… ಆದರೆ ಯಾರಾದರೂ ಅಪಸ್ವರದಲ್ಲಿ ಹಾಡು ಹಾಡಿದರೆ ನೀವು ಏನು ಮಾಡುತ್ತೀರಿ..? ಖ್ಯಾತ ನಟಿ ಸಾರಾ ಅಲಿ ಖಾನ್(Sara Ali Khan) ಇತ್ತೀಚೆಗೆ ರಿಯಾಲಿಟಿ ಶೋ ಸೆಟ್‌ಗೆ ಬಂದು ಕೆಟ್ಟದಾಗಿ ಹಾಡು ಹಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಚಿಕ್ಕ ಹುಡುಗಿಯನ್ನು ಮೆಚ್ಚಿಸಲು ಹೋಗಿ ಹಾಡಲು ಪ್ರಯತ್ನಿಸಿದ ಸಾರಾ ಇದೀಗ ಟ್ರೋಲ್ ಗೆ ಆಹಾರವಾಗಿದ್ದಾರೆ. ನಟಿ ಹಾಡು ಹಾಡಲು ಪ್ರಾರಂಭಿಸುತ್ತಿದ್ದಂತೆಯೇ ನೆರೆದಿದ್ದವರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ತುಂಬಾ ಇಂಪಾಗಿ ಸಾರಾ ಹಾಡಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಆಕೆಯ ಕರ್ಕಶ ಧ್ವನಿಯಿಂದ ಹೊರಡಿದ ಹಾಡಿನ ಸಾಲುಗಳಿಂದ ಕಿರಿಕಿರಿಯುಂಟಾಗಿದೆ.  

ಇದನ್ನೂ ಓದಿ: ಮುಂಬೈನಲ್ಲಿ ವಿಜಯ್​ ದೇವರಕೊಂಡ ಜತೆ ರಶ್ಮಿಕಾ ಡಿನ್ನರ್​ ಪಾರ್ಟಿ.. ಶುರುವಾಯ್ತು ಹೊಸ ಗಾಸಿಪ್​.!

‘SaReGaMaPa’ ರಿಯಾಲಿಟಿ ಶೋನಲ್ಲಿ ಸಾರಾ

ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ತಮ್ಮ ಬಹು ನಿರೀಕ್ಷಿತ ಚಿತ್ರ ‘ಅತ್ರಂಗಿ ರೇ’ ಪ್ರಚಾರಕ್ಕಾಗಿ ‘SaReGaMaPa’ ರಿಯಾಲಿಟಿ ಶೋ(Singing Reality Show)ಗೆ ಆಗಮಿಸಿದ್ದರು. ಈ ವೇಳೆ ನಟಿ ಎಲ್ಲರೊಂದಿಗೆ ತಮಾಷೆ, ಖುಷಿ ಖುಷಿಯಿಂದ ಇರುವುದು ಕಂಡುಬಂದಿತು.   ಶೋನಲ್ಲಿ ನಟಿ ಹಾಡಲು ಪ್ರಯತ್ನಿಸಿ ಟೀಕೆಗೆ ಗುರಿಯಾಗಿದ್ದಾರೆ.

ಹಾಡು ಹಾಡಲು ಚಡಪಡಿಸಿದ ಸಾರಾ

 
 
 
 

 
 
 
 
 
 
 
 
 
 
 

A post shared by Filmfare (@filmfare)

ಈ ರಿಯಾಲಿಟಿ ಶೋನಲ್ಲಿ ಸಾರಾ ಅಲಿ ಖಾನ್(Sara Ali Khan) ಚಿಕ್ಕ ಮಗುವೊಂದನ್ನು ಎತ್ತಿಕೊಂಡಿದ್ದರು.  ಆ ಹೆಣ್ಣುಮಗುವನ್ನು ಮೆಚ್ಚಿಸಲು ಮುಂದಾದ ಸಾರಾ ಕೈಯಲ್ಲಿ ಮೈಕ್ ಹಿಡಿದು ಹಾಡು ಹಾಡಲು ಪ್ರಯತ್ನಿಸಿದ್ದಾರೆ. ಬಾಲಿವುಡ್(Bollywood) ನ ಖ್ಯಾತ ಹಾಡು ‘ತೇರೆ ಲಿಯೇ ಹಮ್ ಹೈ ಜಿಯೆ ಲಿಪೊನ್ ಕೊ ಸಿಯೆ’ ಹಾಡಲು ಹೋಗಿ ಸಾರಾ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಸಾರಾ ಈ ಹಾಡನ್ನು ಹಾಡಲು ಪ್ರಾರಂಭಿಸಿದ ತಕ್ಷಣ ಕಾರ್ಯಕ್ರಮದಲ್ಲಿದ್ದ ಎಲ್ಲಾ ಜನರು ಜೋರಾಗಿ ನಕ್ಕಿದ್ದಾರೆ. ಏಕೆಂದರೆ ಸಾರಾ ತುಂಬಾ ಅಪಸ್ವರದಿಂದ ಹಾಡನ್ನು ಹಾಡಿದ್ದಾರೆ. ಹಾಡು ಹಾಡಲು ಬರದಿದ್ದರೂ ಅತ್ಯಂತ ಆತ್ಮವಿಶ್ವಾಸದಿಂದ ಸಾರಾ ಪ್ರಯತ್ನಿಸಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾದ ವಿಶಾಲ್ ದದ್ಲಾನಿ ಮತ್ತು ಶಂಕರ್ ಮಹಾದೇವನ್ ಕೂಡ ಸಾರಾ ಅವರು ಈ ರೀತಿ ಅಪಸ್ವರದಲ್ಲಿ ಹಾಡುವುದನ್ನು ನೋಡಿ ಬೆರಗಾಗಿದ್ದಾರೆ.

ಇದನ್ನೂ ಓದಿ: "ಮೋಹಕವಾಗಿ ಕಾಣುವುದು ಸವಾಲಿನ ಕೆಲಸ": ಐಟಂ ಸಾಂಗ್‌ ಬಗ್ಗೆ ಮಾತನಾಡಿದವರಿಗೆ ಸಮಂತಾ ಉತ್ತರ.!

ಸಾರಾ ಅಪಸ್ವರದಲ್ಲಿ ಹಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದು, ಸಾರಾ ಹಾಡುವುದನ್ನು ಕೇಳಿಸಿಕೊಂಡು ವಿವಿಧ ರೀತಿಯಲ್ಲಿ ತುಂಬಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News