Dunki Twitter Review: ಶಾರುಖ್ ಖಾನ್ 'ಡಂಕಿ' ಚಿತ್ರ ಹೇಗಿದೆ.. ಕಿಂಗ್‌ ಖಾನ್‌ ಫ್ಯಾನ್ಸ್‌ ಬೇಸರಕ್ಕೆ ಕಾರಣವೇನು?

Dunki Twitter Review: ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ಬಗ್ಗೆ ಶಾರುಖ್‌ ಖಾನ್ ಅಭಿಮಾನಿಗಳು ಏನು ಹೇಳಿದ್ದಾರೆ ನೋಡಿ.. 

Written by - Chetana Devarmani | Last Updated : Dec 22, 2023, 08:18 AM IST
  • ಶಾರುಖ್ ಖಾನ್ ಅಭಿನಯದ 'ಡಂಕಿ'
  • ಇಂದು ರಿಲೀಸ್‌ ಆದ 'ಡಂಕಿ' ಸಿನಿಮಾ
  • ಹಿರಾನಿ ನಿರ್ದೇಶನದ ಡಂಕಿ ಟ್ವಿಟರ್‌ ರಿವ್ಯೂ
Dunki Twitter Review: ಶಾರುಖ್ ಖಾನ್ 'ಡಂಕಿ' ಚಿತ್ರ ಹೇಗಿದೆ.. ಕಿಂಗ್‌ ಖಾನ್‌ ಫ್ಯಾನ್ಸ್‌ ಬೇಸರಕ್ಕೆ ಕಾರಣವೇನು? title=

Dunki Twitter Review: ಡಂಕಿ ಸಿನಿಮಾ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಜಿಯೋ ಸ್ಟುಡಿಯೋಸ್ ಜಂಟಿಯಾಗಿ ಡಂಕಿ ಸಿನಿಮಾವನ್ನು ನಿರ್ಮಿಸಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಶಾರುಖ್ ಖಾನ್ ಚಿತ್ರದ ಬಗ್ಗೆ ಯಾವಾಗಲೂ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನೇ ಹೊಂದಿರುತ್ತಾರೆ. ಇದೀಗ ಡಂಕಿ ಸಿನಿಮಾ ನೋಡಿದ ಕೆಲವು ಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಡಂಕಿ ಚಿತ್ರಕ್ಕೆ ವಿಮರ್ಶೆ ನೀಡಿರುವ ಅಭಿಮಾನಿಯೊಬ್ಬರು ಚಿತ್ರದ ಕಥೆ ಚಿರಪರಿಚಿತವಾಗಿರುವಂತಿದ್ದು, ಹಿರಾನಿ ಅವರ ಸಹಾಯಕ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

ದಕ್ಷಿಣ ಭಾರತದಲ್ಲಿ ಡಂಕಿ ಚಿತ್ರ ಬಿಡುಗಡೆಯಯಾದ ಬಳಿಕ ಶಾರುಖ್‌ ಅಭಿಮಾನಿಗಳು ಟೀಕೆಗಳ ಸುರಿಮಳೆಗೈದರು. ಒಂದು ಸಾಲಿನ ಕಥೆಯನ್ನು 3 ಗಂಟೆಗಳ ಕಾಲ ಚಿತ್ರೀಕರಿಸಲಾಗಿದೆ ಎಂದು ಟ್ವಿಟ್ಟರ್‌ ಬಳಕೆದಾರರು ಪೋಸ್ಟ್‌ ಮಡಿದ್ದಾರೆ. 

ಇದನ್ನೂ ಓದಿ: "ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್": ಟೀಕೆಗೆ ಟಕ್ಕರ್‌ ಕೊಟ್ಟ ನೀಲ್! 

ಚಿತ್ರ ಸಾಧಾರಣವಾಗಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಮೊದಲಾರ್ಧದಲ್ಲಿ ವಿಕ್ಕಿ ಕೌಶಲ್ ಅಭಿನಯ ಚೆನ್ನಾಗಿದ್ದು, ಶಾರುಖ್ ಖಾನ್ ಅವರ ಪಂಜಾಬಿ ಬೇಸರ ಮೂಡಿಸಿದೆ. ಇದನ್ನು ಬಿಟ್ಟರೆ ಚಿತ್ರದಲ್ಲಿ ಮೆಚ್ಚುವಂಥದ್ದೇನೂ ಇಲ್ಲ ಎಂದಿದ್ದಾರೆ ಈ ಅಭಿಮಾನಿ.

ಹೃದಯಸ್ಪರ್ಶಿ ಸ್ನೇಹ, ಪ್ರೀತಿ, ಭೂಮಿ ಮೇಲಿನ ಪ್ರೀತಿ, ದೇಶಪ್ರೇಮ ಎಲ್ಲವನ್ನೂ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ.‌ ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್ ಚೆನ್ನಾಗಿದೆ, ಕೋರ್ಟ್ ದೃಶ್ಯಗಳು ಚೆನ್ನಾಗಿವೆ ಎಂದು ಅಭಿಮಾನಿ ಹೇಳಿದ್ದಾರೆ. ಹಿರಾನಿಗಾಗಿ ಡಂಕಿ ವೀಕ್ಷಿಸಲು ಬಂದಿದ್ದೆ ಆದರೆ ನಿರಾಸೆಯಾಗಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Year Ender 2023: ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸೋಲುಂಡ ಕನ್ನಡ ಸಿನಿಮಾಗಳಿವು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News