"ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್": ಟೀಕೆಗೆ ಟಕ್ಕರ್‌ ಕೊಟ್ಟ ನೀಲ್!

Prashanth Neel: ಸಲಾರ್‌ ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಚಿತ್ರದ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ ನಿರ್ದೇಶಕ ಪ್ರಶಾಂತ್‌ ನೀಲ್‌, ಸಲಾರ್‌  ಉಗ್ರಂ ತರ ಇದೆಯೆನ್ನುವವರಿಗೆ ಖಡಕ್‌ ಆಗಿ ಉತ್ತರ ನೀಡಿದ್ದಾರೆ.  

Written by - Zee Kannada News Desk | Last Updated : Dec 21, 2023, 03:17 PM IST
  • ಪ್ರಶಾಂತ್ ನೀಲ್ ಸಲಾರ್‌ ಚಿತ್ರದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಾಗೂ ಸಿನಿಮಾ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
  • ನಿರೂಪಕರು ನಿಮ್ಮಲ್ಲಿರುವ ಅತೀ ದೊಡ್ಡ ಭಯವೇನು ಅಂತ ಕೇಳಿದಾಗ, ಪ್ರಶಾಂತ್ ನೀಲ್ ಸಲಾರ್ ಹಾಗೂ ಉಗ್ರಂ ಹೋಲಿಕೆ ಬಗ್ಗೆ ಉತ್ತರ ಕೊಟ್ಟಿದ್ದಾರೆ.
  • ಪ್ರಶಾಂತ್ ನೀಲ್ ತಾನು ಮಾಡೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ ಅನ್ನೋದಾರೆ, ನನ್ನ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತಾನೂ ಹೇಳಿದ್ದಾರೆ.
"ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್": ಟೀಕೆಗೆ ಟಕ್ಕರ್‌ ಕೊಟ್ಟ ನೀಲ್! title=

Prashanth Neel About Salaar: ಕೆಲವು ದಿನಗಳ ಹಿಂದಷ್ಟೇ ರಾಜಮೌಳಿ ಜೊತೆ ಪ್ರಶಾಂತ್ ನೀಲ್, ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದು, ಆದೇ ವೇಳೆ ಕೂಡ ಪ್ರಶಾಂತ್ ನೀಲ್ ಚಿತ್ರದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದರು. ಈಗ ಹೊಂಬಾಳೆಗೆ ನೀಡಿದ ಸಂದರ್ಶನದಲ್ಲಿ 'ಸಲಾರ್' ಸಿನಿಮಾ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಮಾತಾಡಿದ್ದಾರೆ. 'ಸಲಾರ್' ಟ್ರೇಲರ್ ರಿಲೀಸ್ ಆದಾಗ, ಬಹಳಷ್ಟು ಜನ 'ಉಗ್ರಂ' ರಿಮೇಕ್ ಎಂದು ಹೇಳಿದಕ್ಕೆ ಪ್ರಶಾಂತ್ ನೀಲ್ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. 

ನಿರೂಪಕರು ನಿಮ್ಮಲ್ಲಿರುವ ಅತೀ ದೊಡ್ಡ ಭಯವೇನು ಅಂತ ಕೇಳಿದಾಗ, ಪ್ರಶಾಂತ್ ನೀಲ್ ಸಲಾರ್ ಹಾಗೂ ಉಗ್ರಂ ಹೋಲಿಕೆ ಬಗ್ಗೆ ಉತ್ತರ ಕೊಟ್ಟು, "ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್. ನನಗೆ ಯಾವಾಗಲೂ ಭಯ ಅನ್ನೋದು ನಿರ್ಮಾಪಕರು ಹಾಕುವ ಹಣದ ಮೇಲಿದೆ. ನನ್ನ ಮರ್ಯಾದೆ ಬಗ್ಗೆ ಭಯ, ಪದೇ ಪದೆ ರಿಪೀಟ್ ಮಾಡುವ ಭಯ, ಉಗ್ರಂನಲ್ಲಿ ಮಾಡಿದ್ದು ಕೆಜಿಎಫ್‌ನಲ್ಲಿ ಮಾಡಿದ್ದಾನೆ. ಕೆಜಿಎಫ್‌ನಲ್ಲಿ ಮಾಡಿದ್ದು ಸಲಾರ್‌ನಲ್ಲಿ ಮಾಡಿದ್ದಾನೆ. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಲ್ಲಿ ಇರೋದು ಜನರನ್ನು ರಂಜಿಸುವುದಕ್ಕೆ." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Dunki vs Salaar: ಮುಂಗಡ ಬುಕಿಂಗ್‌ನಲ್ಲಿ ಡುಂಕಿ ಹಿಂದಿಕ್ಕಿದ ಸಲಾರ್, ರಿಲೀಸ್‍ಗೂ ಮುನ್ನವೇ 30 ಕೋಟಿ ಸಂಗ್ರಹ!

ಇಷ್ಟೇ ಅಲ್ಲದೆ ತಾನು ಮಾಡೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ ಅನ್ನೋದಾರೆ, ನನ್ನ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತಾನೂ ಹೇಳಿತ್ತಾ, "ನನ್ನ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಒಳ್ಳೆಯ ರಿಸಲ್ಟ್ ಕೊಟ್ಟರೆ, ನಾನ್ಯಾಕೆ ನನ್ನ ಬಗ್ಗೆ ಚಿಂತೆ ಮಾಡಲಿ. ನನಗೆ ಸಿಗೋ ಮೊದಲ ಅವಾರ್ಡ್ ಅದೇ. ನಾನು ಹೇಗೆ ಬೆಳೆದೆ? ನಾನು ಎಷ್ಟು ವಿಭಿನ್ನ ಸಿನಿಮಾ ಮಾಡಿದೆ ಅಂತ ನೋಡೋಕೆ ಬರೋಲ್ಲ. ನನ್ನ ಜಡ್ಜ್ ಮಾಡುವುದಕ್ಕೆ ಜನರು ಬರೋದಿಲ್ಲ. ಜಡ್ಜ್ ಮಾಡೋಕೆ ಬರುತ್ತಾರೆ ಅಂದ್ರೆ, ಅವ್ರಿಗೆ ಅಷ್ಟೊಂದು ಸಮಯ ಇದೆಯಾ?" ಎಂದು ಪ್ರಶ್ನೆ ಮಾಡಿದ್ದಾರೆ. 

ಪ್ರಶಾಂತ್ ನೀಲ್ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳೊಂದಿಗೆ 'ಸಲಾರ್' ಹೋಲಿಕೆ ಮಾಡುತ್ತಿದ್ದಾರೆ. ಕೆಲವು ಉಗ್ರಂ ರಿಮೇಕ್ ಅಂದ್ರೆ, ಮತ್ತೆ ಕೆಲವರು 'ಕೆಜಿಎಫ್' ನೋಡಿದಂತೆ ಆಗುತ್ತೆ ಅನ್ನೋರೂ ಇದ್ದಾರೆ. ಈ ಎಲ್ಲಾ ಟೀಕೆಗಳ ಬಗ್ಗೆನೂ ಪ್ರಶಾಂತ್ ನೀಲ್, "ಎಲ್ಲರೂ ಸಲಾರ್ ಅನ್ನು ಕೆಜಿಎಫ್ ತರ ಇದೆ ಅಂತಿದ್ದಾರೆ ಅದೆನ್ನೆಲ್ಲ ಕ್ಷಣ ಕಾಲ ಅಷ್ಟೇ ಕ್ಯಾರಿ ಮಾಡಿದ್ದೆ. ಆದರೆ, ನಾನು ಸಿನಿಮಾಗೆ ಏನು ಬೇಕೋ ಅದನ್ನೇ ಮಾಡಿದ್ದೇನೆ. ಇಡೀ ಸಿನಿಮಾವನ್ನು ನೀವು ನೋಡಿ ಬಂದು ನಾನು ನಿಮ್ಮನ್ನು ರಂಜಿಸಲಿಲ್ಲ ಅಂತ ಹೇಳಿದ್ರೆ, ಅಥವಾ ನೀವು ಬಂದು ಸೂಪರ್‌ ಆಗಿ ಇತ್ತು ಸಿನಿಮಾ ಆದರೆ ಸ್ವಲ್ಪ ಕೆಜಿಎಫ್ ತರ ಇತ್ತು ಅಂದ್ರೆ ನನಗೇನು ಸಮಸ್ಯೆಯಿಲ್ಲ. ನಾನೇ ಅಲ್ವಾ ಕೆಜಿಎಫ್ ಮಾಡಿದ್ದು, ನಾನೇ ಸೃಷ್ಟಿ ಮಾಡಿದ್ದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ." ಎಂದು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News