ಶಾರುಖ್ ಖಾನ್ ʼಜವಾನ್‌ʼ ಮುಂಗಡ ಬುಕ್ಕಿಂಗ್ ಆರಂಭ..! ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ

Jawan advance booking : ಪಠಾಣ್‌ನ ಯಶಸ್ಸಿನ ನಂತರ ಕಿಂಗ್‌ ಖಾನ್‌ ಅಭಿಮಾನಿಗಳು ಜವಾನ್‌ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೀಗ ಶಾರುಖ್‌ ಪ್ಯಾನ್ಸ್‌ಗೆ ಸಿಹಿ ಸುದ್ದಿ ಇದೆ. ಅಟ್ಲಿ ನಿರ್ದೇಶನದ 'ಜವಾನ್' ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Aug 20, 2023, 02:32 PM IST
  • ಜವಾನ್' ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು.
  • ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್‌ ಖಾನ್‌ ನಟಸಿದ್ದಾರೆ.
  • 'ಜವಾನ್' ಚಿತ್ರದ ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ಶಾರುಖ್ ಖಾನ್ ʼಜವಾನ್‌ʼ ಮುಂಗಡ ಬುಕ್ಕಿಂಗ್ ಆರಂಭ..! ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ title=

Jawan ticket booking : ಶಾರುಖ್ ಖಾನ್ ಅಭಿನಯದ 'ಜವಾನ್' ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪಠಾಣ್‌ನ ಯಶಸ್ಸಿನ ನಂತರ ನಟ ಶಾರುಖ್‌ ಖಾನ್‌ ಅಟ್ಲಿ ನಿರ್ದೇಶನದ ಜವಾನ್‌ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಅಲ್ಲದೆ, 'ಜವಾನ್' ಚಿತ್ರದ ಮುಂಗಡ ಬುಕ್ಕಿಂಗ್ ಸಹ ಈಗಾಗಲೇ ಆರಂಭವಾಗಿದೆ. 

ಹೌದು.. ಈ ಕುರಿತು ಜವಾನ್‌ನ ಪ್ರೊಡಕ್ಷನ್ ಹೌಸ್‌ಗೆ ಹತ್ತಿರವಿರುವ ಮೂಲವೊಂದು ಮಾಹಿತಿ ನೀಡಿದ್ದು, ಚಿತ್ರದ ಮುಂಗಡ ಬುಕಿಂಗ್ ಯುಎಸ್, ಯುಎಇ, ಓಮನ್, ಆಸ್ಟ್ರೇಲಿಯಾ ಮತ್ತು ಜರ್ಮನಿಯಲ್ಲಿ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.. ಜಾಗತಿಕವಾಗಿ ಸಿನಿಮಾ ರಿಲೀಸ್‌ ಮಾಡುವ ಉದ್ದೇಶದಿಂದ ಚಿತ್ರತಂಡ ಈ ಪ್ಲಾನ್‌ ಮಾಡಿದೆ.

ಇದನ್ನೂ ಓದಿ: ರಾಧನಾ ರಾಮ್ ಇನ್ಮುಂದೆ ʼಆರಾಧನಾʼ : ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ

"ಜವಾನ್" ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹು ನಿರೀಕ್ಷೆ ಪಡೆದುಕೊಂಡಿದೆ. ವೆಂಕಿ ರಿವ್ಯೂಸ್ ಮತ್ತು ಸ್ಯಾಕ್ನಿಲ್ಕ್ ಪ್ರಕಾರ, 289 ಸ್ಥಳಗಳಿಂದ $74.2K ಮೌಲ್ಯದ 4,800 ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಇದೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಸ್ಕ್ರೀನ್‌ಗಳು ಹೆಚ್ಚಾಗಲಿವೆ.

'ಜವಾನ್' ಚಿತ್ರವನ್ನು ಕಾಲಿವುಡ್‌ ಖ್ಯಾತ ಡೈರೆಕ್ಟರ್‌ ಅಟ್ಲಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ ಖಾನ್‌ ಜೊತೆ ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ, ನಯನತಾರಾ, ವಿಜಯ್ ಸೇತುಪತಿ ನಟಿಸಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News