Aditi Rao Hydari : ನಟಿ ಅದಿತಿ ರಾವ್‌ ಯಾರು ಗೊತ್ತೆ..? ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ನಟಿಯ ಇತಿಹಾಸ

Siddharth - Aditi rao hydari : ಕಾಲಿವುಡ್‌ ನಟ ಸಿದ್ದಾರ್ಥ್‌ ಮತ್ತು ಬಹುಭಾಷಾ ನಟಿ ಅದಿತಿ ರಾವ್‌ ಹೈದರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದಿತಿ ಕುರಿತು ಹಿನ್ನೆಲೆ ತಿಳಿಯಲು ಹೋದ ನೆಟ್ಟಿಗರು ಅವರ ಕುಟುಂಬದ ಇತಿಹಾಸ ಕಂಡು ಬೆಚ್ಚಿ ಬಿದ್ದಿದ್ದಾರೆ.. ನಟಿ ಅದಿತಿ ಯಾತು..? ಇಲ್ಲಿದೆ ಇಂಟ್ರಸ್ಟಿಂಗ್‌ ಸುದ್ದಿ..

Written by - Krishna N K | Last Updated : Mar 28, 2024, 05:59 PM IST
    • ನಟ ಸಿದ್ದಾರ್ಥ್‌ ಮತ್ತು ನಟಿ ಅದಿತಿ ರಾವ್‌ ಹೈದರಿ ನಿಶ್ಚಿತಾರ್ಥ
    • ನಟಿ ಅದಿತಿ ರಾವ್‌ ಇತಿಹಾಸ ಕಂಡು ಬೆಚ್ಚಿ ಬಿದ್ದಿದ್ದಾರೆ
    • ಅಚ್ಚರಿ ಮೂಸಿಡುತ್ತೆ ನಟಿ ಅದಿತಿ ಕುಟುಂಬ ಇತಿಹಾಸ
Aditi Rao Hydari : ನಟಿ ಅದಿತಿ ರಾವ್‌ ಯಾರು ಗೊತ್ತೆ..? ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ನಟಿಯ ಇತಿಹಾಸ title=
Aditi Rao Hydari

Aditi Rao Hydari : ನಟ ಸಿದ್ದಾರ್ಥ ಮತ್ತು ನಟಿ ಅದಿತಿ ರಾವ್‌ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಹಬ್ಬಿದ್ದ ವಂದತಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಇದೀಗ ನಟಿ ಅದಿತಿ ರಾವ್‌ ಯಾರು..? ಯಾವ ಸಿನಿಮಾ ಮಾಡಿದ್ದಾರೆ..? ಅಂತ ಹುಡುಕಲು ಹೊರಟ ನೆಟ್ಟಿಗರು ಅವರ ಕುಟುಂಬ ಇತಿಹಾಸ ತಿಳಿದು ಬೆಚ್ಚಿಬಿದ್ದಿದ್ದಾರೆ.

ಹೌದು.. ಸಿದ್ದು ಮತ್ತು ಅದಿತಿ ತೆಲಂಗಾಣದ ದೇವಸ್ಥಾನವೊಂದರಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿತ್ತು. ಆದರೆ ಈ ಕುರಿತು ಸ್ವತಃ ಜೋಡಿ ಕ್ಲಾರೀಟಿ ನೀಡಿ, ತಾವು ನಿಶ್ಚಿತಾರ್ಥ (Aditi Rao Hydari confirms engagement with Siddharth) ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ..

ಇದನ್ನೂ ಓದಿ: ಮದುವೆ ಗುಟ್ಟು ರಟ್ಟಾಗುತ್ತಿದ್ದಂತೆ ಸಿಕ್ರೆಟ್‌ ರಿವೀಲ್‌ ಮಾಡಿದ ಸಿದ್ದು ಮತ್ತು ಅದಿತಿ..! ಏನಂತು ಜೋಡಿ..?

ಅದಿತಿ ರಾವ್ ಹೈದರಿ ತೆಲಂಗಾಣ ಮೂಲದ ಹುಡುಗಿ. ನಟಿ ವನಪರ್ತಿ ಸಂಸ್ಥಾನದ ಉತ್ತರಾಧಿಕಾರಿ. ವನಪರ್ತಿ ಸಂಸ್ಥಾನದ ಕೊನೆಯ ರಾಜ ಜೆ ರಾಮೇಶ್ವರ ರಾವ್ ಅವರ ಮುದ್ದು ಮೊಮ್ಮಗಳು. ಅದಿತಿ ತಾಯಿಯ ಹೆಸರು ವಿದ್ಯಾ ರಾವ್, ಇವುರ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ. ಆದ್ದರಿಂದ ವನಪರ್ತಿ ಸಾಮ್ರಾಜ್ಯಕ್ಕೆ ಸೇರಿದ ದೇವಸ್ಥಾನದಲ್ಲಿ ಸಿದ್ದು ಮತ್ತು ಅದಿತಿ ನಿಶ್ಚಿತಾರ್ಥ ಮಾಡಿಕೊಂಡರು.

ವನಪರ್ತಿ ಜಿಲ್ಲೆಯ ಶ್ರೀರಂಗಪುರಂನಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಉಂಗುರ ಬದಲಾಯಿಸಿಕೊಂಡರು. ಆದರೆ ಈ ಕುರಿತು ಸಿದ್ಧಾರ್ಥ್ ಆಗಲಿ ಅದಿತಿ ರಾವ್ ಹೈದರಿಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ಫೋಟೋ ಹಂಚಿಕೊಳ್ಳುವ ಮೂಲಕ ಸಿಕ್ರೇಟ್‌ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ:ಆ ನೋವಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪ್ರಕಾಶ್‌ ರಾಜ್‌..! ಖ್ಯಾತ ನಟನ ಬದುಕಲ್ಲಿ ದುರಂತ

ನಟ ಸಿದ್ದಾರ್ಥ ತಮ್ಮ ಸಿನಿಮಾಗಳಿಂದ ಸೌತ್‌ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿರಪರಿಚಿತರಾಗಿದ್ದಾರೆ. 44 ವರ್ಷದ ನಟ ತನಗಿಂತ ಏಳು ವರ್ಷ ಚಿಕ್ಕವಳಾದ ಅದಿತಿ ರಾವ್ ಹೈದರಿ ಅವರನ್ನು ಪ್ರೀತಿಸುತ್ತಿದ್ದರು. ಇದೀಗ ಜೋಡಿ ಉಂಗುರ ಬದಲಾಯಿಸಿಕೊಂಡಿದೆ.. ಇನ್ನೋಂದು ವಿಚಾರ ಅಂದ್ರೆ, ಅದಾಗಲೇ ಅದಿತಿಗೆ ಮೊದಲೇ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾರೆ. ಸಿದ್ಧಾರ್ಥ್ ಕೂಡ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News