ವಿರಾಟ್‌ ಕೊಹ್ಲಿ ಜೊತೆ ಡೇಟಿಂಗ್‌.. ಒಂದು ಚಿತ್ರಕ್ಕೆ 5 ಕೋಟಿ ಚಾರ್ಜ್.. ಸದ್ಯ ಫ್ಲಾಪ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಸೌತ್‌ ನಟಿ ಈಕೆ!

South Actress: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರು ಯಾವಾಗ ಯಾರೊಂದಿಗೆ ಕೆಮಿಸ್ಟ್ರಿ ಬೆಳೆಸಿಕೊಳ್ಳುತ್ತಾರೆ ಎನ್ನುವುದು ಹೇಳಲು ಅಸಾಧ್ಯ.. ಲವ್ ಮತ್ತು ಬ್ರೇಕಪ್ ವಿಷಯದಲ್ಲಿ ಸಿನಿರಂಗ ‘ಮೋಡಗಳಿಲ್ಲದ ಮಳೆ’ಯ ಹಾಗೆ.. ಇದೀಗ ನಾವು ಇಬ್ಬರು ಕ್ರಿಕೆಟರ್‌ ಜೊತೆ ಡೇಟ್‌ ಮಾಡಿ ಸದ್ಯ ಪ್ಲಾಪ್‌ ನಟನೊಂದಿಗೆ ಲವ್‌ನಲ್ಲಿರುವ ನಟಿಯ ಕುರಿತು ಹೇಳಲು ಹೊರಟಿದ್ದೇವೆ..  

Written by - Savita M B | Last Updated : Mar 10, 2024, 09:31 AM IST
  • ವಿರಾಟ್‌ ಕೊಹ್ಲಿ ಸೇರಿದಂತೆ ಇಬ್ಬರು ಕ್ರಿಕೆಟಿಗರೊಂದಿಗೆ ಡೇಟಿಂಗ್‌ ಮಾಡಿದ ನಟಿ
  • ಸದ್ಯ ಬೇರೊಬ್ಬ ಪ್ಲಾಪ್‌ ನಟನನೊಂದಿಗೆ ಪ್ರೀತಿಯಲ್ಲಿರುವ ನಟಿ
  • ಈ ನಟಿ ಒಂದು ಚಿತ್ರಕ್ಕೆ 4-5 ಕೋಟಿ ಚಾರ್ಜ್ ಮಾಡುತ್ತಾರೆ.
ವಿರಾಟ್‌ ಕೊಹ್ಲಿ ಜೊತೆ ಡೇಟಿಂಗ್‌.. ಒಂದು ಚಿತ್ರಕ್ಕೆ 5 ಕೋಟಿ ಚಾರ್ಜ್.. ಸದ್ಯ ಫ್ಲಾಪ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಸೌತ್‌ ನಟಿ ಈಕೆ!  title=

South Actress Tamannah Batia: ಬಾಲಿವುಡ್ ನಟಿಯರ ವಿರುದ್ಧ ಗುಟ್ಟಾಗಿ ಮದುವೆಯಾಗಿದ್ದಾರೆ, ಉದ್ಯಮಿ ಅಥವಾ ಸೂಪರ್‌ಸ್ಟಾರ್ ಜೊತೆ 'ಹಣಕ್ಕಾಗಿ' ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ನೀವು ಹೆಚ್ಚಾಗಿ ನೋಡಿರಬಹುದು. ಆದರೆ ಅದರ ಸತ್ಯಾ ಸತ್ಯತೆ ತಿಳಿಯುವುದು ಅವರು ಬಹಿರಂಗ ಪಡಿಸಿದಾಗ ಮಾತ್ರ.. ಇಂದು ನಾವು ಹೇಳಲು ಹೊರಟಿರುವ ಸೌತ್‌ನ ಸೂಪರ್‌ಹಿಟ್ ನಟಿ ವಿರಾಟ್‌ ಕೊಹ್ಲಿ ಸೇರಿದಂತೆ ಇಬ್ಬರು ಕ್ರಿಕೆಟಿಗರೊಂದಿಗೆ ಡೇಟಿಂಗ್‌ ಮಾಡಿ ಸದ್ಯ ಬೇರೊಬ್ಬ ಪ್ಲಾಪ್‌ ನಟನನೊಂದಿಗೆ ಪ್ರೀತಿಯಲ್ಲಿರುವ ನಟಿಯ ಬಗ್ಗೆ.. 

ಆಕೆ ಬೇರೆ ಯಾರೂ ಅಲ್ಲ.. ದಕ್ಷಿಣದ ಸೂಪರ್‌ಹಿಟ್ ನಟಿ ತಮನ್ನಾ ಭಾಟಿಯಾ.. ವರದಿ ಪ್ರಕಾರ ತಮನ್ನಾ ಒಂದು ಚಿತ್ರಕ್ಕೆ 4-5 ಕೋಟಿ ಚಾರ್ಜ್ ಮಾಡುತ್ತಾರೆ. ಮಾಧ್ಯಮಗಳ ಊಹಾಪೋಹಗಳನ್ನು ನಂಬುವುದಾದರೆ, ಬ್ಲಾಕ್‌ಬಸ್ಟರ್ ಚಿತ್ರ ಬಾಹುಬಲಿ 2 ಗಾಗಿ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ... ಇದರೊಂದಿಗೆ ಆಕೆ ಜಾಹೀರಾತು ಪ್ರಚಾರಕ್ಕಾಗಿ 7-8 ಕೋಟಿ ರೂ. ಗಳಿಸುತ್ತಾರೆ.. 

ಇದನ್ನೂ ಓದಿ-Sridevi's Sister : ಸೌತ್‌ ಸುಂದರಿ ಶ್ರೀದೇವಿ ತಂಗಿಯನ್ನು ನೋಡಿದ್ದೀರಾ..? ಅಂದದಲ್ಲಿ ಅಕ್ಕನನ್ನೇ ಮೀರಿಸ್ತಾಳೆ ಈ ಚೆಲುವೆ!

ನಟಿ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಜೀವನಕ್ಕಿಂತ ವೃತ್ತಿಪರ ಜೀವನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ... ಈ ದಿನಗಳಲ್ಲಿ ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿರುವ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಅಫೇರ್ ಮತ್ತು ರಿಲೇಶನ್ ಶಿಪ್ ಸುದ್ದಿ ಹೊರಬಿದ್ದ ನಂತರ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬಹಳ ದಿನಗಳಿಂದ ಟ್ರೆಂಡಿಂಗ್ ನಲ್ಲಿದ್ದಾರೆ.

ಇದನ್ನೂ ಓದಿ-Sreeleela : ಮಿರರ್ ಮುಂದೆ ಕಿಸ್ ಹುಡುಗಿಯ ಪೋಸ್ : ಫೋಟೋಸ್ ಇಲ್ಲಿವೆ ನೋಡಿ

ವಿಜಯ್‌ಗೂ ಮೊದಲು, ತಮನ್ನಾ ಭಾಟಿಯಾ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರೊಂದಿಗೆ ಡೇಟಿಂಗ್‌ ಮಾಡಿದ್ದರು ಎಂದು ವರದಿ ಮಾಡಲಾಗಿತ್ತು..  

ಇನ್ನು ವಿಜಯ್ ವರ್ಮಾ ಅವರ ನಿವ್ವಳ ಮೌಲ್ಯವು ತಮನ್ನಾ ಭಾಟಿಯಾ ಅವರ ನಿವ್ವಳ ಮೌಲ್ಯಕ್ಕಿಂತ 7 ಪಟ್ಟು ಕಡಿಮೆಯಾಗಿದೆ.. ಮಾಧ್ಯಮ ವರದಿಗಳ ಪ್ರಕಾರ, 2023 ರಲ್ಲಿ ವಿಜಯ್ ವರ್ಮಾ ಅವರ ನಿವ್ವಳ ಮೌಲ್ಯವು ಸುಮಾರು 17 ಕೋಟಿ ರೂಪಾಯಿಗಳು ಮತ್ತು ತಮನ್ನಾ ಅವರ ನಿವ್ವಳ ಮೌಲ್ಯವು 120 ಕೋಟಿ ರೂಪಾಯಿಗಳು.. ಇಲ್ಲಿ ಗಮನಾರ್ಹವಾಗಿರುವುದೆಂದರೇ ನಟ ವಿಜಯ್ ವರ್ಮಾ ಇನ್ನೂ ಯಾವುದೇ ಸೋಲೋ ಹಿಟ್ ಚಿತ್ರ ನೀಡಿಲ್ಲ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News