Sridevi's Sister : ಸೌತ್‌ ಸುಂದರಿ ಶ್ರೀದೇವಿ ತಂಗಿಯನ್ನು ನೋಡಿದ್ದೀರಾ..? ಅಂದದಲ್ಲಿ ಅಕ್ಕನನ್ನೇ ಮೀರಿಸ್ತಾಳೆ ಈ ಚೆಲುವೆ!

South Actress Sridevi: ವಿಶ್ವದ ಅತ್ಯಂತ ಸುಂದರಿ ದಿವಂಗತ ಶ್ರೀದೇವಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮುದುಕರಿಂದ ಹಿಡಿದು ಹುಡುಗರವರೆಗೂ ಆಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಶ್ರೀದೇವಿ ಕುಟುಂಬದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಆಕೆಯ ಸಹೋದರಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲವಾದರೆ ಈ ಸ್ಟೋರಿ ನೋಡಿ.. 

Written by - Savita M B | Last Updated : Mar 10, 2024, 08:14 AM IST
  • ಈಗಿನ ಕಾಲದಲ್ಲಿ ಪ್ಯಾನ್ ಇಂಡಿಯಾ ಹೀರೋ, ಹೀರೋಯಿನ್ ಎಂದು ಹೇಳಲಾಗುತ್ತದೆ
  • ಆದರೆ ಆ ಕಾಲದಲ್ಲಿಯೇ ಶ್ರೀದೇವಿ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಬೆಳೆದರು.
  • ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಮಾಡಿ ಕ್ರೇಜ್ ಗಿಟ್ಟಿಸಿಕೊಂಡರು.
Sridevi's Sister : ಸೌತ್‌ ಸುಂದರಿ ಶ್ರೀದೇವಿ ತಂಗಿಯನ್ನು ನೋಡಿದ್ದೀರಾ..? ಅಂದದಲ್ಲಿ ಅಕ್ಕನನ್ನೇ ಮೀರಿಸ್ತಾಳೆ ಈ ಚೆಲುವೆ! title=

Sridevi: ಈಗಿನ ಕಾಲದಲ್ಲಿ ಪ್ಯಾನ್ ಇಂಡಿಯಾ ಹೀರೋ, ಹೀರೋಯಿನ್ ಎಂದು ಹೇಳಲಾಗುತ್ತದೆ ಆದರೆ ಆ ಕಾಲದಲ್ಲಿಯೇ ಶ್ರೀದೇವಿ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಬೆಳೆದರು. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಮಾಡಿ ಕ್ರೇಜ್ ಗಿಟ್ಟಿಸಿಕೊಂಡರು.

ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿ ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಉತ್ತರದಲ್ಲೂ ಸದ್ದು ಮಾಡಿದ್ದರು. ಇಂಡಿಯಾ ವೈಡ್ ಸ್ಟಾರ್‌ಡಮ್ ಅನ್ನು ಹೊಂದಿದ್ದರು. ಆದರೆ 24 ಫೆಬ್ರವರಿ 2018 ರಂದು ದುಬೈನ ಹೋಟೆಲ್ ಕೊಠಡಿಯಲ್ಲಿ ಶ್ರೀದೇಶ್ ಶವವಾಗಿ ಪತ್ತೆಯಾಗಿದ್ದರು. ಆಗ ಈ ಸುದ್ದಿ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು... ಸದ್ಯ ಶ್ರೀದೇವಿ ನಮ್ಮ ಜೊತೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಹಾಗೇ ಇವೆ..

ಇದನ್ನೂ ಓದಿ-Sreeleela : ಮಿರರ್ ಮುಂದೆ ಕಿಸ್ ಹುಡುಗಿಯ ಪೋಸ್ : ಫೋಟೋಸ್ ಇಲ್ಲಿವೆ ನೋಡಿ

ಇನ್ನು ಶ್ರೀದೇವಿ ಕುಟುಂಬದ ವಿಚಾರಕ್ಕೆ ಬಂದರೆ, ಈಗ ಅವರ ಪತಿ ಬೋನಿ ಕಪೂರ್ ಹಿಂದಿ ಚಿತ್ರಗಳ ಹೊರತಾಗಿ ತಮಿಳು ಚಿತ್ರರಂಗದತ್ತ ಸಾಗಿದ್ದಾರೆ.. ಶ್ರೀದೇವಿ ಅವರ ಮೊದಲ ಮಗಳು ಜಾನ್ವಿ ಕಪೂರ್ ತಮ್ಮ ತಾಯಿಯಂತೆ ನಾಯಕಿಯಾಗಿ ನಟಿಸುವ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾರೆ... ಹಿಂದಿ ಚಿತ್ರಗಳಲ್ಲದೆ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗದಲ್ಲಿ ದೊಡ್ಡಪ್ರಭಾವ ಬೀರಲು ಹೊರಟಿದ್ದಾರೆ.. 

ಶ್ರೀದೇವಿ ಅವರ ಪತಿ ಬೋನಿ ಕಪೂರ್, ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರನ್ನು ಹೆಚ್ಚಾಗಿ ಎಲ್ಲರೂ ನೋಡುತ್ತಾರೆ. ಆದರೆ ಶ್ರೀದೇವಿಯ ತಂಗಿ ಶ್ರೀಲತಾ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಹೌದು, ಅತಿಲೋಕ ಸುಂದರಿ ಶ್ರೀದೇವಿಗೆ ಒಬ್ಬ ಸಹೋದರಿ ಇದ್ದಾಳೆ. ಅವಳ ಹೆಸರು ಶ್ರೀಲತಾ.

ಇದನ್ನೂ ಓದಿ-Salman Khan : ಸಲ್ಮಾನ್‌ ಖಾನ್‌ ಹಂದಿ ತರ ತಿಂತಾನೆ.. ನಾಯಿ ತರ..! ಖ್ಯಾತ ನಟನ ಹೇಳಿಕೆ ವೈರಲ್‌

ಆದರೆ ಶ್ರೀದೇವಿ ಸಹೋದರಿ ಶ್ರೀಲತಾ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಏಕೆಂದರೆ ಶ್ರೀದೇವಿಯಂತೆ ಅವರು ಸಿನಿಮಾಗೆ ಬಂದಿಲ್ಲ. ಆದರೆ ಸಿನಿಮಾದ ಸೆಟ್‌ಗೆ ಹೋದಾಗಲೆಲ್ಲ ಅಕ್ಕನ ಜೊತೆ ಕಾಣಿಸಿಕೊಳ್ಳುತ್ತಿದ್ದರಂತೆ... ತಾಯಿ ರಾಜೇಶ್ವರಿ ಸೇರಿದಂತೆ ಶ್ರೀಲತಾ ಕೂಡ ಶ್ರೀದೇವಿ ಜೊತೆಗಿದ್ದರು. 

ಶ್ರೀದೇವಿಯವರ ವೃತ್ತಿಜೀವನದ ಆರಂಭದಿಂದಲೂ, ಶ್ರೀಲತಾ ಪ್ರತಿ ಸಿನಿಮಾದ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ.. ಶ್ರೀಲತಾ ಕೂಡ ಶ್ರೀದೇವಿಯಂತೆ ನಟಿಯಾಗಬೇಕೆಂದು ಬಯಸಿದ್ದರು. ಆದರೆ ಆಕೆಗೆ ಯಶಸ್ಸು ಕೈ ಹಿಡಿಯಲಿಲ್ಲವಂತೆ.. ಆ ನಂತರ ಅವರು ಶ್ರೀದೇವಿಯ ಮ್ಯಾನೇಜರ್ ಆಗಿದ್ದರು..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News