ಈ ಬಿಗ್​ಬಾಸ್ ಸ್ಪರ್ಧಿಗೆ ಸನ್ನಿ ಲಿಯೋನ್ ಸಪೋರ್ಟ್! ಯಾರು ಆ ಲಕ್ಕಿ ಪರ್ಸನ್‌

Sunny Leone : ಬಿಗ್ ಬಾಸ್ ಫೈನಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯ ಪ್ರತಿಯೊಬ್ಬರೂ ಅಂತಿಮ ಘಟ್ಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ, ಸೆಲೆಬ್ರಿಟಿಗಳು ಸಹ ಸ್ಪರ್ಧಿಗಳಿಗೆ ಬೆಂಬಲ ನೀಡುತ್ತಿದ್ದಾರೆ.

Written by - Krishna N K | Last Updated : Jan 17, 2024, 06:39 PM IST
  • ಬಿಗ್ ಬಾಸ್ ಫೈನಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ.
  • ಅನೇಕ ಸೆಲೆಬ್ರಿಟಿಗಳೂ ಸಹ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಬೆಂಬಲಿಸುತ್ತಿದ್ದಾರೆ.
  • ಈ ಪೈಕಿ ಅನೇಕ ಸೆಲೆಬ್ರಿಟಿಗಳು ಅಂಕಿತಾ ಲೋಖಂಡೆಗೆ ಬೆಂಬಲಕ್ಕೆ ನಿಂತಿದ್ದಾರೆ.
ಈ ಬಿಗ್​ಬಾಸ್ ಸ್ಪರ್ಧಿಗೆ ಸನ್ನಿ ಲಿಯೋನ್ ಸಪೋರ್ಟ್! ಯಾರು ಆ ಲಕ್ಕಿ ಪರ್ಸನ್‌ title=

Ankita lokhande Bigg boss 17 : ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಏನಾದರೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಬಿಗ್ ಬಾಸ್ ಫೈನಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯ ಪ್ರತಿಯೊಬ್ಬರೂ ಅಂತಿಮ ಘಟ್ಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ಮಧ್ಯ ಅನೇಕ ಸೆಲೆಬ್ರಿಟಿಗಳೂ ಸಹ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಬೆಂಬಲಿಸುತ್ತಿದ್ದಾರೆ. 

ಈ ಪೈಕಿ ಅನೇಕ ಸೆಲೆಬ್ರಿಟಿಗಳು ಅಂಕಿತಾ ಲೋಖಂಡೆಗೆ ಬೆಂಬಲಕ್ಕೆ ನಿಂತಿದ್ದಾರೆ, ಅಲ್ಲದೆ, ಟ್ರೋಲ್‌ಗೂ ಕೂಡ ಗುರಿಯಾಗುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂಕಿತಾ ಲೋಖಂಡೆಗೆ ಬೆಂಬಲ ನೀಡಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸನ್ನಿ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ʼಹನುಮಾನ್‌ʼ ಸಿನಿಮಾ ನೋಡಿ ನಿರ್ದೇಶಕನ್ನು ಮೆಚ್ಚಿಕೊಂಡ ರಿಷಬ್‌..! ನಟನ ಬಗ್ಗೆ ಶೆಟ್ರು ಹೇಳಿದ್ದೇನು.?

ಅಂಕಿತಾ ಗೆಲುವಿಗೆ ಅಭಿಮಾನಿಗಳು ಸಾಕಷ್ಟು ಮತ ಹಾಕುತ್ತಿದ್ದಾರೆ. ಈ ಶೋನಲ್ಲಿ ಅಂಕಿತಾ ಗೆಲ್ಲಬೇಕು ಎಂದು ಅನೇಕ ಸೆಲೆಬ್ರಿಟಿಗಳು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸನ್ನಿ ಲಿಯೋನ್ ಅಂಕಿತಾಗೆ ಬೆಂಬಲ ನೀಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ 17 ರ ಫೈನಲ್‌ಗೆ ಆಲ್ ದಿ ಬೆಸ್ಟ್ ಅಂಕಿತಾ ಲೋಖಂಡೆ. ನಾನು ನಿನ್ನೊಂದಿಗೆ ನಿಲ್ಲುತ್ತೇನೆ ಅಂತ ಬರೆದುಕೊಂಡು ಕಿಸ್ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ ಹೌದು, ಈ ಬಾರಿ ಬಿಗ್‌ಬಾಸ್‌ ವಿಜೇತೆ ಅಂಕಿತಾ ಲೋಖಂಡೆ ಅಂತ ಬರೆದಿದ್ದಾರೆ.. ಇನ್ನೊಬ್ಬರು - ಪ್ರಿಯ ಸನ್ನಿ ಲಿಯೋನ್ ಅವರಿಗೆ ಧನ್ಯವಾದಗಳು. ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು ಅಂತ ಅಂಕಿತಾ ಫ್ಯಾನ್ಸ್‌ ಸನ್ನಿಗೆ ಥ್ಯಾಂಕ್ಸ್‌ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News