ಮೇ 25 ರಂದು ಪೋಕ್ಮನ್‌ನ ಹೊಸ ಸರಣಿಯ ಪ್ರೀಮಿಯರ್ ಸಂಚಿಕೆ ಪ್ರಸಾರಕ್ಕೆ ನಿರ್ಧಾರ

Pokémon's new series: ಅತ್ಯಂತ ಉತ್ಸಾಹಭರಿತರಾದ ಶೆರ್ಲಿ ಸೆಟಿಯಾ, “ಬಾಲ್ಯದ ಅನುಭವಗಳೊಂದಿಗೆ ಬೆರೆಯುವ ಸಂಗೀತದ ರಚನೆ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತದೆ. ನಾನು ಅತಿಹೆಚ್ಚು ಪ್ರೀತಿಸಿದ ಪೋಕ್ಮನ್ ಮೃದುಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ. ಈ ಐಕಾನಿಕ್ ಫ್ರ್ಯಾಂಚೈಸ್‌ಗೆ ನನ್ನ ಧ್ವನಿಯನ್ನು ನೀಡಿರುವುದು ನಂಬಲಾಗದ ಮಧುರ ಅನುಭವವಾಗಿದೆ. ಈ ಹಾಡುಗಳು ಅಭಿಮಾನಿಗಳಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

Written by - Manjunath N | Last Updated : May 2, 2024, 12:13 PM IST
  • “ಬಾಲ್ಯದ ಅನುಭವಗಳೊಂದಿಗೆ ಬೆರೆಯುವ ಸಂಗೀತದ ರಚನೆ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತದೆ.
  • ನಾನು ಅತಿಹೆಚ್ಚು ಪ್ರೀತಿಸಿದ ಪೋಕ್ಮನ್ ಮೃದುಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ.
  • ಈ ಐಕಾನಿಕ್ ಫ್ರ್ಯಾಂಚೈಸ್‌ಗೆ ನನ್ನ ಧ್ವನಿಯನ್ನು ನೀಡಿರುವುದು ನಂಬಲಾಗದ ಮಧುರ ಅನುಭವವಾಗಿದೆ.
 ಮೇ 25 ರಂದು ಪೋಕ್ಮನ್‌ನ ಹೊಸ ಸರಣಿಯ ಪ್ರೀಮಿಯರ್ ಸಂಚಿಕೆ ಪ್ರಸಾರಕ್ಕೆ ನಿರ್ಧಾರ title=

Pokémon's new series: ಮುಂಬೈ: ಪೋಕ್ಮನ್ ಕಂಪನಿಯು ಮೇ 25ರಂದು ಹಂಗಾಮಾದಲ್ಲಿ ತನ್ನ ಹೊಚ್ಚಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಏಪ್ರಿಲ್ 30 ರಂದು ಮುಂಬೈನ ಜುಹುವಿನ JW ಮ್ಯಾರಿಯಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಅವರ ಮೂಲ ಆರಂಭಿಕ ಮತ್ತು ಅಂತ್ಯದ ಧ್ವನಿಮುದ್ರಿಕೆಗಳನ್ನು ಅನಾವರಣಗೊಳಿಸಲಾಯಿತು.

ಹೊಸ ಸರಣಿಯು ಆಕರ್ಷಕ ಕಥಾಹಂದರದ ಜೊತೆಗೆ ಹೊಸ ಪಾತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಯಾಪ್ಟನ್ ಪಿಕಾಚು ವಾಯುನೌಕೆಯ ಚುಕ್ಕಾಣಿ ಹಿಡಿದಿದ್ದಾರೆ. ಭಾರತೀಯ ಕಲಾವಿದರು ಮತ್ತು ಓಕ್ಮನ್ ಕಂಪನಿಯ ಸಹಯೋಗದಲ್ಲಿ ಪೋಕ್ಮನ್ ಸರಣಿಗೆ ಮೂಡಿಬಂದಿರುವ ಆರಂಭಿಕ ಮತ್ತು ಅಂತ್ಯದ ಧ್ವನಿಪಥಗಳು ಎಂದಿನಂತೆ ಭಾರತೀಯ ಪ್ರೇಕ್ಷಕರಿಗಾಗಿ ಸ್ಥಳೀಯ ಸೊಗಡಿನ ಅನನ್ಯ ಸಂಗೀತ ಮಿಶ್ರಣವನ್ನು ನೀಡುತ್ತಿವೆ. ಈ ಸಹಯೋಗವು ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಅಸಾಧಾರಣ ಅಸ್ತಿತ್ವವನ್ನು ಸ್ಥಾಪಿಸುವ ಎಲ್ಲಾ ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತಿದೆ. ಈ ಧ್ವನಿಪಥಗಳು ನಮ್ಮ ಬಾಲ್ಯದ ಚೈತನ್ಯವನ್ನು ನೆನಪಿಸುವುದರೊಂದಿಗೆ ನಮ್ಮ ಹೃದಯವನ್ನು ಬೆಚ್ಚಗಾಗಿಸುವ ಎಲ್ಲಾ ಭಾವಗಳನ್ನೂ ನೀಡುತ್ತವೆ.

ಪೋಕ್ಮನ್ ಕಂಪನಿ ಜೊತೆಗಿನ ಸಹಯೋಗದ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ವಿಶಾಲ್ ಮತ್ತು ಶೇಖರ್, "ಪೋಕ್ಮನ್ ನೊಂದಿಗಿನ ಸಹಯೋಗ ನಮ್ಮನ್ನು ರೋಮಾಂಚನಗೊಳಿಸಿದೆ. ನಾವು ಮನರಂಜನೆ ಮತ್ತು ಸಾಹಸದ ಸಾರವನ್ನು ಸೆರೆಹಿಡಿಯುವ ಟ್ರ್ಯಾಕ್‌ಗಳನ್ನು ರಚಿಸಿದ್ದೇವೆ. ಸ್ಥಳೀಯ ಪ್ರೇಕ್ಷಕರೊಂದಿಗೆ ಆಳವಾಗಿ ಬೆರೆಯಲು ವಿಶಿಷ್ಟವಾದ ಭಾರತೀಯ ಕೌಶಲ್ಯವನ್ನು ಬಳಸಿಕೊಂಡಿದ್ದೇವೆ. ಈ ಮೂಲಕ ಜನರು ದೂರದರ್ಶನಗಳಿಂದ ದೂರವಿದ್ದರೂ ಸಹ ನಮ್ಮ ಈ ಟ್ರ್ಯಾಕ್‌ಗಳು ಅವರಿಗೆ ಆನಿಮೇಟೆಡ್ ಸರಣಿಯನ್ನು ನೆನಪಿಸುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ- Actress Sudharani: ಚೆಂದನವನದ ನಟಿ ಸುಧಾರಾಣಿ ಮೊದಲ ಗಂಡನ ವಿಕೃತಿಯಿಂದ ಪಾರು ಮಾಡಿದ್ದು ಈ ಇಬ್ಬರು!!

ಸಮಾರಂಭದಲ್ಲಿ ಉಪಸ್ಥಿತರಿದ್ದ ಅರ್ಮಾನ್ ಮಲಿಕ್, "ನಾನು ಬಾಲ್ಯದಲ್ಲಿ ಪೋಕ್ಮನ್ ಕಾರ್ಡ್‌ಗಳೊಂದಿಗೆ ಆಟವಾಡುತ್ತಿದ್ದೆ. ಈಗ ಅದೇ ಪೋಕ್ಮನ್ ಹಾರಿಜನ್ಸ್‌ಗಾಗಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಆರಂಭಿಕ ಟ್ರ್ಯಾಕ್ ಅನ್ನು ಹಾಡುವ ಅವಕಾಶ ನನಗೆ ಸಿಕ್ಕಿತಲ್ಲಾ ಎಂಬುದನ್ನು ಯೋಚಿಸಿದರೆ ಎಷ್ಟು ವಾಸ್ತವಿಕ ಇದು ಅನಿಸುತ್ತದೆ. ನನ್ನ ಬೆಳವಣಿಗೆಯ ಪ್ರತಿಹಂತದಲ್ಲೂ ನಾನು ಪೋಕ್ಮನ್ ಅನ್ನು ಪ್ರತಿದಿನ ನೋಡುತ್ತಿದ್ದೆ. ಈಗ ಹಾರಿಜನ್ಸ್ ಸರಣಿಯೊಂದಿಗೆ ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಾನೂ ಧ್ವನಿಯಾಗಿರುವುದು ಖುಷಿ ತಂದಿದೆ. ವಿಶಾಲ್-ಶೇಖರ್ ಅವರು ಪೋಕ್ಮನ್‌ನ ಜಾಗತಿಕ ಮೋಡಿಯೊಂದಿಗೆ ಸಾಂಪ್ರದಾಯಿಕ ಶಬ್ದಗಳನ್ನು ಪ್ರತಿಧ್ವನಿಸುವ ಮಧುರ ಸಂಗೀತವನ್ನು ರಚಿಸಿದ್ದಾರೆ. ಮುಂದಿನ ತಲೆಮಾರಿನ ಅಭಿಮಾನಿಗಳನ್ನು ಒಳಗೊಂಡಂತೆ ನಾನೂ ಸಹ ಈ ರೋಮಾಂಚನಕಾರಿ ಸಂಗೀತ ಮಿಶ್ರಣವನ್ನು ಅನುಭವಿಸಲು ಕಾಯುತ್ತಿರುವೆ” ಎಂದಿದ್ದಾರೆ. 

ಅತ್ಯಂತ ಉತ್ಸಾಹಭರಿತರಾದ ಶೆರ್ಲಿ ಸೆಟಿಯಾ, “ಬಾಲ್ಯದ ಅನುಭವಗಳೊಂದಿಗೆ ಬೆರೆಯುವ ಸಂಗೀತದ ರಚನೆ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತದೆ. ನಾನು ಅತಿಹೆಚ್ಚು ಪ್ರೀತಿಸಿದ ಪೋಕ್ಮನ್ ಮೃದುಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ. ಈ ಐಕಾನಿಕ್ ಫ್ರ್ಯಾಂಚೈಸ್‌ಗೆ ನನ್ನ ಧ್ವನಿಯನ್ನು ನೀಡಿರುವುದು ನಂಬಲಾಗದ ಮಧುರ ಅನುಭವವಾಗಿದೆ. ಈ ಹಾಡುಗಳು ಅಭಿಮಾನಿಗಳಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

ಮೊದಲ ಸಂಚಿಕೆಯು ಮೇ 25 ರಂದು ಹಂಗಾಮಾದಲ್ಲಿ ಪ್ರಸಾರವಾಗಲು ಸಿದ್ಧವಾಗಿರುವುದರಿಂದ, ಪೊಕ್ಮನ್ ತನ್ನ ಹಳೆಯ ಮತ್ತು ಹೊಸ ಅಭಿಮಾನಿಗಳಿಗೆ ಈ ರೋಮಾಂಚನಕಾರಿ ಹೊಸ ಸಾಹಸವನ್ನು ಆಸ್ವಾದಿಸಲು ಆಹ್ವಾನಿಸುತ್ತಿದೆ.

ಇದನ್ನು ಓದಿ :ಚಿತ್ರನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ: ಬಸವರಾಜ ಬೊಮ್ಮಾಯಿ

ಸಾರಾಂಶ

ಪೊಕ್ಮನ್‌ ಹಾರಿಜನ್ಸ್: ಈ ಸರಣಿಯು ನಿಮ್ಮನ್ನು, ತನ್ನ ಸಂಗಾತಿ ಪೊಕ್ಮನ್ ಮೈಯೊಹಾ ಜೊತೆ ಸ್ವಯಂ ಅನ್ವೇಷಣೆಯ ಪ್ರಯಾಣದಲ್ಲಿರುವ ಯುವತಿ ಲಿಕೊ ಮತ್ತು ಪೊಕ್ಮನ್ ಟ್ರೈನರ್ ಆಗುವ ಕನಸು ಕಾಣುತ್ತಿರುವ ಯುವಕ ರಾಯ್ ನೊಂದಿಗೆ ರೋಮಾಂಚನಕಾರಿಯಾದ ಹೊಸ ಸಾಹಸಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಲಿಕೊ ನಿಗೂಢವಾದ ಪೆಂಡೆಂಟ್ ಅನ್ನು ಹೊಂದಿದ್ದು, ರಾಯ್ ಪುರಾತನವಾದ ಹಾಗೂ ವಿಶಿಷ್ಟವಾಗಿ ಕಾಣುವ ಪೋಕ್ ಬಾಲ್ ಅನ್ನು ಹೊಂದಿದ್ದಾನೆ. ಕ್ಯಾಪ್ಟನ್ ಪಿಕಾಚು ಮುನ್ನಡೆಸುವ ಆಕರ್ಷಕ ವಾಯುನೌಕೆಯಲ್ಲಿ ಅವರು ತಮ್ಮ ರೋಮಾಂಚಕಾರಿ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಅವರು ಹೊಸ ಪೊಕ್ಮನ್ ಅನ್ನು ಭೇಟಿಯಾದಾಗ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಾಗ ಮತ್ತು ಎದುರಾಳಿಗಳೊಂದಿಗೆ ಹೋರಾಡುವಾಗ ತೆರೆದುಕೊಳ್ಳುವ ರಹಸ್ಯಗಳು, ಸವಾಲುಗಳು ಈ ಸರಣಿಯಲ್ಲಿ ಹೊರಹೊಮ್ಮುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News