ಸಲ್ಮಾನ್‌ ಖಾನ್‌, ಐಶ್ವರ್ಯ ರೈ ಬ್ರೇಕಪ್‌ಗೆ ಅಸಲಿ ಕಾರಣ ಇದು! 23 ವರ್ಷಗಳ ಬಳಿಕ ಹೊರಬಿತ್ತು ಬಿಗ್‌ ಸಿಕ್ರೇಟ್!!

 Salman Khan-Aishwarya Rai breakup: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ 2001 ರಲ್ಲಿ ಬೇರ್ಪಟ್ಟಿದ್ದರೂ ಸಹ, ಅವರ ಪ್ರೇಮಕಥೆ ಇಂದಿಗೂ ಚರ್ಚೆಯಲ್ಲಿದೆ. ಈ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆ ಇರಲಿಲ್ಲ. ಹಾಗಾದ್ರೆ ಈ ಪ್ರೇಮಕಥೆಯ ಅಂತ್ಯ ಹೇಗಾಯ್ತು? ಕಾರಣ ಏನು ಎನ್ನುವುದನ್ನು ಇದೀಗ ತಿಳಿಯೋಣ.. 

Written by - Savita M B | Last Updated : May 2, 2024, 09:53 PM IST
  • ಐಶ್ವರ್ಯಾ ರೈ ಜೊತೆಗಿನ ಬ್ರೇಕಪ್ ನಂತರ ಸಲ್ಮಾನ್ ಖಾನ್ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದರು
  • ಐಶ್‌ ನಟಿಸುತ್ತಿದ್ದ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೋಗಿ ಸಲ್ಮಾನ್‌ ಖಾನ್‌ ಕುಡಿದು ಗಲಾಟೆ ಮಾಡಿದ್ದರಂತೆ..
ಸಲ್ಮಾನ್‌ ಖಾನ್‌, ಐಶ್ವರ್ಯ ರೈ ಬ್ರೇಕಪ್‌ಗೆ ಅಸಲಿ ಕಾರಣ ಇದು!  23 ವರ್ಷಗಳ ಬಳಿಕ ಹೊರಬಿತ್ತು ಬಿಗ್‌ ಸಿಕ್ರೇಟ್!! title=

 Salman Khan-Aishwarya Rai: ಐಶ್ವರ್ಯಾ ರೈ ಜೊತೆಗಿನ ಬ್ರೇಕಪ್ ನಂತರ ಸಲ್ಮಾನ್ ಖಾನ್ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದರು. ಐಶ್ವರ್ಯಾ ತಮ್ಮ ಜೊತೆಗಿಲ್ಲ ಎಂಬ ಸತ್ಯವನ್ನು ಸಲ್ಲು ಬಾಯ್ ಒಪ್ಪಿಕೊಳ್ಳಲು ಬಹಳ ಸಮಯ ಹಿಡಿಯಿತು ಎನ್ನಲಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್‌ ಆದ ಬಳಿಕ ಸ್ವಲ್ಪ ಸಮಯದ ನಂತರ, ಐಶ್ವರ್ಯಾ ರೈ ಅವರ ಹೆಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು.. 

ಈ ಹೊಸ ಪ್ರೇಮ ಪ್ರಕರಣದ ಬಗ್ಗೆ ತಿಳಿದ ನಂತರ ಸಲ್ಮಾನ್ ಖಾನ್ ಇನ್ನಷ್ಟು ಕೆರಳಿದ್ದರಂತೆ... ಮಾಧ್ಯಮ ವರದಿಗಳ ಪ್ರಕಾರ ಸಲ್ಮಾನ್ ಖಾನ್ ವಿವೇಕ್ ಒಬೆರಾಯ್ ಅವರ ಮನೆಗೆ ಭೇಟಿ ನೀಡಿ ಅವರಿಗೆ ನಿಂದನೆಯ ಮಾತುಗಳನ್ನಾಡಿ ಈ ವಿಷಯವನ್ನು ಸ್ವತಃ ವಿವೇಕ್ ಒಬೆರಾಯ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಈ ಪ್ರಕರಣದ ನಂತರ ಐಶ್ವರ್ಯಾ ರೈ ಕೂಡ ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧಕ್ಕೆ ಬ್ರೇಕ್‌ ಹಾಕಿದ್ದರು.. 

ಇದನ್ನೂ ಓದಿ-7 ದೇಶಗಳಲ್ಲಿ ಶೂಟಿಂಗ್, 38 ಭಾಷೆಗಳಲ್ಲಿ ರಿಲೀಸ್.. ಬಾಹುಬಲಿಗಿಂತಲೂ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ.. ನಾಯಕ ಯಾರು?

ಅದರಂತೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಸಂಬಂಧವು ಏಕೆ ಮುರಿದುಹೋಯಿತು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ. ಸಲ್ಮಾನ್ ಖಾನ್ ತನ್ನ ಲವ್ ಐಶ್ವರ್ಯಾ ರೈ ಜೊತೆ ಮದುವೆಯಾಗಲು ಬಯಸಿದ್ರಂತೆ.. ಆದರೆ ಆ ಸಮಯದಲ್ಲಿ ಐಶ್ವರ್ಯಾ ತನ್ನ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದರಂತೆ.. 

ಇದನ್ನೂ ಓದಿ-Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!

ಐಶ್ವರ್ಯಾ ರೈ ಬಾಲಿವುಡ್‌ನ ಟಾಪ್ ನಟಿಯಾಗಲು ಶ್ರಮಿಸುತ್ತಿದ್ದರು, ಆದರೆ ಸಲ್ಮಾನ್ ಖಾನ್ ಅವರನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಲು ತಯಾರಿ ನಡೆಸುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ಐಶ್ವರ್ಯಾ ರೈ ಮದುವೆಯ ಬಗ್ಗೆ ಯಾವುದೇ ಆಸಕ್ತಿ ತೋರಿಸಲಿಲ್ಲ ಮತ್ತು ಸಲ್ಮಾನ್ ಖಾನ್ ಈ ಬಗ್ಗೆ ಬೇಸರಗೊಂಡಿದ್ದರು. ಇದಾದ ನಂತರವೇ ಇಬ್ಬರ ನಡುವೆ ಜಗಳ ಶುರುವಾಗಿದ್ದು.. ಐಶ್‌ ನಟಿಸುತ್ತಿದ್ದ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೋಗಿ ಸಲ್ಮಾನ್‌ ಖಾನ್‌ ಕುಡಿದು ಗಲಾಟೆ ಮಾಡಿದ್ದರಂತೆ.. 

ಈ ಮೊದಲು ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ವಿವಾದವಿತ್ತು, ಆದರೆ ಶೂಟಿಂಗ್ ಸೆಟ್‌ನಲ್ಲಿ ಗಲಾಟೆಯಾದ ನಂತರ, ಐಶ್ವರ್ಯಾ ರೈ ನಟನ ಮೇಲೆ ತೀವ್ರ ಕೋಪಗೊಂಡು ಅವರೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News