National Dengue Day 2024 : ಮಾರಕ ಡೆಂಗ್ಯೂ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು..!

Dengue treatment and symptoms : ಸೊಳ್ಳೆಯಿಂದ ಬರುವ ಈ ಕಾಯಿಲೆಯಿಂದ ಉಂಟಾಗುವ ನಿರಂತರ ಸಮಸ್ಯೆ ಮತ್ತು ಸವಾಲುಗಳ ಕುರಿತು ನಮಗೆ ತಿಳುವಳಿಕೆ ಇರಬೇಕು.. ಬನ್ನಿ ರಾಷ್ಟ್ರೀಯ ಡೆಂಗ್ಯೂ ದಿನದಂದು ಡೆಂಗ್ಯೂ ವಿರುದ್ಧ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಲು ಕೈಗೊಳ್ಳಬಹುದಾದ ಕೆಲವು ಪರಿಣಾಮಕಾರಿ ಕ್ರಮಗಳ ಕುರಿತು ಅರಿತುಕೊಳ್ಳೋಣ.. 

Written by - Krishna N K | Last Updated : May 15, 2024, 11:35 PM IST
    • ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ.
    • ಡೆಂಗ್ಯೂ ವಿರುದ್ಧ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು.
    • ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳು ಇಲ್ಲಿವೆ ನೋಡಿ..
National Dengue Day 2024 : ಮಾರಕ ಡೆಂಗ್ಯೂ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು..! title=

National Dengue Day 2024 : ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಡೆಂಗ್ಯೂ ಜ್ವರ ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಸೊಳ್ಳೆಯಿಂದ ಬರುವ ಈ ಕಾಯಿಲೆಯಿಂದ ಉಂಟಾಗುವ ನಿರಂತರ ಸಮಸ್ಯೆ ಮತ್ತು ಸವಾಲುಗಳ ಕುರಿತು ಜನರಿಗೆ ತಿಳಿಸಿ ಹೇಳಲಾಗುತ್ತದೆ. ಬನ್ನಿ ಡೆಂಗ್ಯೂ ವಿರುದ್ಧ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಲು ಕೈಗೊಳ್ಳಬಹುದಾದ ಕೆಲವು ಪರಿಣಾಮಕಾರಿ ಕ್ರಮಗಳ ಕುರಿತು ತಿಳಿಯೋಣ... 

ಸೊಳ್ಳೆ ಸಂತಾನೋತ್ಪತ್ತಿಯ ಸ್ಥಳಗಳನ್ನು ನಿವಾರಿಸಿ: ನಿಯಮಿತವಾಗಿ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪರೀಕ್ಷಿಸಿ ಮತ್ತು ಪಾತ್ರೆಗಳು, ಗಟಾರಗಳು ಹಾಗೂ ನೀರು ಸಂಗ್ರಹಗೊಳ್ಳಬಹುದಾದ ಇತರ ಪ್ರದೇಶಗಳಿಂದ ನಿಂತ ನೀರನ್ನು ಖಾಲಿ ಮಾಡುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯ ಸಂಭಾವ್ಯವನ್ನು ತಡೆಗಟ್ಟಬಹುದು. 

ಇದನ್ನೂ ಓದಿ:ಚಹಾ ಕುಡಿತಾ ಸಿಗರೇಟ್ ಸೇದುತ್ತೀರಾ..? ಹಾಗಿದ್ರೆ ಈ ಅಪಾಯದ ಬಗ್ಗೆ ಖಂಡಿತಾ ನಿಮಗೆ ತಿಳಿದಿರಬೇಕು..

ಸೊಳ್ಳೆ ನಿವಾರಕಗಳನ್ನು ಬಳಸಿ: DEET, ಪಿಕಾರಿಡಿನ್, ಅಥವಾ IR3535 ನಂತಹ ಪದಾರ್ಥಗಳನ್ನು ಹೊಂದಿರುವಂತಹ ಸೊಳ್ಳೆ ನಿವಾರಕಗಳನ್ನು ಹೊರಗೆ ಹೋಗುವಾಗ, ವಿಶೇಷವಾಗಿ ಸೊಳ್ಳೆ ಚಟುವಟಿಕೆ ಹೆಚ್ಚಿರುವ ಸ್ಥಳಕ್ಕೆ ತೆರಳುವಾಗ ಬಳಸಿ.. 

ಆರಂಭಿಕ ವೈದ್ಯಕೀಯ ಚಿಕಿತ್ಸೆ : ನೀವು ತೀವ್ರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವು ಅಥವಾ ದದ್ದುಗಳಂತಹ ಡೆಂಗ್ಯೂ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದರೆ, ತಕ್ಷಣದ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ. 

ಇದನ್ನೂ ಓದಿ:ಮಧುಮೇಹಿಗಳಿಗೆ ವರದಾನ ʼಈʼ ಬೀಜ.. ಹೀಗೆ ಸೇವಿಸಿದರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!

ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಸರಿಯಾದ ನೈರ್ಮಲ್ಯ ಕ್ರಮಗಳನ್ನು ನಿಮ್ಮ ಜೀವನದಲ್ಲಿ ಸೇರಿಸಿಕೊಂಡು ಆರೋಗ್ಯಯುತ ಬದುಕು ಸಾಗಿಸಿ..

ಸಮುದಾಯ ಸಭೆ : ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳಂತಹ ಡೆಂಗ್ಯೂ ನಿಯಂತ್ರಣ ಮತ್ತು ತಡೆಗಟ್ಟುವ ಗುರಿಯನ್ನು ಹೊಂದಿರುವ ಸಮುದಾಯ ಸಭೆ ಮತ್ತು ಚರ್ಚೆಗಳಲ್ಲಿ ಭಾಗವಹಿಸಿ ಈ ರೋಗದ ಕುರಿತು ತಿಳಿದುಕೊಳ್ಳಿ..

ಇದನ್ನೂ ಓದಿ:ದಿನಕ್ಕೆ ಇಷ್ಟೇ ಲೋಟ ಟೀ ಮತ್ತು ಕಾಫಿ ಈ ಸಮಯದಲ್ಲಿಯೇ ಕುಡಿಯಬೇಕು! ICMR ನೀಡಿದೆ ಮಾರ್ಗಸೂಚಿ

ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ: ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಾದಷ್ಟು ಉದ್ದ ತೋಳಿನ ಶರ್ಟ್‌ಗಳು, ಪ್ಯಾಂಟ್‌ಗಳು ಮತ್ತು ಸಾಕ್ಸ್‌ಗಳನ್ನು ಧರಿಸಿ. ಅಲ್ಲದೆ, ಸೊಳ್ಳೆಗಳು ನಿಮ್ಮ ಮನೆ ಪ್ರವೇಶ ಮಾಡದಂತೆ, ತಡೆಯಲು ಕಿಟಕಿಗಳು ಮತ್ತು ಬಾಗಿಲುಗಳಿಗೆ ಬಿಗಿಯಾದ ಸೊಳ್ಳೆ ಪರದೆಗಳನ್ನು ಹಾಕಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News