Year ender 2023: 2023ರಲ್ಲಿ ಸೌತ್‌ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಟಾಪ್ ನಾಯಕಿಯರು ಇವರೇ..!

South Actress: 2023ಕ್ಕೆ ವಿದಾಯ ಹೇಳಲು.. 2024ಕ್ಕೆ ಕಾಲಿಡಲು ರೆಡಿಯಾಗಿದ್ದೇವೆ.. ಈ ವರ್ಷ ಎಲ್ಲಾ ಕ್ಷೇತ್ರಗಳ ಜೊತೆಗೆ.. ಸಿನಿಮಾ ಕ್ಷೇತ್ರದಲ್ಲೂ ಸಿಹಿ-ಕಹಿಗಳ ಕಾಂಬಿನೇಷನ್ ನಡೀತು. ಹಾಗಾದರೆ ಈ ವರ್ಷ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳದೆ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ ನಾಯಕಿಯರು ಯಾರು?     

Written by - Savita M B | Last Updated : Dec 15, 2023, 01:51 PM IST
  • 2023ಕ್ಕೆ ವಿದಾಯ ಹೇಳಲು.. 2024ಕ್ಕೆ ಕಾಲಿಡಲು ರೆಡಿಯಾಗಿದ್ದೇವೆ..
  • ಈ ವರ್ಷ ಎಲ್ಲಾ ಕ್ಷೇತ್ರಗಳ ಜೊತೆಗೆ.. ಸಿನಿಮಾ ಕ್ಷೇತ್ರದಲ್ಲೂ ಸಿಹಿ-ಕಹಿಗಳ ಕಾಂಬಿನೇಷನ್ ನಡೀತು
  • 2023ರಲ್ಲಿ ಬಹುತೇಕ ಸ್ಟಾರ್ ಹೀರೋಯಿನ್‌ಗಳು ತೆರೆ ಮೇಲೆ ಕಾಣಸಿಕೊಂಡಿಲ್ಲ
Year ender 2023: 2023ರಲ್ಲಿ ಸೌತ್‌ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಟಾಪ್ ನಾಯಕಿಯರು ಇವರೇ..! title=

Year ender 2023: ನಾಯಕರ ಜೊತೆಗೆ ನಾಯಕಿಯರಿಗೂ ಅಭಿಮಾನಿಗಳಿರುತ್ತಾರೆ. ಅವರ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ ತಾವು ಮೆಚ್ಚುವ ನಾಯಕಿಯರು ಒಂದು ವರ್ಷ ಕಾಣಿಸಿಕೊಳ್ಳದಿದ್ದರೆ.. ಅಭಿಮಾನಿಗಳ ಫೀಲ್ ಹೇಗಿರುತ್ತೆ..? ಇನ್ನು 2023ರಲ್ಲಿ ಬಹುತೇಕ ಸ್ಟಾರ್ ಹೀರೋಯಿನ್‌ಗಳು ಕಾಣಸಿಕೊಂಡಿಲ್ಲ.. ಕೆಲವರು ಚಿತ್ರೀಕರಣಕ್ಕೆ ಸೀಮಿತವಾಗಿದ್ದರೆ, ಇನ್ನು ಕೆಲವರು ಈ ವರ್ಷ ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡಿದ್ದಾರೆ. 

Sain Pallavi: ಈ ವರ್ಷ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳದ ನಾಯಕಿಯರ ಪೈಕಿ ಸಾಯಿ ಪಲ್ಲವಿ ಮೊದಲಿಗರು.. ಕಳೆದ ವರ್ಷ ವಿರತ ಪರ್ವಂ ಹಾಗೂ ರಾಣಾ ಜೊತೆ ಗಾರ್ಗಿ ಸಿನಿಮಾ ಮೂಲಕ ಸದ್ದು ಮಾಡಿದ್ದ ಸಾಯಿ ಪಲ್ಲವಿ ಈ ವರ್ಷ ಸಂಪೂರ್ಣ ಕಣ್ಮರೆಯಾಗಿದ್ದರು. ಪರದೆಯ ಮೇಲೆ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಈಕೆ ಕಾಣಿಸಿಕೊಂಡಿರಲಿಲ್ಲ.. ಸಿನಿಮಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಸಾಯಿ ಪಲ್ಲವಿ ಇತ್ತೀಚೆಗೆ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದು.. ತಾಂಡೇಲ್ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆಯಾಗಿ ನಟಿಸಲಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಈ ಲೆಕ್ಕಾಚಾರದ ಪ್ರಕಾರ, ಅವರು 2024 ರಲ್ಲಿ ಸಕ್ರಿಯರಾಗಲಿದ್ದಾರೆ. 

ಇದನ್ನೂ ಓದಿ-ಸಖತ್‌ ಸಿಂಪಲ್.. ಭಾರತದ ರಿಚ್ಚೆಸ್ಟ್‌ ಸ್ಟಾರ್ ಕಿಡ್.. 1350 ಕೋಟಿ ಆಸ್ತಿ ಜತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಈ ನಟ

Pooja Hegde: ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಸದ್ಯ ಸಂಕಷ್ಟದಲ್ಲಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಒಂದು ಹಿಟ್ ಸಿನಿಮಾ ಸಹ ನೀಡದ ನಟಿ ಮಾಡಿದ ಪ್ರತಿ ಚಿತ್ರವೂ ಆಕೆಗೆ ನಿರಾಸೆ ಮೂಡಿಸಿದೆ..  ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಚಿತ್ರದಲ್ಲಿ ನಟಿಸಿ..ಮಧ್ಯದಲ್ಲಿ ಹಿಂದೆ ಸರಿದರು. ಹಾಗಾಗಿ ಈ ವರ್ಷ ಪೂಜಾ ಹೆಗಡೆ ಅವರ ಯಾವುದೇ ಸಿನಿಮಾ ಥಿಯೇಟರ್‌ಗಳಲ್ಲಿ ಕಾಣಿಸಿಕೊಂಡಿಲ್ಲ. 

Rakul Preeth Singh: 2023ರಲ್ಲಿ ಕಾಣಿಸಿಕೊಳ್ಳದ ಮತ್ತೊಬ್ಬ ನಾಯಕಿ ರಾಕುಲ್ ಪ್ರೀತ್ ಸಿಂಗ್. ಈ ಬ್ಯೂಟಿಗೆ ತೆಲುಗು ಸಿನಿಮಾಗಳ ಅವಕಾಶಗಳು ಕಡಿಮೆಯಾಗಿವೆ ಎನ್ನಲಾಗುತ್ತಿದೆ.. ಹೀಗಾಗಿ ರಾಕುಲ್ ಪ್ರೀತ್ ಸಿಂಗ್ ಹೆಚ್ಚಾಗಿ ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು 2021 ರಲ್ಲಿ ಕೊಂಡಪೋಲಂ ಬಿಡುಗಡೆಯಾದ ನಂತರ, ತೆಲುಗು ಇಂಡಸ್ಟ್ರಿಗೆ ಕೈ ಕೊಟ್ಟು ಹಿಂದಿ ಮತ್ತು ತಮಿಳು ಚಿತ್ರಗಳನ್ನು ಮಾಡುತ್ತಿದ್ದಾರೆ..

Lavanya tripati: ಇತ್ತೀಚೆಗಷ್ಟೇ ಮೆಗಾ ಸೊಸೆಯಾದ ಲಾವಣ್ಯ ತ್ರಿಪಾಠಿ.. ಈ ಸ್ಟಾರ್ ಬ್ಯೂಟಿಯಿಂದಲೂ ಈ ವರ್ಷ ಒಂದೇ ಒಂದು ಚಿತ್ರವೂ ಥಿಯೇಟರ್‌ಗೆ ಬಂದಿಲ್ಲ.. ಕಳೆದ ವರ್ಷದ ಹ್ಯಾಪಿ ಬರ್ತ್ ಡೇ, ಅದಕ್ಕೂ ಮುನ್ನ Chaavu Kaburu Challaga ಮುಂತಾದ ಕೂಲ್ ಚಿತ್ರಗಳನ್ನು ಮಾಡಿದ್ದ ಲಾವಣ್ಯ ಈ ವರ್ಷ ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡಿದ್ದಾರೆ. 

Anupama Parameshwaran: 2023 ರಲ್ಲಿ ಅನುಪಮಾ ಪರಮೇಶ್ವರನ್ ಕೂಡ ಟಾಲಿವುಡ್ ಪ್ರೇಕ್ಷಕರಿಂದ ಮಿಸ್ ಆಗಿದ್ದರು. ಈ ವರ್ಷ ಅವರ ಯಾವ ಚಿತ್ರಗಳು ಬಿಡುಗಡೆಯಾಗಿಲ್ಲ.. ಆದರೆ ಅನುಪಮಾ ಪರಮೇಶ್ವರನ್ ಸದ್ಯ ತೆಲುಗಿನಲ್ಲಿ ಟಿಲ್ಲು ಸ್ಕ್ವೇರ್ ಜೊತೆಗೆ ರವಿತೇಜ ಅವರ ಈಗಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಟಿಲ್ಲು ಸ್ಕ್ವೇರ್ ಚಿತ್ರ ಫೆಬ್ರವರಿ 9 ರಂದು ತೆರೆಗೆ ಬರಲಿದ್ದು, ಈಗಲ್ ಸಂಕ್ರಾಂತಿಯಂದು ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ-ಬಿಗ್‌ ಬಾಸ್‌ ಮನೆಯಲ್ಲಿ ರಾಗಿ ಮುದ್ದೆ ರಾಮಾಯಣ.. ಪೇಚಿಗೆ ಸಿಲುಕಿದ ಪ್ರತಾಪ್!

Mehreen: ಮದುವೆಯೇ ಬೇಡ ಎಂದುಕೊಂಡಿದ್ದ ಮೆಹರಿನ್ ಕೆರಿಯರ್ ಗೆ ಪ್ರಾಮುಖ್ಯತೆ ನೀಡಿ, ಈ ವರ್ಷ ಬೆಳ್ಳಿತೆರೆಗೆ ಕೈ ಕೊಟ್ಟಿದ್ದಾರೆ. ಎಫ್ 3 ಸಿನಿಮಾದ ಸೋಲಿನ ನಂತರ, ಆಕೆಗೆ ಆಫರ್‌ಗಳು ಕಡಿಮೆಯಾದವು.. ಸದ್ಯ ಕನ್ನಡ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಆದರೆ ಇದುವರೆಗೂ ತೆಲುಗಿನಲ್ಲಿ ಯಾವುದೇ ಸಿನಿಮಾಗೆ ಸಹಿ ಮಾಡಿಲ್ಲ. 

Rashi Khanna: ಸಾಕಷ್ಟು ಸಾಲು ಸಾಲು ಸಿನಿಮಾ ಮಾಡಿದ್ದ ರಾಶಿ ಖನ್ನಾ.. ಇತ್ತೀಚೆಗೆ ಸತತ ಸೋಲುಗಳನ್ನು ಎದುರಿಸಿದ್ದಾರೆ. ಟಾಲಿವುಡ್‌ನಲ್ಲಿ ಆಕೆಯ ಲಕ್‌ ಕೆಲಸ ಮಾಡಲಿಲ್ಲ.. 2023ರಲ್ಲಿ ನಟಿ ತೆರೆಯಿಂದ ಮರೆಯಾಗಿದ್ದರು..  ಥ್ಯಾಂಕ್ ಯೂ ಸಿನಿಮಾದ ನಂತರ ಟಾಲಿವುಡ್ ನಿಂದ ದೂರ ಉಳಿದಿರುವ ರಾಶಿ ಖನ್ನಾ ಬಾಲಿವುಡ್ ಮತ್ತು ಕಾಲಿವುಡ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗೆ ಈ ವರ್ಷ ಹಲವು ನಾಯಕಿಯರು ತೆರೆಯ ಮೇಲೆ ಕಾಣಲಿಲ್ಲ. ಮುಂದಿನ ವರ್ಷವಾದರೂ ಸದ್ದು ಮಾಡುತ್ತಾರಾ ಕಾದುನೋಡಬೇಕಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News