ಅಲೋವಿರಾವನ್ನು ಇದರ ಜೊತೆ ಬೆರೆಸಿ ಹಚ್ಚಿದರೆ ದಟ್ಟ, ಕಡು ಕಪ್ಪು ಕೂದಲು ನಿಮ್ಮದಾಗುವುದು!

Remedy to get long shiny hair : ಆಲೋವಿರಾ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು. 

Written by - Ranjitha R K | Last Updated : Apr 30, 2024, 01:04 PM IST
  • ಅಲೋವೆರಾವನ್ನು ಅನೇಕ ರೀತಿಯ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.
  • ಈ ಔಷಧೀಯ ಸಸ್ಯವನ್ನು ತ್ವಚೆ ಮತ್ತು ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ.
  • ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು.
ಅಲೋವಿರಾವನ್ನು ಇದರ ಜೊತೆ ಬೆರೆಸಿ ಹಚ್ಚಿದರೆ ದಟ್ಟ, ಕಡು ಕಪ್ಪು ಕೂದಲು ನಿಮ್ಮದಾಗುವುದು! title=

Hair care Tips Kannada : ಅಲೋವೆರಾವನ್ನು ಅನೇಕ ರೀತಿಯ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.ಈ ಔಷಧೀಯ ಸಸ್ಯವನ್ನು ತ್ವಚೆ ಮತ್ತು ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ.ಅಲೋವೆರಾದಲ್ಲಿ ಕಂಡು ಬರುವ ಜೀವಸತ್ವಗಳು, ಕಿಣ್ವಗಳು,ಅಮೈನೋ ಆಮ್ಲಗಳು ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು. 

ದಟ್ಟ ಕೂದಲಿಗೆ ಅಲೋವೆರಾ:  
ಕೂದಲಿಗೆ ತಾಜಾ ಅಲೋವೆರಾ ಎಲೆಯಿಂದ ತೆಗೆದ ತಿರುಳನ್ನು ಹಚ್ಚುವುದಾದರೆ   ಮೊದಲು ಎಲೆಯನ್ನು ಕತ್ತರಿಸಿ ಒಳಗೆ ಕಾಣಿಸುವ ಜೆಲ್ ಅನ್ನು ಬ್ಲೆಂಡರ್ ನಲ್ಲಿ ಹಾಕಿ ಪುಡಿಮಾಡಿ.ಇದನ್ನು ಕೂದಲಿಗೆ ಹಚ್ಚಲು ಅಲೋವೆರಾದ ಸ್ಥಿರತೆಯನ್ನು ನೋಡಿಕೊಂಡು ಹಾಗೆಯೇ ಕೂದಲಿಗೆ ಹಚ್ಚಬಹುದು.ಇದನ್ನು ಬೆರಳುಗಳಿಂದ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ ನಿಧಾನವಾಗಿ  ಮಸಾಜ್ ಮಾಡಿ. ಸುಮಾರು 15ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು  ತೊಳೆಯಬಹುದು.ಇದು ಕೂದಲಿಗೆ ಸಾಕಷ್ಟು ತೇವಾಂಶವನ್ನು ನೀಡುತ್ತದೆ. ಕೂದಲು ಉದ್ದವಾಗಿ ಬೆಳೆಯುತ್ತದೆ. 

ಇದನ್ನೂ ಓದಿ : ವೇಗವಾಗಿ ಹೆಚ್ಚುತ್ತಿದೆ ಡೆಂಗ್ಯೂ, ಚಿಕೂನ್‌ಗುನ್ಯಾ: ಆರೋಗ್ಯ ಇಲಾಖೆ ನೀಡಿದೆ ಈ ಎಚ್ಚರಿಕೆ

ಅಲೋವೆರಾ ಮತ್ತು ತೆಂಗಿನ ಎಣ್ಣೆ :ಅಲೋವೆರಾವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಅಲೋವೆರಾ ಜೆಲ್ ಹಾಕಿ ಮಿಕ್ಸ್ ಮಾಡಿ ಹೇರ್ ಮಾಸ್ಕ್ ನಂತೆ ಕೂದಲಿಗೆ ಹಚ್ಚಿ.ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಕೂದಲಿನ ಮೇಲೆ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. 

ಅಲೋವೆರಾ ಮತ್ತು ಮೊಟ್ಟೆ : ಅಲೋವೆರಾ ಜೆಲ್ ಜೊತೆಗೆ ಮೊಟ್ಟೆಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಸಂಪೂರ್ಣ ಪೋಷಣೆ ದೊರೆಯುತ್ತದೆ. ಇದು ಕೂದಲಿಗೆ ಆಳವಾದ ಕಂಡೀಷನರ್ ಒದಗಿಸುತ್ತದೆ.ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಅಲೋವೆರಾವನ್ನು ತೆಗೆದುಕೊಂಡು, ಒಂದು ಸಂಪೂರ್ಣ ಮೊಟ್ಟೆಯನ್ನು ಸೇರಿಸಿ ಒಂದೂವರೆ ಚಮಚ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆವರೆಗೆ ಬಿಟ್ಟು ಕೂದಲನ್ನು ತೊಳೆಯಿರಿ.ಈ ಹೇರ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಕೂದಲಿಗೆ  ಹಚ್ಚಬಹುದು. 

ಇದನ್ನೂ ಓದಿ : ಈ ಸಮಯದಲ್ಲಿ ಎಳನೀರು ಕುಡಿದರೆ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದೇ ಇಲ್ಲ

ಅಲೊವೆರಾ ಮತ್ತು ತೆಂಗಿನ ಹಾಲು : ಆಲೋವಿರಾ ಮತ್ತು ತೆಂಗಿನ ಹಾಲನ್ನು ಬೆರೆಸಿ ಕೂದಲಿಗೆ  ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ. ಹೀಗಾಗಿ ಕೂದಲ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಇದಕ್ಕಾಗಿ 4 ಚಮಚ ತೆಂಗಿನ ಹಾಲಿನಲ್ಲಿ 4 ಚಮಚ ಅಲೋವೆರಾ ಜೆಲ್ ಸೇರಿಸಿ. ಅಗತ್ಯ ಎನಿಸಿದರೆ  ಸ್ವಲ್ಪ ತೆಂಗಿನೆಣ್ಣೆ ಕೂಡಾ ಹಾಕಬಹುದು. ಹೀಗೆ ತಯಾರಿಸಿದ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ ಬಿಡಬೇಕು. ನಂತರ ಕೂದಲನ್ನು ತೊಳೆದು ಸ್ವಚ್ಛಗೊಳಿಸಬೇಕು. 

(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News