ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುತ್ತದೆ ಸೌತೆಕಾಯಿ

Cucumber Health Benefits :ಸೌತೆಕಾಯಿ ಆರೋಗ್ಯದ ಗಣಿ ಎಂದರೆ ತಪ್ಪಲ್ಲ. ಅದರಲ್ಲೂ ಬೇಸಿಗೆಯಲ್ಲಿ ತಲೆದೋರುವ ಅನೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಾಯ ಮಾಡುತ್ತದೆ.  ಅಧಿಕ ನೀರಿನ ಅಂಶ ಮತ್ತು ಪೋಷಕ ತತ್ವಗಳನ್ನೂ  ಒಳಗೊಂಡಿರುವ ಸೌತೆಕಾಯಿ  ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. 

Written by - Ranjitha R K | Last Updated : Mar 17, 2023, 03:58 PM IST
  • ಸೌತೆಕಾಯಿ ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂನ ಪವರ್ ಹೌಸ್ ಆಗಿದೆ.
  • ಈ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಮತ್ತು ನೀರು ಸಮೃದ್ಧವಾಗಿದೆ.
ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುತ್ತದೆ  ಸೌತೆಕಾಯಿ  title=

ಬೆಂಗಳೂರು : ಬೇಸಿಗೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು. ದೇಹವನ್ನು ತಂಪಾಗಿರಿಸುವ  ಆಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ಸಂಪೂರ್ಣ ಪೌಷ್ಟಿಕಾಂಶವನ್ನು ಪಡೆಯಬಹುದು. ಇದರೊಂದಿಗೆ ಬೇಸಿಗೆಯಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಶಾಶ್ವತವಾಗಿ ದೂರ ಇಡಬಹುದು.

ದೇಹವನ್ನು ತಂಪಾಗಿಡುವ ಆಹಾರಗಳ ಪಟ್ಟಿ ತುಂಬಾ ದೊಡ್ಡದಿದೆ. ಈ ಪೈಕಿ ಆರೋಗ್ಯಕರವಾಗಿರುವ ಜೊತೆಗೆ ರುಚಿಕರವಾದ  ಆಹಾರವನ್ನು ಸೇವಿಸಿ ದೇಹವನ್ನು ತಂಪಾಗಿಸಬೇಕಾದರೆ ಸೌತೆಕಾಯಿ ಉತ್ತಮ ಆಯ್ಕೆಯಾಗಿದೆ. ಸೌತೆಕಾಯಿ ತಿನ್ನುವುದರಿಂದ ಆರೋಗ್ಯ ಸುಧಾರಿಸುತ್ತದೆ. 
ಬೇಸಿಗೆಯಲ್ಲಿ ಸೌತೆಕಾಯಿಯನ್ನು ಸೇವಿಸಬೇಕು. ಏಕೆಂದರೆ ಇದು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಸೌತೆಕಾಯಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಯಾವುವು ನೋಡೋಣ: 

ಇದನ್ನೂ ಓದಿ :  ಕೆಮ್ಮು ಜ್ವರ ಈಗ ಸಾಮಾನ್ಯ ! ಆದರೆ H3N2 ಮತ್ತು ಕೋವಿಡ್ 19 ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ ?

ನೀರಿನಂಶ ಅಧಿಕವಾಗಿರುತ್ತದೆ :  
ಸೌತೆಕಾಯಿಯಲ್ಲಿ ಶೇ 95ರಷ್ಟು ನೀರಿದೆ. ಸುಡುವ ಬಿಸಿಲಿನ ಕಾರಣದಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡುತ್ತದೆ. ಸೌತೆಕಾಯಿ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ನೀರು ದೇಹವನ್ನು ಶುದ್ಧೀಕರಿಸಲು ಮತ್ತು ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ : 
ಸೌತೆಕಾಯಿಯಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣ ಲಕ್ಷಣಗಳಿವೆ. ಇದು ವಿವಿಧ ಮಾನವ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಸೌತೆಕಾಯಿಯ ಚರ್ಮವು ನಾರಿನಾಂಶದ ಉತ್ತಮ ಮೂಲವಾಗಿದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಹೊಟ್ಟೆಯಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಕೊಲೊನ್ ಕ್ಯಾನ್ಸರ್ ಅನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ.

ಇದನ್ನೂ ಓದಿ :  ಮಧುಮೇಹದಿಂದ ದೇಹದ ಈ ಭಾಗಗಳಿಗೆ ಗರಿಷ್ಠ ಹಾನಿ!

ರಕ್ತದೊತ್ತಡ ನಿಯಂತ್ರಿಸುತ್ತದೆ : 
ಸೌತೆಕಾಯಿ ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂನ ಪವರ್ ಹೌಸ್ ಆಗಿದೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಮತ್ತು ನೀರು ಸಮೃದ್ಧವಾಗಿದೆ. ಇದೇ ಕಾರಣಕ್ಕೆ ಅವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.

ಚರ್ಮಕ್ಕೆ ಒಳ್ಳೆಯದು :
ಸೌತೆಕಾಯಿ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ ನಿಮ್ಮ ತ್ವಚೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಸ್ಕಿನ್ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಉರಿಯೂತ ಅಥವಾ ಕಣ್ಣಿನ ಕೆಳಗೆ ಕಾಣಿಸಿಕೊಳ್ಳುವಡಾರ್ಕ್ ಸರ್ಕಲ್ ಗೆ ಸೌತೆಕಾಯಿ ಚೂರುಗಳನ್ನು ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಬೇಸಿಗೆಯಲ್ಲಿ ಉಂಟಾಗುವ ಚರ್ಮ ಕೆಂಪಾಗುವುದು, ಕಿರಿಕಿರಿಯಂತಹ ಅನೇಕ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಕೆಫೀಕ್ ಆಮ್ಲವಿದೆ. ಇದು ಚರ್ಮದ ಕಿರಿಕಿರಿ ಮತ್ತು ಟ್ಯಾನಿಂಗ್ ಅನ್ನು ನಿವಾರಿಸುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News