ಮಧುಮೇಹದಿಂದ ದೇಹದ ಈ ಭಾಗಗಳಿಗೆ ಗರಿಷ್ಠ ಹಾನಿ!

Diabetes Related Disease: ಇಡೀ ಪ್ರಪಂಚದಾದ್ಯಂತ ಪಸರಿಸಿರುವ ಮಧುಮೇಹವು ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ಈ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ದೇಹದ ಕೆಲವು ಭಾಗಗಳ ಮೇಲೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಹಾಗಿದ್ದರೆ, ಯಾವ ಅಂಗಗಳ ಮೇಲೆ ಮಧುಮೇಹ ಹೆಚ್ಚು ಹಾನಿಯುಂಟುಮಾಡುತ್ತದೆ ಎಂದು ತಿಳಿಯೋಣ...

Written by - Yashaswini V | Last Updated : Mar 17, 2023, 07:49 AM IST
  • ದೀರ್ಘಾವಧಿಯಲ್ಲಿ ಮಧುಮೇಹವು ಹಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
  • ವಾಸ್ತವವಾಗಿ, ಬ್ಲಡ್ ಶುಗರ್ ಲೆವಿಲ್ ಹೆಚ್ಚಾದಂತೆ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ.
  • ದೀರ್ಘಾವಧಿಯಲ್ಲಿ ಇದು ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ.
ಮಧುಮೇಹದಿಂದ ದೇಹದ ಈ ಭಾಗಗಳಿಗೆ ಗರಿಷ್ಠ ಹಾನಿ! title=
Diabetes Related Disease

Diabetes Related Disease And Control Tips: ವಿಶ್ವದಾದ್ಯಂತ ಅತ್ಯಧಿಕ ಜನರ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಿರುವ ಕಾಯಿಲೆ ಎಂದರೆ ಮಧುಮೇಹ. ಒಮ್ಮೆ ಮಧುಮೇಹಕ್ಕೆ ಬಲಿಯಾದರೆ ಜೀವನಪರ್ಯಂತ ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ, ನಾನಾ ರೀತಿಯ ಕಾಯಿಲೆಗಳಿಗೆ ಬಲಿಯಾಗಬಹುದು. 

ವಾಸ್ತವವಾಗಿ, ಮಧುಮೇಹವು ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ಮಧುಮೇಹವನ್ನು ನಿಯಂತ್ರಿಸಲು ಸರಿಯಾದ ಕ್ರಮ ವಹಿಸದಿದ್ದರೆ ಇತರ ಅನೇಕ ಕಾಯಿಲೆಗಳ ಅಪಾಯವು ಉದ್ಭವಿಸುತ್ತದೆ. ವೈದ್ಯ ಲೋಕದ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅದು ನಿಮ್ಮ ದೇಹದ ಕೆಲವು ಅಂಗಗಳಿಗೆ ಹೆಚ್ಚಿನ ಹಾನಿಯುಂಟಾಗುವಂತೆ ಮಾಡಬಹುದು. ಇದನ್ನು ತಪ್ಪಿಸಲು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು, ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರಪದ್ದತಿಯನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. 

ಮಧುಮೇಹ ಮತ್ತು ಮೇದೋಜ್ಜೀರಕ ಗ್ರಂಥಿಯು ನಿಕಟ ಸಂಬಂಧ ಹೊಂದಿದೆ. ಏಕೆಂದರೆ ನಮ್ಮ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಅಥವಾ ಯಾವುದೇ ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಹೈ ಬ್ಲಡ್ ಶುಗರ್ ಉಂಟಾಗಬಹುದು. ಇದರಿಂದ ದೇಹದ ಕೆಲವು ಅಂಗಗಳ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು. 

ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ 

ದೇಹದ ಈ ಅಂಗಗಳ ಮೇಲೆ ಅತಿ ಹೆಚ್ಚು ಪರಿಣಾಮ ಬಿರುತ್ತೆ ಮಧುಮೇಹ:
ವೈದ್ಯರ ಪ್ರಕಾರ, ದೀರ್ಘಾವಧಿಯಲ್ಲಿ ಮಧುಮೇಹವು ಹಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಬ್ಲಡ್ ಶುಗರ್ ಲೆವಿಲ್ ಹೆಚ್ಚಾದಂತೆ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಇದು ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ.  ಮಧುಮೇಹದ ದೀರ್ಘಕಾಲಿನ ಪರಿಣಾಮಗಳು ಮುಖ್ಯವಾಗಿ ಹೃದಯ, ಮೆದುಳು, ಪಾದಗಳು, ಕಣ್ಣುಗಳು, ಮೂತ್ರಪಿಂಡಗಳ ಮೇಲೆ ಕಂಡು ಬರುತ್ತದೆ.  

ಹೃದಯ:
ಹೃದಯವು ಇಡೀ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವ ಸ್ನಾಯು. ಹೃದಯವು ಹೃದಯರಕ್ತನಾಳದ ಅಥವಾ ರಕ್ತಪರಿಚಲನಾ ವ್ಯವಸ್ಥೆಯ ಭಾಗವಾಗಿದೆ . ಈ ದೇಹ ವ್ಯವಸ್ಥೆಯು ನಿಮ್ಮ ರಕ್ತನಾಳಗಳನ್ನು ಸಹ ಒಳಗೊಂಡಿದೆ, ಇದು ನಿಮ್ಮ ಅಂಗಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವಂತಹ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ. ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.  ಅಪಧಮನಿಯಲ್ಲಿ ಅಡಚಣೆ ಉಂಟಾದಾಗ ಅದು ಹೃದಯಾಘಾತಕ್ಕೂ ಕಾರಣವಾಗುತ್ತದೆ.

ಮೆದುಳು: 
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದು ನಿಮ್ಮ ಅರಿವು ಎಂದರೆ ಮೆದುಳಿನ ಮೇಲೂ ಸಹ ಪರಿಣಾಮ ಬೀರಬಹುದು. ಅದರಲ್ಲೂ ನಿರ್ದಿಷ್ಟವಾಗಿ ನಿಮ್ಮ ಜ್ಞಾಪಕಶಕ್ತಿಯ ಮೇಲೆ ಇದು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಸಂಶೋಧನೆಯೊಂದರ ಪ್ರಕಾರ, ಮಧುಮೇಹವು ನಿಮ್ಮ ಮೆದುಳಿನ ರಚನೆಯನ್ನು ಬದಲಾಯಿಸಬಹುದು. ಮಧುಮೇಹ ಹೊಂದಿರುವ ಜನರು ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಹೊಂದಿರುತ್ತಾರೆ. 

ಇದನ್ನೂ ಓದಿ- ಈ 2 ಹಣ್ಣುಗಳಿಂದ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು

ಪಾದಗಳು: 
ದೊಡ್ಡ ಮತ್ತು ಸಣ್ಣ ರಕ್ತನಾಳಗಳಲ್ಲಿ ರಕ್ತ ಪೂರೈಕೆ ಕಡಿಮೆಯಾದಾಗ ಮಧುಮೇಹ ಇರುವವರ ಪಾದಗಳು ಹಾನಿಗೊಳಗಾಗುವ ಅಪಾಯವಿದೆ. ರಕ್ತ ಸಂಚಾರದಲ್ಲಿ ಅಡಚಣೆ ಉಂಟಾಗಿ ಮಧುಮೇಹಿಗಳ ಪಾದಗಳು ನಿಶ್ಚೇಷ್ಟಿತವಾಗಲೂಬಹುದು.

ಕಣ್ಣುಗಳು: 
ರೆಟಿನಾವು ಕಣ್ಣಿನ ಹಿಂಭಾಗದಲ್ಲಿರುವ ಅಂಗಾಂಶದ ಪದರವಾಗಿದ್ದು ಅದು ಬೆಳಕಿಗೆ ಸೂಕ್ಷ್ಮವಾಗಿರುತ್ತದೆ. ಹೈ ಬ್ಲಡ್ ಶುಗರ್ ರೆಟಿನಾ ಮತ್ತು ಸುತ್ತಮುತ್ತಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಮಧುಮೇಹ ರೋಗಿಗಳಲ್ಲಿ ದೃಷ್ಟಿ ಮಂದವಾಗುವಂತಹ ಲಕ್ಷಣಗಳು ಕಂಡು ಬರುತ್ತವೆ.  ಕಾಲಾನಂತರದಲ್ಲಿ, ಮಧುಮೇಹವು ಡಯಾಬಿಟಿಕ್ ರೆಟಿನೋಪತಿಗೆ ಕಾರಣವಾಗಬಹುದು. ಈ ಸ್ಥಿತಿಯು ದೃಷ್ಟಿ ಸಮಸ್ಯೆಗಳು ಮತ್ತು ಕುರುಡುತನಕ್ಕೆ ಕಾರಣವಾಗಬಹುದು.

ಮೂತ್ರಪಿಂಡಗಳು: 
ಮೂತ್ರಪಿಂಡಗಳು ಶುದ್ಧೀಕರಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ಅವು ದೇಹದಿಂದ ತ್ಯಾಜ್ಯ, ಹೆಚ್ಚುವರಿ ದ್ರವ ಮತ್ತು ಆಮ್ಲವನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ. ಆದರೆ, ಮಧುಮೇಹದಿಂದ ಉಂಟಾಗುವ ಅಧಿಕ ರಕ್ತದ ಸಕ್ಕರೆಯು ನಿಮ್ಮ ಮೂತ್ರಪಿಂಡಗಳಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಮೂತ್ರಪಿಂಡದ ಸಣ್ಣ ರಕ್ತನಾಳಗಳಲ್ಲಿನ ಬದಲಾವಣೆಗಳಿಂದ ಮಧುಮೇಹ ಹೊಂದಿರುವ ಜನರು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಹೊಂದಿರುತ್ತಾರೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News