Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat: ನಮ್ಮ ದೇಶದಲ್ಲಿ ಹಲವು ಮನೆಗಳಲ್ಲಿ ಹುರಿದ ಗೋದಿ ಅಥವಾ ಅದರಿಂದ ತಯಾರಿಸಿದ ಪದಾರ್ಥವನ್ನು ಸೇವಿಸುತ್ತಾರೆ. ಹುರಿದ ಗೋಧಿಯನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳು ಸಿಗುತ್ತವೆ ಮತ್ತು ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Aug 4, 2022, 06:23 PM IST
  • ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು.
  • ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ?
  • ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ.
Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ title=
Roasted Wheat Health Benefits

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು ತಿನ್ನುವುದರಿಂದ ಯಾವ ಯಾವ ಲಾಭಗಳಾಗುತ್ತವೆ ತಿಳಿದುಕೊಳ್ಳೋಣ. 

ಗೋದಿಯನ್ನು ಹುರಿದು ತಿನ್ನುವುದರಿಂದ ಆಗುವ ಲಾಭಗಳು
ಸ್ಟ್ರೋಕ್ ಅಪಾಯ ತಗ್ಗಿಸುತ್ತದೆ

ಹುರಿದ ಗೋಧಿಯನ್ನು ತಿನ್ನುವುದರಿಂದ ಅದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಫೈಬರ್, ವಿಟಮಿನ್ ಕೆ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಧಾನ್ಯಗಳಲ್ಲಿರುವ ಸಂಯುಕ್ತಗಳು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ, ಆದ್ದರಿಂದ ನೀವು ಪಾರ್ಶ್ವವಾಯುವಿಗೆ ಗುರಿಯಾಗಿದ್ದರೆ, ಹುರಿದ ಗೋಧಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮಧುಮೇಹವನ್ನು ನಿಯಂತ್ರಣ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಹುರಿದ ಗೋಧಿಯನ್ನು ಸೇವಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರಲ್ಲಿರುವ ಫೈಬರ್ ಉಪವಾಸದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಇದನ್ನು ಸೇವಿಸಿದರೆ ನಿಮ್ಮ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ
ಹುರಿದ ಗೋಧಿಯನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆಯಾಗುತ್ತವೆ. ಏಕೆಂದರೆ ಇದು ನಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-ಆಸಿಡಿಟಿ ಇದ್ದವರು ಪುದಿನಾವನ್ನು ಈ ರೀತಿ ಸೇವಿಸಿದರೆ ಒಂದೇ ದಿನದಲ್ಲಿ ಸಿಗುವುದು ಪರಿಹಾರ

ಜೀರ್ಣಕ್ರಿಯೆಗೆ ಹಿತಕಾರಿ
ಹುರಿದ ಗೋಧಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸಿಕೊಳ್ಳಬಹುದು.ಇದರಲ್ಲಿ ಇರುವ ಫೈಬರ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಅಲ್ಲ, ಇದನ್ನು ದಿನನಿತ್ಯ ಸೇವಿಸಿದರೆ ನಿಮ್ಮ ಜೀರ್ಣಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-White Hair: ಬಿಪಿ ಜಾಸ್ತಿ ಇರುವವರ ತಲೆ ಕೂದಲು ಬೇಗನೆ ಬೆಳ್ಳಗಾಗುತ್ತವೆಯೇ? ಏನಿದೆ ಇದರ ನಡುವಿನ ಕನೆಕ್ಷನ್

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News