ತಲೆ ನೋವಿಗೆ ಔಷಧಿ ತೆಗೆದುಕೊಳಬೇಕಿಲ್ಲ !ಈ ಆಹಾರ ಪದಾರ್ಥ ಸೇವಿಸಿದರೂ ಸಾಕು

Home remedies for headache : ನಿಮಗೂ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ 5 ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು.   

Written by - Ranjitha R K | Last Updated : Feb 3, 2024, 04:35 PM IST
  • ತಲೆನೋವು ಇಂದು ಸಾಮಾನ್ಯ ಸಮಸ್ಯೆಯಾಗುತ್ತಿದೆ.
  • ಅನೇಕರಿಗೆ ಪದೇ ಪದೇ ತಲೆನೋವು ಕಾಣಿಸುತ್ತಿರುತ್ತದೆ
  • 5 ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು.
ತಲೆ ನೋವಿಗೆ ಔಷಧಿ  ತೆಗೆದುಕೊಳಬೇಕಿಲ್ಲ !ಈ  ಆಹಾರ ಪದಾರ್ಥ ಸೇವಿಸಿದರೂ ಸಾಕು  title=

ಬೆಂಗಳೂರು : ತಲೆನೋವು ಇಂದು ಸಾಮಾನ್ಯ ಸಮಸ್ಯೆಯಾಗುತ್ತಿದೆ.ತಲೆನೋವು ಕಾಣಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳು ಇರಬಹುದು. ಅನೇಕರಿಗೆ ಪದೇ ಪದೇ ತಲೆನೋವು ಕಾಣಿಸುತ್ತಿರುತ್ತದೆ. ಸಾಮಾನ್ಯ ತಲೆನೋವು ಎಲ್ಲರಿಗೂ ಕಾಣಿಸಿಕೊಳ್ಳುತ್ತದೆ. ಆದರೆ ಈ ತಲೆನೋವನ್ನು ಸಹಿಸಿಕೊಳ್ಳುವುದು ಕಷ್ಟವಾದಾಗ ಜನರು ಪೈನ್ ಕಿಲ್ಲರ್ ಗಳನ್ನು ತೆಗೆದುಕೊಳ್ಳುತ್ತಾರೆ. 2-4 ತಿಂಗಳಿಗೊಮ್ಮೆ ನೋವು ನಿವಾರಕಗಳನ್ನು ಸೇವಿಸಿದರೆ, ಏನೂ ತೊಂದರೆಯಾಗುವುದಿಲ್ಲ. ಆದರೆ ಪ್ರತಿದಿನ ನೋವು ನಿವಾರಕಗಳನ್ನು ಸೇವಿಸಿದರೆ ತೊಂದರೆಯಾಗುತ್ತದೆ. ನೋವು ನಿವಾರಕಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಈ ಔಷಧಿಗಳ ದುಷ್ಪರಿಣಾಮಗಳಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ನಿಮಗೂ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ 5 ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು. 

ತಲೆನೋವಿಗೆ ಮನೆಮದ್ದು : 
1. ಶುಂಠಿ ಮತ್ತು ತುಳಸಿ ರಸ : 

ತೀವ್ರ ತಲೆನೋವಿನಿಂದ ತೊಂದರೆಗೀಡಾಗಿದ್ದರೆ, ತುಳಸಿ ಮತ್ತು ಶುಂಠಿಯ ರಸವನ್ನು ಬಳಸಬಹುದು. ಇದಕ್ಕಾಗಿ 10-15 ತುಳಸಿ ಎಲೆಗಳು ಮತ್ತು ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಪುಡಿಮಾಡಬೇಕು. ನಂತರ ಅದರ ರಸವನ್ನು ತೆಗೆದು ಹಣೆಯ ಮೇಲೆ ಹಚ್ಚಬೇಕು. ಈ ರಸದ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ನೋವು ಬೇಗನೆ ಗುಣವಾಗುತ್ತದೆ. ನೋವು ಅಸಹನೀಯವಾಗಿದ್ದರೆ ಈ ರಸವನ್ನು ಸೇವಿಸಬಹುದು. ಆದರೆ ಈ ರಸವನ್ನು 1 ಟೀಸ್ಪೂನ್ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಇದನ್ನೂ ಓದಿ : Test for cervical cancer: ಈ ಟೆಸ್ಟ್ ಮಾಡಿಸುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬಹುದು!

2.ಪುದೀನಾ ರಸ :
ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಪುದೀನಾ ನಮಗೆ ಔಷಧೀಯ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಪುದೀನ ಎಲೆಗಳ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಹಚ್ಚಬೇಕು. ಈ ರಸವನ್ನು ಹಚ್ಚುವುದರಿಂದ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

3. ಆಪಲ್  : 
ಹೌದು, ನಾವೆಲ್ಲರೂ ಸೇವಿಸುವ ಸೇಬು ನಮ್ಮ ತಲೆನೋವನ್ನು ಗುಣಪಡಿಸುತ್ತದೆ. ಔಷಧಿ ತೆಗೆದುಕೊಳ್ಳದೆ ತಲೆನೋವನ್ನು ನಿವಾರಿಸಬೇಕಾದರೆ ಸೇಬನ್ನು ಸೇವಿಸಬೇಕು. ಆದರೆ ನೆನಪಿರಲಿ ತಲೆ ನೋವಿನ ಪರಿಹಾರಕ್ಕೆ ಸೇಬು ಸೇವಿಸುವಾಗ ಸೇಬನ್ನು ಉಪ್ಪಿನೊಂದಿಗೆ ತಿನ್ನಬೇಕು. ತಲೆನೋವಿನಿಂದ ತ್ವರಿತ ಪರಿಹಾರ ಒದಗಿಸಲು ಇದು ಸಹಾಯ ಮಾಡುತ್ತದೆ. 

4. ಬಾದಾಮಿ :
ತಲೆನೋವಿನಿಂದ ಮುಕ್ತಿ ಪಡೆಯಲು ಬಾದಾಮಿಯನ್ನೂ ಸೇವಿಸಬಹುದು. 5-7 ಬಾದಾಮಿಯನ್ನು ಜಗಿದು ತಿಂದರೆ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಬಾದಾಮಿಯಲ್ಲಿ ಕಂಡುಬರುವ "ಸೆಲೆಸಿನ್" ಅಂಶವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹದಲ್ಲಿನ ಯಾವುದೇ ರೀತಿಯ ನೋವನ್ನು ನಿವಾರಿಸುತ್ತದೆ.

ಇದನ್ನೂ ಓದಿ : ಪೀರಿಯೇಡ್ಸ್ ನೋವು ಸೇರಿದಂತೆ ಮಹಿಳೆಯರ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ ಬಿಳಿ ಅರಶಿನ

5. ಆಪಲ್ ವಿನೆಗರ್ :
ರಾತ್ರಿ ಪಾರ್ಟಿಯಲ್ಲಿ ಅತಿಯಾದ ಮದ್ಯಪಾನದಿಂದ ಮರುದಿನ ಬೆಳಿಗ್ಗೆ ತಲೆನೋವಿನಿಂದ ತೊಂದರೆಗೊಳಗಾಗಿದ್ದರೆ, ಆಪಲ್ ಸೈಡರ್ ವಿನೆಗರ್ ಪ್ರಯತ್ನಿಸಬಹುದು. ಒಂದು ಲೋಟ ಬಿಸಿ ನೀರಿನಲ್ಲಿ 1-2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ, ಅದರಲ್ಲಿ 1 ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪಾನೀಯ ತಲೆನೋವಿನಿಂದ ಬೇಗನೆ ಪರಿಹಾರವನ್ನು ನೀಡುತ್ತದೆ.

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News