Cervical Cancer : ಪೂನಂ ಪಾಂಡೆ ಸಾವಿನ ಹಿಂದಿದೆ ಭಯಂಕರ ಕ್ಯಾನ್ಸರ್..! ಈ ರೋಗದ ಬಗ್ಗೆ ತಜ್ಞರು ಏನಂತಾರೆ..?

Cervical Cance symptoms : HPV ಎಂದು ಕರೆಯಲ್ಪಡುವ ಮಾನವ ಪ್ಯಾಪಿಲೋಮವೈರಸ್ನ ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ  ಕಂಡುಬರುತ್ತದೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ..

Written by - Krishna N K | Last Updated : Feb 2, 2024, 05:42 PM IST
  • ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿರುತ್ತದೆ.
  • ಗರ್ಭಕಂಠದ ಕ್ಯಾನ್ಸರ್ ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ.
  • ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಂಡರೆ ಸಮಸ್ಯೆಯನ್ನು ಹತೋಟಿಗೆ ತರಬಹುದು.
Cervical Cancer : ಪೂನಂ ಪಾಂಡೆ ಸಾವಿನ ಹಿಂದಿದೆ ಭಯಂಕರ ಕ್ಯಾನ್ಸರ್..! ಈ ರೋಗದ ಬಗ್ಗೆ ತಜ್ಞರು ಏನಂತಾರೆ..? title=

Poonam Pandey death reason : ಬಾಲಿವುಡ್ ನಟಿ ಪೂನಂ ಪಾಂಡೆ ಇಂದು ಬೆಳಗ್ಗೆ ಗರ್ಭಕಂಠದ ಕ್ಯಾನ್ಸರ್ನಿಂದ ವಿಧಿವಶರಾಗಿದ್ದಾರೆ. ಕೇವಲ 32 ವಯಸ್ಸಿಗೆ ಪೂನಂ ಪಾಂಡೆ ಕ್ಯಾನ್ಸರ್ಗೆ ಬಲಿಯಾಗಿರುವುದು ಬೇಸರದ ಸಂಗತಿ. ಏನಿದು ಗರ್ಭಕಂಠದ ಕ್ಯಾನ್ಸರ್? ಒಂದು  ವೇಳೆ ಈ ಕ್ಯಾನ್ಸರ್ ಆವರಿಸಿದರೆ ಲಕ್ಷಣಗಳು ಗೋಚರಿಸೋದೆ ಇಲ್ವಾ?  ಇದನ್ನು ತಡೆಗಟ್ಟಬಹುದೇ? ಈ ಕುರಿತು ವೈದ್ಯರು ಹೇಳೋದೇನು ಎಂದು ತಿಳಿಯೋಣ.

ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. HPV ಎಂದು ಕರೆಯಲ್ಪಡುವ ಮಾನವ ಪ್ಯಾಪಿಲೋಮವೈರಸ್ನ ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಂಡರೆ ಸಮಸ್ಯೆಯನ್ನು ಹತೋಟಿಗೆ ತರಬಹುದು ಎಂದು ಹೇಳುತ್ತಾರೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಸ್ರೀರೋಗ ತಜ್ಞೆ  ಡಾ. ಶ್ರೀಜಾ ರಾಣಿ ವಿ.ಆರ್.

ಇದನ್ನೂ ಓದಿ:ಖ್ಯಾತ ಬಾಲಿವುಡ್‌ ನಟಿ ಪೂನಂ ಪಾಂಡೆ ಹಠಾತ್ ನಿಧನ..!

ಕ್ಯಾನ್ಸರ್ ಸಂಭವಿಸುವ ಮುನ್ನ ಗರ್ಭಕಂಠದಲ್ಲಿ ಆಗುವ ಬದಲಾವಣೆಗಳನ್ನು ಸ್ಕ್ರೀನಿಂಗ್ ಮೂಲಕ ಮಾತ್ರವೇ ಪತ್ತೆಹಚ್ಚಲು ಸಾಧ್ಯ. ಗರ್ಭಕಂಠದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ರಮೇಣವಾಗಿ ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು ಕಂಡುಬರುತ್ತದೆ. ಕ್ಯಾನ್ಸರ್ ತೀವ್ರತೆಯು ಗಾತ್ರ, ಹರಡುವಿಕೆ ಮತ್ತು ಒಟ್ಟಾರೆ ಆರೋಗ್ಯದಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೈದ್ಯೆ ಡಾ. ಶ್ರೀಜಾ ರಾಣಿ ಹೇಳಿದ್ದಾರೆ.  

ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು? : ಗರ್ಭಕಂಠದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಯೋನಿಯಲ್ಲಿ ರಕ್ತಸ್ರಾವ, ಸಂಭೋಗದ ಸಮಯದಲ್ಲಿ ನೋವು, ಹೊಟ್ಟೆಯ ಕೆಳಭಾಗದಲ್ಲಿ ಅಸಹಜತೆ ಕಂಡುಬಂದಲ್ಲಿ ನಿರ್ಲಕ್ಷಿಸಬಾರದು ಎಂದು ವೈದ್ಯೆ ಶ್ರೀಜಾ ತಿಳಿಸಿದ್ದಾರೆ. 

ಇದನ್ನೂ ಓದಿ:ಮೊಸರು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ..? ತಪ್ಪದೇ ತಿಳಿಯಿರಿ

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಕ್ರಮಗಳೇನು ? : ಗರ್ಭಕಂಠದ ಕ್ಯಾನ್ಸರ್ ಅನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ಮಾತ್ರ ತಡೆಗಟ್ಟಲು ಸಾಧ್ಯ. ಹೀಗಾಗಿ ೨೫ ರಿಂದ ೬೪ ವರ್ಷ ವಯೋಮಿತಿಯೊಳಗಿನ ಮಹಿಳೆಯರಲ್ಲಿ ನಿಯಮಿತ ಪ್ಯಾಪ್ಸ್ಮಿಯರ್ (Pap Smear Test) ಅಥವಾ ಹೆಚ್ಪಿವಿ ಟೆಸ್ಟಿಂಗ್ (HPV Testing) ಪರೀಕ್ಷೆಗಳ ಮೂಲಕ ಮಾತ್ರ ರೋಗಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಬಹುದು. ಆದಾಗ್ಯೂ ೧೨ ರಿಂದ ೧೩ ವರ್ಷ ವಯೋಮಿತಿಯ ಮಕ್ಕಳಿಗೆ ಹೆಚ್ಪಿವಿ ಲಸಿಕೆ ನೀಡುವ ಮೂಲಕವೂ ಹೆಚ್ಪಿವಿ ಪ್ರೇರಿತ ಕ್ಯಾನ್ಸರ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಡಾ. ಶ್ರೀಜಾ ರಾಣಿ ಸಲಹೆ ನೀಡಿದ್ದಾರೆ. 

ವೈದ್ಯಕೀಯ ವಿಚಾರಗಳ ಹೊರತಾಗಿಯೂ ನೀವು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕವೂ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.  ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್ಗಳು HPVಯಿಂದ ಉಂಟಾಗುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹರಡುವ ಸಾಮಾನ್ಯ ವೈರಸ್. ಈ ಹಿನ್ನೆಲೆಯಲ್ಲಿ HPV ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಕಾಂಡೋಮ್ಗಳನ್ನು ಬಳಸುವುದು, ಧೂಮಪಾನವನ್ನು ತ್ಯಜಿಸುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಎಂದು ಡಾ. ಶ್ರೀಜಾ ರಾಣಿ ಶಿಫಾರಸು ಮಾಡುತ್ತಾರೆ. 

ಇದನ್ನೂ ಓದಿ:ಪೃಥ್ವಿ ಶಾಮನೂರು ಈಗ ಉತ್ತರ ಕರ್ನಾಟಕದ ʼಉಡಾಳʼ.. ಚಿತ್ರಕ್ಕೆ ಶುಭ ಹಾರೈಸಿದ ಡಾಲಿ ಧನಂಜಯ!

ಜನರಲ್ಲಿ ಅರಿವು ಮೂಡಿಸುವುದು ಅಗತ್ಯ : ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಜನರಲ್ಲಿ ಅರಿವು ಮೂಡಿಸುವುದು ಮತ್ತು ಪೂರ್ವಭಾವಿ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ ಮಾತ್ರ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟು ಸಾಧ್ಯ ಎಂದು ವೈದ್ಯೆ ಡಾ. ಶ್ರೀಜಾ ರಾಣಿ ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News