Health Benefits of Pumpkin: ಬೊಜ್ಜು ಕರಗಿಸಬೇಕೆ? ನಿಯಮಿತವಾಗಿ ಕುಂಬಳಕಾಯಿ ಸೇವಿಸಿ, ಸಿಗಲಿವೆ ಹಲವು ಲಾಭಗಳು

Health Benefits of Pumpkin: ಸ್ಥೂಲಕಾಯ (Obesity), ಮಾನವನ ದೇಹವನ್ನು ಕ್ರಮೇಣವಾಗಿ ಅಸಹಾಯಕನನ್ನಾಗಿಸುವ ಒಂದು ಕಾಯಿಲೆ. ಸ್ಥೂಲ ಕಾಯದ ಕಾರಣ ನಮ್ಮ ದೇಹ ಇತರ ಕಾಯಿಲೆಗಳಿಗೆ ಮನೆಯಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ (Lifestyle Disease) ಮತ್ತು ದೈಹಿಕ ಚಟುವಟಿಕೆಗಳ ಕೊರತೆಯ ಹಿನ್ನೆಲೆ ಈ ಬೊಜ್ಜು (Fat) ನಮ್ಮ ದೇಹವನ್ನು ಸೇರುತ್ತದೆ.

Written by - Nitin Tabib | Last Updated : Sep 1, 2021, 02:58 PM IST
  • ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಬೊಜ್ಜು ಹೆಚ್ಚುತ್ತಿದೆ.
  • ಕೊತ್ತಂಬರಿ ಬೀಜಗಳನ್ನು ತಿನ್ನುವುದರಿಂದ ಆಗುವ ಲಾಭಗಳು ಇವು
  • ವೇಗವಾಗಿ ಜೀರ್ಣವಾಗುವ ಆಹಾರ ಎಂದರೆ ಅದು ಪಂಪ್ಕಿನ್.
Health Benefits of Pumpkin: ಬೊಜ್ಜು ಕರಗಿಸಬೇಕೆ? ನಿಯಮಿತವಾಗಿ ಕುಂಬಳಕಾಯಿ ಸೇವಿಸಿ, ಸಿಗಲಿವೆ ಹಲವು ಲಾಭಗಳು title=
Health Benefits of Pumpkin (File Photo)

ನವದೆಹಲಿ: Health Benefits of Pumpkin - ಸ್ಥೂಲಕಾಯ, ಮಾನವನ ದೇಹವನ್ನು ಕ್ರಮೇಣವಾಗಿ ಅಸಹಾಯಕನನ್ನಾಗಿಸುವ ಒಂದು ಕಾಯಿಲೆ. ಸ್ಥೂಲ ಕಾಯದ ಕಾರಣ ನಮ್ಮ ದೇಹ ಇತರ ಕಾಯಿಲೆಗಳಿಗೆ ಮನೆಯಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯ ಹಿನ್ನೆಲೆ ಈ ಬೊಜ್ಜು ನಮ್ಮ ದೇಹವನ್ನು ಸೇರುತ್ತದೆ.

ದೈಹಿಕ ಚಟುವಟಿಕೆಗಳ (Physical Exercise)ಕೊರತಯಿಂದ ಸ್ಥೂಲಕಾಯದ ಸಮಸ್ಯೆ 
ದಿನದಿಂದ ದಿನಕ್ಕೆ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ, ಇದೀಗ ಜನರ ದೈಹಿಕ ಚಟುವಟಿಕೆ ಬಹಳಷ್ಟು ಕಡಿಮೆಯಾಗಿದೆ. ಆದರೆ ಆಹಾರದ ಗುಣಮಟ್ಟ ಹೆಚ್ಚಾಗಿದೆ. ಈ ಕಾರಣದಿಂದಾಗಿ ಜನರು ಉತ್ತಮ ಆಹಾರವನ್ನು ತಿನ್ನುತ್ತಿದ್ದಾರೆ. ಆದರೆ ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಫಲಿತಾಂಶವು ಹೊಟ್ಟೆ ಕಾಣಿಸಿಕೊಳ್ಳುವುದು  ಅಥವಾ ಸ್ಥೂಲಕಾಯದ ಸಮಸ್ಯೆ ಕಂಡುಬರಲಾರಂಭಿಸೈಡ್.  ಕೊರೊನಾ ಅವಧಿಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ಕುಂಬಳಕಾಯಿ ಸೇವನೆಯಿಂದ ಸಿಗುತ್ತದೆ ಲಾಭ
ಇಂದು ನಾವು ನಿಮಗೆ ದೇಹದ ಬೊಜ್ಜು ಕರಗಿಸುವ ಸುಲಭ ವಿಧಾನವೊಂದನ್ನು ಹೇಳಲಿದ್ದೇವೆ. ಇದಕ್ಕಾಗಿ ಕೇವಲ ನೀವು ಮಾದಬೇಕಾದದಿಷ್ಟೇ. ನಿಮ್ಮ ತಟ್ಟೆಯಲ್ಲಿ ಕುಂಬಳಕಾಯಿಯನ್ನು ಸೇರಿಸಬೇಕು. ಸಿಲಾಂತ್ರೋ ಅಥವಾ ಪಂಪ್ಕಿನ್ ಸೇವನೆಯ ಹಲವು ಲಾಭಗಳಿವೆ. ಇದು ಜೀವನಸತ್ವಗಳು ಮತ್ತು ಖನೀಜಗಳ ಆಗರವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವುದಿಲ್ಲ. ಕುಂಬಳಕಾಯಿ ಸೇವನೆಯ ಇತರ ಲಾಭಗಳ ಕುರಿತು ಕೂಡ ತಿಳಿದುಕೊಳ್ಳೋಣ ಬನ್ನಿ.

ಮಲಬದ್ಧತೆಯಿಂದ ಬಳಲುತ್ತಿರುವ ಜನರು ನಿತ್ಯ ಕೊತಂಬರಿ ಬೀಜಗಳನ್ನು (Coriander Seed Helth Benefits) ಸೇವಿಸಬೇಕು.  ಈ ಬೀಜಗಳಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಅಥವಾ ನಾರಿನಂಶ ಇರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ, ಮಲಬದ್ದ್ಧತೆಯಿಂದಲೂ ಕೂಡ ಪರಿಹಾರ ಒದಗಿಸುತ್ತದೆ.

ಇದನ್ನೂ ಓದಿ- Sprouts for Diabetes: 'ಮಧುಮೇಹಿ'ಗಳಿಗೆ ತುಂಬಾ ಪ್ರಯೋಜನಕಾರಿ ಈ ಮೂರು ಮೊಳಕೆ ಕಾಳುಗಳು!

ಊಟ ಬೇಗ ಜೀರ್ಣವಾಗುತ್ತದೆ
ಕುಂಬಳಕಾಯಿಯಲ್ಲಿರುವ ಫೈಬರ್ ಮತ್ತು ವಿಟಮಿನ್ ಗಳು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದಲ್ಲದೆ ಇದನ್ನು ತಿನ್ನುವುದರಿಂದ ಚರ್ಮವು ಬಲಿಷ್ಠ ಮತ್ತು ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ  ಫೈಬರ್‌ನಿಂದಾಗಿ, ಆಹಾರವು ಬೇಗನೆ ಜೀರ್ಣವಾಗುತ್ತದೆ.

ಕುಂಬಳಕಾಯಿಯಲ್ಲಿ ವಿಟಮಿನ್ ಎ ಮತ್ತು ಸಿ ಅಧಿಕವಾಗಿದ್ದು, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ, ಕಬ್ಬಿಣ ಮತ್ತು ಫೋಲೇಟ್ ಕೂಡ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಇದನ್ನೂ ಓದಿ-Herbal Body Wash: ಚರ್ಮ ಸುಂದರವಾಗಿರಲು ಸಾಬೂನಿಂದಲ್ಲ ಈ ವಸ್ತುವನ್ನು ಬಳಸಿ ಸ್ನಾನ ಮಾಡಿ

ಜೀವಕೋಶಗಳ ಹಾನಿ ತಪ್ಪಿಸುತ್ತದೆ
ಕುಂಬಳಕಾಯಿಯಲ್ಲಿ  ಆ್ಯಂಟಿಆಕ್ಸಿಡೆಂಟ್‌ಗಳಾದ ಆಲ್ಫಾ ಕ್ಯಾರೋಟಿನ್, ಬಿಟಿ ಕ್ರಿಪ್ಟೋಕ್ಸಾಂಥಿನ್ ಮತ್ತು ಇತರ ಹಲವು ಅಂಶಗಳಿವೆ. ಇದು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ.

ಕುಂಬಳಕಾಯಿಯಲ್ಲಿ ವಿಟಮಿನ್ ಎ, ಲುಟಿನ್ ಮತ್ತು ಜಿಯಾಕ್ಸಾಂಥಿನ್ ಇರುತ್ತದೆ. ಇದು ಕಣ್ಣಿನ ದೃಷ್ಟಿಗಾಗುವ ಹಾನಿಯನ್ನು ತಪ್ಪಿಸುತ್ತದೆ. ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಇದು ಸಾಮಾನ್ಯವಾಗಿದೆ. ಇದು ಬೀಟಾ ಕ್ಯಾರೋಟಿನ್ ನ ಉತ್ತಮ ಮೂಲವಾಗಿದೆ. ಇದು ಕ್ಯಾರೊಟಿನಾಯ್ಡ್ ಆಗಿದ್ದು, ಇದನ್ನು ನಮ್ಮ ಶರೀರ ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ.

ಇದನ್ನೂ ಓದಿ-Weight Loss: ತ್ವರಿತ ತೂಕ ನಷ್ಟದ ಅನ್ವೇಷಣೆಯಲ್ಲಿ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡದಿರಿ, ವಾರದಲ್ಲಿ ಇಷ್ಟು ಮಾತ್ರ ತೂಕ ಇಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News